ಶನಿವಾರ, ಜುಲೈ 7, 2012



ನನ್ನ ಕವನ ನನ್ನ ಹಾಡು

ನಮಸ್ಕಾರ..... ಎಲ್ಲರೂ ಅವರವರ ಭಾವೆನೆಗೆ ತಕ್ಕಂತೆ ಕವನಗಳನ್ನು ಬರೆಯುತ್ತಾರೆ....ಇದು ನನ್ನ ಭಾವನಾತ್ಮಕ ಲೋಕ.
ನೋಡಿ ಹಾರೈಸಿ....ತಪ್ಪಿದ್ದಲ್ಲಿ ತಿದ್ದಿಸಿ..ನಾನು ಬರೆದಿರುವುದು ಬರಿ ಬರಹಗಳೆಷ್ಟೇ....ಇವು ಕವನ ಎಂದು ನನಗೆ ತಿಳಿಯಬೇಕಾದರೆ
ನಿಮ್ಮ ಅಭಿಪ್ರಾಯ ತುಂಬಾ ಮುಖ್ಯ.... ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ನನ್ನ ಬರಹಗಳನ್ನು ಹೆಸರಿಸಿ
ಇದು ನನ್ನ ಹಾಡು ನನ್ನ ಕವನ ......... ಒಲವೆ ಜೀವನ     

                                      ಬೆಂಬಲವೆ ಗುರು
                                      ಬೆಂಬಲಿಗರೆ ನನಗೆ ಗುರು
                                      ನನ್ನ ಕವನಗಳನ್ನು ಬೆಂಬಲಿಸಿ
                                      ಗುರುವಿನ ಪೀಠ ಅಲಂಕರಿಸಿ
                                      ಗುರು ದೇವೋ ಭವ!


(1)ನೆನಪು,ಕನಸುಗಳನ್ನೇರಿ ಸಾಗುತ್ತಿದೆ ಜೀವನದ ಸವಾರಿ

ತಾಯಿಯ ಋಣ ತೀರಿಸಲಾಗದು,ಬಾನಿಗೆಂದೂ ಕಲ್ಲು ಹೊಡೆಯಲಾಗದು..
ಕಳೆದು ಹೋದ ಶಾಲಾ ದಿನಗಳು ಮತ್ತೆ ಸಿಗದು....ಅವು ಕನಸುಗಳು, ಇವು ನೆನಪುಗಷ್ಠೆ ನಮ್ಮ ಜೀವನಕ್ಕೆ ಸಿಕ್ಕ ದೊಡ್ಡ ಪ್ರತಿಷ್ಠೆ....


ಆನೆಗಳ ಗುಂಪು ಚದುರಿಸುವ ಪ್ರಯತ್ನ ಬೇಡ
ಮನಸ್ಸಲ್ಲಿ ಕೆಟ್ಟದ್ದನ್ನು ಎಂದೂ ಯೋಚಿಸಬೇಡ
ಕೋಗಿಲೆಗೆ ಸಮನಾಗಿ ಹಾಡುವಾಸೆಯೇ ನಿನಗೆ
ಎಂದೂ ಆಗದು ಕಲ್ಲು ಹೊಡೆಯಲು ಬಾನಿಗೆ.

ನೂರು ಜನ್ಮ ಹುಟ್ಟಿಬಂದರು ತೀರಿಸಲಾಗಲಿಲ್ಲ ತಾಯಿ ಋಣ
ತಾಯಿಯೇ ದೇವರು ಇದು ದೊಡ್ಡವರ ಮಾತಣ್ಣ
ಹೃದಯವೆಂಬ ಹಾಸಿಗೆಯಲಿ ಮಾಡದಿರು ನಿದ್ದೆ
ಮಾಡಿದರೆ ನಿದ್ದೆ, ಏಳಾಲಾಗದೆಂದೂ ಓ ಪೆದ್ದೆ.

ಎಷ್ಟು ಹುಡುಕಿದರು ಮತ್ತೆ ಮತ್ತೆ ಸಿಗದು ಶಾಲಾ ದಿನ
ಅದು ಪ್ರತಿಯೊಬ್ಬರ ಜೀವನದಲ್ಲೂ ಚಿನ್ನದ ಕ್ಷಣ
ಎಂದೆಂದೂ ಮಾಡದಿರು ಸಮಯವನು ವ್ಯರ್ಥ
ಅದು ಕೂಡ ವಹಿಸಿದೆ ಬದುಕಲಿ ಪ್ರಮುಖ ಪಾತ್ರ.|

                             ಸೋಮೇಶ್ ಗೌಡ
(2) ಹುಚ್ಚು ಹುಡುಗನ ಮೆಚ್ಚುವಂತ ಪ್ರೀತಿ 



ನನ್ನ  ಒಲವನು ನಿನ್ನ ಹೆಸರಲಿ ಬರೆದಾಗಿದೆ ಈ ಮನ,
ನೀ ಇಲ್ಲದೇ ಇರಲಾರೆ ನಾ ಒಂದು ಕ್ಷಣ,
ಒಲವೆ ಜೀವನ ಆ ಜೀವವೇ ನೀನೇನಾ,
ನಿನ್ನ ಈ ಪ್ರೀತಿನ ನಾ ಮರೆಯಲು ಸಾಧ್ಯಾನ.

ನನ್ನ ಈ ನಗೂವಿಗೂ ನಿನ್ನ ಈ ಪ್ರೀತಿಯೇ ಕಾರಣ
ನೀ ಪ್ರೀತಿಸಿ ನನ್ನ,  ಎಲ್ಲಿ ಹೋದೆ ನೀ ಈ ದಿನ,
ಬಾರೆ ಗೆಳತಿಯೇ ನಾ ಹುಡುಕಲಾರೆ ನಿನ್ನ,
ಈ ಬದುಕನು ನಿನಗಾಗಿ ಅರ್ಪಿಸುವೆ ಓ ಚಿನ್ನ.

ನೀನು ಇಲ್ಲದೇ ನಾನೇಗೆ ಕಳೆಯಲಿ ಈ ದಿನ,
ಓ ಪ್ರೇಮವೇ ನೀ ಕೊಂಧೆಯಲ್ಲೇ ನನ್ನ,
ನಿನ್ನ  ಉಸಿರಲ್ಲೂ ಬಂದು ಕಾಡುವೆ ನಾ ನಿನ್ನ,
ಬಿಡೆನು ನಿನ್ನನು ನೀ ಮರೆತರು ನನ್ನ.

ಓ ಮನವೇ ಇಂದು ಬಾಡಿಹೋಯ್ತು ನನ್ನ ಈ ಪ್ರೇಮ,
ನನ್ನ ಈ ಕ್ಷಣ ಇಂದು ನನಗೂ ಬೇಡವಾಯ್ತು ಈ ದಿನ,
ಓ ದೇವರೇ ಇದೆಲ್ಲಾ ನೀ ಮಾಡಿದ ಕುತಂತ್ರಾನ!
ಅಂತೂ ಮುಗಿಸಿದೆ ನನ್ನ ಈ  ಹುಚ್ಚು ಪ್ರೀತಿನಾ......

                              ಸೋಮೇಶ್  ಗೌಡ.

(3)ತಾಯಿಯೆಂಬ ಕಲ್ಪವೃಕ್ಷ 


ನಾನೊಂದು ಮರವಾಗಿ  ನಿನ್ನೆದುರು ಜಾಲಿ ಗಿಡವಾದೆ

ನೀ ನಕ್ಕಾಗೆಲ್ಲಾ ನಾ ಬುಸುಗುಡುವ ಹಾವಾದೆ

ನಿನ್ನ ಸುಖವ ಬಯಸದ ನಾನು ಪಾಪಿಯಾದೆ

ನೀ ಅರಿತರು ನನ್ನ  ನಾ ಅರಿಯಲಿಲ್ಲ ನಿನ್ನ

ಅದಕ್ಕೀಗ ಎಣಿಸುತ್ತಿರುವೆ ನನ್ನ ಪಾಪದ ದಿನಗಳನ್ನ

ಹೇಳು ಮಾತೆ ನನಗೆ ಯಾವಾಗ ಮುಕ್ತಿ

ನೀ ಹೇಳುವ ನುಡಿಯಿಂದ ನನಗೆ ಬರುವುದು ಸ್ಪೂರ್ತಿ|

                                            ಸೋಮೇಶ್ ಗೌಡ
(4)ಅರಿತು ಮಾಡುವುದಾದರೂ ಏನು ? 



ನನ್ನ ಒಳಗೆ ಒಳಗೊಳಗೆ ಆಗುತ್ತಿದೆ ಏನೋ ಕಸಿವಿಸಿ
ಹೇಳಲಾರೆನು ನಾ, ಹೇಳಿದರೇಕೆ ಈ ಬಿಸಿಬಿಸಿ

ನನ್ನ ಒಡಲೊಳಗ್ಯಾರೋ  ಇಟ್ಟ0ತಾಗುತ್ತಿದೆ ಕಚಗುಳಿ
ಯಾರೆಂದು ಕೇಳಿದರೆ ಇದ್ದಕ್ಕಿದಂತೆ ಮೈಯೆಕೋ ಚಳಿಚಳಿ


ಅಡುಗೆಮನೆಯಿಂದ ಬರುತ್ತಿತ್ತು ವಾಸನೆಯು ಘಮಘಮ
ಏನೆಂದು ನೋಡುವಷ್ಟರಲ್ಲಿ ಕಿವಿಗೆ ಬಿತ್ತು ಅಮ್ಮನ ಸರಿಗಮ


ನಾ ಅರಿಯನು ಇದನು ,ನಾ ಅರಿಯನು ಇದನು
ಅರಿತು ಮಾಡುವುದಾದರೂ ಏನು ? 

                                       ಸೋಮೇಶ್ ಗೌಡ

(5)  ಸ್ನೇಹ ಪಾಠ

ಸಂಗ ಮಾಡಬೇಕಯ್ಯ ಸಂಗ  ನೀ ಮಾಡು ಸಜ್ಜನರ ಸಂಗ 
ಮಾಡಿ ದುರ್ಜನರ ಸಂಗ ನಿನ್ನ ಹೆಸರಿಗೆ ತಂದುಕೊಳ್ಳದಿರು ಭಂಗ
ಇದು ದೊಡ್ಡವರು ಹೇಳಿದ ಮಾಣಿಕ್ಯ
ಚಾಚೂ ತಪ್ಪದೇ ಪಾಲಿಸು ನಿನಗೆ ಸಿಗುವುದಾಗ ಸೌಖ್ಯ
ನಿನ್ನ ಸುಖವ ಕಂಡು ಪರರು ಮರುಗದಿರಲಿ
ನಿನ್ನ ದುಃಖವ ಕಂಡು ಯಾರೊಬ್ಬರೂ  ಹೀಯಾಳಿಸದಿರಲಿ
ನಿನ್ನ ನಂಬಿದವರಿಗೆ ನೀನಾಗು ರಕ್ಷಕ
ನೀನಾಗ ಮನೆಗೊಬ್ಬ ಶಿಕ್ಷಕ.|

                                             ಸೋಮೇಶ್ ಗೌಡ
(6)ಸ್ಪರ್ಧೆ ಇರಲಿ  ಜೀವನದಲ್ಲಿ

ಬಲ್ಲವರಾರು ಬಲ್ಲಿದಾರಾಟವ
ಬಣ್ಣಿಸಲಾಗದು ಅವರ ಮಾಟವ
ಮಂತ್ರಕು ಒಂದು ತಿರುಮಂತ್ರ ಇರುವುದು
ತಂತ್ರದಿ ಕಾರ್ಯವ ಮುಗಿಸುವುದು 

ಇದೆಲ್ಲವೂ ಅವರ ನಿತ್ಯದ ಜೀವನ
ಬದುಕಲು ಬೇಕು ತಂತ್ರದ ಸಾದನ
ಫ್ಯಾಶನ್ ಕ್ರಿಯೇಶನ್ ಈ ಜಗತ್ತಿನಲ್ಲಿ
ಬಡವರ ಗೋಳು ಕೇಳುವರು ಯಾರಿಲ್ಲಿ

ಸ್ಪರ್ಧೆ ಇರಲಿ  ಜೀವನದಲ್ಲಿ
ಅಸೂಯೆ ಹೊಟ್ಟೆಹುರಿ ಯಾಕಿಲ್ಲಿ
ಒಲವೆ ಜೀವನ ಬದುಕೇ ಪಯಣ
ಇರುವಷ್ಟು ದಿನ ಜಾಲಿಯಾಗಿ ಬದುಕ್ ಬಿಡೋಣ.|

                   ಸೋಮೇಶ್ ಗೌಡ
(7)ಚಂದದ ಅರಮನೆ

ಚಂದದ ಅರಮನೆಯಲ್ಲಿ
ಬೆಲ್ಲ ಸಕ್ಕರೆಯಿಲ್ಲ
ಮನೆ ಕಾಯೋ
ಆಳಿಗಂತೂ ಕೊರತೆಯಿಲ್ಲ

ಬಣ್ಣ ಬಳಿದರು ಏನು
ಕಷ್ಟ ಮುಗಿಯುವುದಿಲ್ಲ

ಉಕ್ಕಿನ ಮನುಜನಿಗೂ
ಅಪಾಯ ತಪ್ಪಿದಲ್ಲ
ಎಚ್ಚರ ತಪ್ಪಿದರೆ
ಮೇಲೇಳಲು ಅವಕಾಶವಿಲ್ಲ

ಕೊಬ್ಬಿದ ಹಾವನ್ನು
ಬಗ್ಗಿಸುವವರಿಗೆ ಬರವಿಲ್ಲ
ಇನ್ನೊಬ್ಬರನ್ನು ಹಿಗ್ಗಿಸುವ
ಪ್ರಯತ್ನ ಪೂರ್ಣಗೊಳ್ಳುತ್ತಿಲ್ಲ.|

ಇದು ಸಮಾಜದ ಸತ್ಯ ನಡೆಯುತ್ತಿದೆ ನಿತ್ಯ

                   ಸೋಮೇಶ್ ಗೌಡ 

(8)ಪ್ರೀತಿ ಪ್ರಯಾಣ


 ಜೊತೆ ಜೊತೆಯಲಿ ಹೆಜ್ಜೆ ಹಾಕುತ್ತಾ ನಾವು ನಡೆದಂತೆ
 ಭಾಸವಾಯಿತೆನೆಗೆ  ತುಟಿಯಂಚಿನಿಂದ ನೀನೇನೋ ನುಡಿದಂತೆ
 ಅರ್ಥವಾಯಿತೆನೆಗೆ ನಿನ್ನ ಆ ನುಡಿ
 ಮೊದಲು ನಾ ಕೊಡುವ ಈ ಮಲ್ಲಿಗೆಯ ಮುಡಿ

 ವ್ಹಾ ವ್ಹಾ ನಾನೇಗೆ ವರ್ಣಿಸಲೀಗ ನಿನ್ನ ಜಡೆಯ ಅಂದ
 ಸೂಸುತಿಹುದು ನೀ ಮೂಡಿದ ಮಲ್ಲಿಗೆಯ ಸೌಗಂಧ 
 ನಿನ್ನ ಮುಡಿಗಾಗೆ ಬೆಳೆದ ಹೂವದು 
ಅದಕ್ಕೆ ಬೇಡವೆಂದರೂ ಪರಿಮಳ ಸೂಸುತಿಹುದು.|


ಜೊತೆಗಾತಿ ನಿನ್ನ ಜೊತೆ ನಾ ವಿಹರಿಸುತ್ತಿರಲು
ಸೂರ್ಯನೇ ನಾಚಿ ಮೋಡದ ಹಿಂದೆ ಅವಿತಿಹನು
ನಿಶ್ಚಲ ಪ್ರೀತಿಗೆ ಗಾಳಿಯೇ ಸಂಗೀತ ನುಡಿಸುತ್ತಿರಲು
ನಿನ್ನ ನೋಡುತ್ತಾ ನಾ ಮೈಮರೆತಿಹೆನು|




                                      ಸೋಮೇಶ್ ಗೌಡ
(9)ನಮ್ಮ ನಾಡು ನಮ್ಮ ಹೆಮ್ಮೆ ನಮ್ಮ ಕನ್ನಡ


 ಪ್ರತಿಯೊಬ್ಬರಿಗೂ ತನ್ನ ಭಾಷೆಯ ಬಗ್ಗೆ ಅವರದೇ ಆದ ಗೌರವ ಇರುತ್ತದೆ. ಇದು ನಾ ನಮ್ಮ ಕನ್ನಡಮ್ಮನಿಗೆ ಕೊಡುವ    ಗೌರವ......
     
   

ಕಂಡೇನಾ ಪ್ರೀತಿಯ ಕನ್ನಡಾ0ಬೆಯ
ಹೇಗೆ ವರ್ಣಿಸಲಿ ನಾ ಅವಳ ಭಾಷಾ ರೀತಿಯ
ಅದೃಷ್ಟವಿರಬೇಕು ಕರ್ನಾಟಕದಲ್ಲಿ ಹುಟ್ಟಿ ಬೆಳೆಯಲು
ಅಚ್ಚ ಮನಸ್ಸಿರಬೇಕು ಕನ್ನಡ ಭಾಷೆ ನುಡಿಯಲು


ನಾವೆಲ್ಲ ಕನ್ನಡಾ0ಬೆಯ ಮಕ್ಕಳು 
ನಮ್ಮ ಸ್ನೇಹಕ್ಕೆ ಬೇಗ ಒಲಿಯುತ್ತಾರೆ ಎಲ್ಲಾ ಪ್ರಜೆಗಳು
ಕನ್ನಡಕ್ಕಿದೆ ದೀರ್ಘಕಾಲದ ಇತಿಹಾಸ
ಪ್ರೀತಿಯಿಂದ ಎಲ್ಲರೂ ಮೆಚ್ಚಬೇಕು  ಕನ್ನಡ ಪದಗಳ ಪ್ರಾಸ.|


ಎಲ್ಲೆಲ್ಲಿ ನೋಡಿದರು ಹಚ್ಚ ಹಸಿರು
ಇದು ಕನ್ನಡಿಗರು ಕಾಪಾಡಿಕೊಂಡು ಬಂದ ಉಸಿರು
ಹಚ್ಚ ಹಸಿರಿನ ಮದ್ಯೆ ನಿಂತು ಹುಚ್ಚನಾದೆ ನಾನು
ನಿನ್ನ ಈ ಪ್ರಕೃತಿ ಸೌಂದರ್ಯಕೆ ಸೋಲದವನು ಯಾರಿನ್ನೂ.|



                                          ಸೋಮೇಶ್ ಗೌಡ

(10)ಬೇಜವಬ್ದಾರಿ ಗಂಡಸು
ಊರ ಸೊಗಸನರಿಯದವ ಪರರ ಮನಸ್ಸನ್ನ ಅರಿಯುವನೇನು
ತನ್ನ ಸಂಸಾರಕ್ಕೆನೀಡದ ಸುಖವ ತಾನು ಅನುಭವಿಸಿದರೇನು
ಅವನನ್ನೇ ಅವನರಿತಿಲ್ಲ ಇವನಂಬಿದವರ ಗತಿಯಿನ್ನೇನು
ಇಂಥವರಿಂದಲೇ ಭಾರತ ಬಡವಾಯಿತೀಗ
ಸ್ಪಂದಿಸು ನೊಂದವರ ಬೇಗೆಗಳಿಗೆ ಬೇಗ
ನೀನಾಗ ಜವಾಬ್ದಾರಿ ಗಂಡಸಿನ ಒಂದು ಭಾಗ.|

                              ಸೋಮೇಶ್ ಗೌಡ

(11) ಗುರಿ


ಪ್ರತಿಯೊಬ್ಬನ ಜೀವನದಲ್ಲಿ ಗುರಿ ಇರಲೇಬೇಕು, ಆ ಗುರಿ ಮುಟ್ಟಲು  ಏನೆಲ್ಲಾ ಮಾಡಬೇಕು.ಅದರ ಪುಟ್ಟ ಚಹರಿ .......... ಕೆಳಗೆ ತಿಳಿಯಿರಿ



ಪುಟ್ಟ ಪುಟ್ಟ ಮಕ್ಕಳೆಲ್ಲ ಹೆಜ್ಜೆ ಹಾಕಬೇಕು
ಹೆಜ್ಜೆಯಲ್ಲಿ ಗುರಿ ಮುಟ್ಟುವ ಛಲವಿರಬೇಕು
ಪ್ರೀತಿಯಿಂದ ನೀವು ಎಲ್ಲರ ಮನಸ್ಸ ಗೆಲ್ಲಬೇಕು
ನಿಮ್ಮ ನೋಡಿ ಇನ್ನೊಬ್ಬರು ಕಲಿಯಬೇಕು.


ಗಾಂಧಿ ತಾತ ಹುಟ್ಟಿದಂತ ದೇಶ ನಮ್ಮದು
ಇಲ್ಲಿ ಜಾತಿ ಬೇದವೆಂಬ ಕೀಳರಿಮೆಯಿಲ್ಲದು
ಬದುಕೆಂಬ ನಡಿಗೆಯಲಿ ಸಿಗದಿರಲಿ ಕಲ್ಲು ಮುಳ್ಳು
ಸಿಕ್ಕರೆ ಪರರಿಗೆ ಕಾಣದಂತೆ ಪಕ್ಕಕ್ಕೆ ತಳ್ಳು.


ಸಂಸಾರವೆಂಬ ಬಾವಿಯೊಳಗೆ ಈಜದಿರು ಬೇಗ
ಈಜ ಕಲಿತ ಮೇಲೆ ಸಂಸಾರಿಯಾಗು ಆಗ ನಿನಗೆ ಭೋಗ
ನೀ ಮಾಡೋ ಕೆಲಸದಲ್ಲಿರಲಿ ಒಂದು ಕನಸು
ಶ್ರಮಪಟ್ಟು ದುಡಿ ಅದಾಗುವುದಾಗ ನನಸು.|

                             ಸೋಮೇಶ್ ಗೌಡ

(12)ನಿದ್ದೆ 



ಬರಲಿಲ್ಲ ರಾತ್ರಿಯೆಲ್ಲಾ ನನಗೆ ನಿದ್ದೆ
ಎದ್ದೆ ಎದ್ದೆ ಎದ್ದೆ ನಲೈದು ಬಾರಿ ಎದ್ದೆ
ನಾಲ್ಕು ಗಂಟೆಗೆ ಸರಿಯಾಗಿ ಬಿದ್ದೆ
ಪಕ್ಕದವ ಕಾಲಕಿದ,ಅವನಿಗೂ ಒಂದು ಒದ್ದೆ.
ಆದರೂ ಬರಲಿಲ್ಲ ನನಗೆ ನಿದ್ದೆ, ಮತ್ತೆ ಎದ್ದೆ
ಅಷ್ಟರಲ್ಲಿ ಮೊಬೈಲ್ನಿಂದ ಅಲಾರಾಂ ಬಡಿಯಿತು 
ಆರು ಗಂಟೆಯಾಯ್ತು ಎದ್ದೆಳೊ.......ಪೆದ್ದೆ ಪೆದ್ದೆ ಪೆದ್ದೆ...!!!


                                   ಸೋಮೇಶ್ ಗೌಡ

(13)ದಾರವಿಲ್ಲದ ಸೂಜಿ


ನಿನಗಾಗಿ ನಾ ಬರುತ್ತಿದ್ದೆ ಅರಸಿ ಅರಸಿ
ಸುಳ್ಳ ಹೇಳಿ ನೀನು ಹೋಗುತ್ತಿದ್ದೆ ನನ್ನ ಕಾಯಿಸಿ
ಪತ್ರ ಬರೆದೆ ನಿನಗೆ ಪ್ರಕೃತಿಗೆ ಹೋಲಿಸಿ
ಅದಕ್ಕೆ ಪುಳಕಿತಳಾದ ನೀನು ಈಗ ನನ್ನ ಪಟ್ಟದರಸಿ

ಬೇರೆಯವರಿಗೆ ಕಣ್ಣುಕುಕ್ಕುವಂತೆ ನಡೆಯುತ್ತಿತ್ತು ನಮ್ಮ ಜೀವನ
ಇದ್ದಕ್ಕಿದಂತೆ ಮೆಲ್ಲನೆ ಕೇಳಿದಳು ರೇಷ್ಮೆ ಸೀರೇನಾ
ಕೊಡಿಸಲಾಗಲಿಲ್ಲ ನನ್ನಿಂದ, ಏಕೆಂದರೆ ಬಡವನು ನಾ
ಅದೊಂದೇ ಕಾರಣಕ್ಕೆ ಬಿಟ್ಟು ಹೋದವಳು ನನ್ನ

ನಂತರ ನಾ ಕಂಡದೆಲ್ಲ ಬರೀ ಗೋಳು
ದಾರವಿಲ್ಲದ ಸೂಜಿಯಂತಾಯ್ತು ನನ್ನ ಬಾಳು
ನಾ ಮಾಡಿದ ತಪ್ಪಾದರೂ ಏನು  ಹೇಳು
ಹೀಗೆಂದು ಚುಚ್ಚುತ್ತಿದೆ ಮನಸಲ್ಲಿ ಇನ್ನೂ ಒಂದು ಮುಳ್ಳು.|
                             
                                    ಸೋಮೇಶ್ ಗೌಡ    


(14) ಕಪಟ


ಗುಡಿಯ ಬಾಗಿಲ ಮುಂದೆ ನಿಂತು
ಗಡಿಯಾಚೆ ದಬ್ಬಿದಂತೆ...
ನೀನೇಕೆ ಕಟ್ಟುತ್ತಿರುವೆ ಸುಳ್ಳಿನ ಕಂತೆ
ಮಗುವೆ ಇಲ್ಲಿ ಯಾರೊಬ್ಬರು ಹಾಕಿಲ್ಲ ಹೂವಿನ ಸಂತೆ


ನೀ ಹೇಳುವ ಮಾತಿದೆ
ಹುಲಿಯೊಂದು ತಾನಾಗೇ ಬಂದು ಬಲೆಗೆ ಬಿದ್ದಂತೆ
ಆ ಹುಲಿಯ ಮಾಂಸವನ್ನು ಬ್ರಾಹ್ಮ್ಹಣನೊಬ್ಬ ಸುಲಿದು ತಿಂದತೆ
ಕುದುರೆ ನಡೆಯಲಾರದೇ ಆಕಾಸದಲ್ಲಿ ಹಾರಾಡಿದಂತೆ.


ಕಪಟ ಕಟ್ಟುವುದ ಬಿಡು
ನಾನು ಎಂಬ ಅಹಂಕಾರವನು ಮೊದಲು ಸುಡು
ಇದು ಸಾಹಿತ್ಯದ ಬೀಡು ಕನ್ನಡ ನಾಡು
ಇಲ್ಲಿ ಸತ್ಪ್ರಜೆಯಾಗಿ ಸದಾ ಉಸಿರಾಡು.|
                                
                  ಸೋಮೇಶ್ ಗೌಡ
(15) ಸಂಕಷ್ಟದಲ್ಲಿ ಸೊಸೆ


ನಾನೊಂದು ಗಿಳಿಮರಿಯಂತೆ
ನನ್ನರಿಯದ ಇವರು ಗಿಡುಗಗಳಂತೆ
ಏನ ಮಾಡಲಿ ನಾ ಏನ ಹೇಳಲಿ ನಾ
ಇದೆಲ್ಲಾ ನನಗೆ ಬಂದ ಗ್ರಹಚಾರ

ಇದನರಿಯದವರು ತಿಳಿಯುವವರೆಗೂ
ನಾ ಸುಮ್ಮನೇ ಹೆದರುತ ಇರಲೇನು
ನೀ ಹೇಳಯ್ಯ ನಿಜ ನುಡಿಯಯ್ಯ
ನಾ ಕೇಳಲು ಕಾಯುತ ಕುಳಿತಿರುವೆ

ಧೈರ್ಯವ ಮಾಡುತ ಕಾರ್ಯವ ಮುಗಿಸುತ
ದಿನ ಕಳೆಯಲು ನಾನಿರಲೇನು
ಹೀಗೇಕಾಯ್ತೋ ನೆಮ್ಮದಿ ಮುರಿದೋಯ್ತೋ 
ನಾನೀಗ ನಿರ್ಜೀವ ಗೊಂಬೆಯಂತೆ.|
               
                          ಸೋಮೇಶ್ ಗೌಡ
(16)      ಸ್ತ್ರೀ


ಕವಿತೆ ಬರೆಯುವವನ ಕೈಗೆಂದೂ ಪೆನ್ನಿನ ಕೊರತೆ ಬರದಿರಲಿ 
ಒಲೆ ಹಚ್ಚೋ ಬಾಲೆಗೆಂದೇ ಬಳೆ ಮೀಸಲಿರಲಿ
ಬರೆದವರಿಗೆಲ್ಲ ಬರುವುದಿಲ್ಲ ಕವಿಯೆಂಬ ಪಟ್ಟ
ಬಳೆತೊಟ್ಟವಳಿಗೆಂದೇ ದೇವರು ಸ್ತ್ರೀಎಂಬ ಹೆಸರಿಟ್ಟ


ಹೂ ಮುಡಿದು ನಡೆವಾಗವಳು ಬಾಗಿತು ಬಾಳೆದಿ0ಡು
ಹೂವ ಮುಡಿದಾಗವಳ ತುಂಬು ಸೌಂದರ್ಯವ ಕಂಡು
ಕಾದು ಕಾದು ಕುಳಿತಿತ್ತು ದುಂಬಿಯೊಂದು
ಅವಳು ಮುಡಿದ ಹೂವಿಂದ ರಸವನ್ನ ಹೀರಲೆಂದು


ಪ್ರಕೃತಿಗೆ ಸ್ತ್ರೀಯನ್ನು ಹೋಲಿಸಿದ ಕವಿಯು
ತುಂಬಿ ತುಳುಕುತ್ತಿತ್ತು ನೀರ, ತೆರೆದ ಬಾವಿಯು
ಆಕಾಶದಿಂದ ಹಾರಿಬಂತು ಹಕ್ಕಿಗಳ ಗುಂಪು
ಕೋಗಿಲೆಯ ನಾದದಿಂದ ಕಿವಿಗಾಯ್ತು ಇಂಪು.|


                             ಸೋಮೇಶ್ ಗೌಡ 
(17)ಅತಿಯಾಸೆ



ಮೆಟ್ಟಿಲುಗಳಂತೆ ಬದುಕಲ್ಲಿ ನೂರಾರು ಆಸೆ
ಮೇಲೇಳಲಿಲ್ಲ ಕೆಳಗೆಳಿಯಲಿಲ್ಲ
ನಿಂತ ಜಾಗವನ್ನಂತೂ ಬಿಟ್ಟು ಕದಲಲಿಲ್ಲ
ನೋಡುಗರ ಕಣ್ಣಿಗೆ ಹಬ್ಬದೂಟ ತಪ್ಪಿಸಲಿಲ್ಲ


ನನ್ನ ನೋಡಿ ಹೀಯಾಳಿಸದವರೊಬ್ಬರಿಲ್ಲ
ಏಕೆಂದರೆ ನನ್ನ ಆಸೆಗೆ ಮಿತಿಯಿರಲಿಲ್ಲ
ಇದುವರೆಗೂ ನಾನೇನು ಕಾಪಾಡಿಕೊಂಡಿಲ್ಲ
ದಾನ ಧರ್ಮವೇನುಂಬುದೇ ನನಗಿನ್ನೂ ಗೊತ್ತಿಲ್ಲ


ಜನರೆಲ್ಲಾ ನೋಡಿ ನನಗೆ ಹೇಳುವುದೊಂದೇ
ನೀನೆಂದೂ ಬರಲಾಗದು ಮುಂದೆ
ಕಾರಣ ನನ್ನಲ್ಲಿರುವ ಅತಿಯಾಸೆಯೊಂದೇ
ಅವರಿಗೇನು ಗೊತ್ತು ನಾನು ಹುಟ್ಟಿರುವುದೇ ಆಸೆಗಳ ಮಧ್ಯೆ.|


                             ಸೋಮೇಶ್ ಗೌಡ

(18) ಮಾದರಿ ಪ್ರೀತಿ



ನಾ ಕಂಡ ಕನಸಲ್ಲಿ ನೂರಾರು ಜೀವ
ಕೂಗಿ ಕೂಗಿ ಕರೆದು ಕೇಳುತಿದೆ ಒಲವ
ಮನಸ್ಸಲ್ಲಿಲ್ಲ ಪ್ರೀತಿಗೆ ಇನ್ನೊಂದು ಜಾಗ
ಅದನ್ನಾಗಲೇ ಅವರಿಸಿರುವಳವಳು ಬೇಗ .


ಎದೆಯಲ್ಲಿ ಬರೆದಿಹಳು ನನ್ನುಸಿರ ಹೆಸರ
ಪ್ರೀತಿ ನಡೆಯುತ್ತಿದೆ ಅವಳು ಬರೆದ ಪ್ರಕಾರ
ನೀರ ಮೇಲಿನ ಗುಳ್ಳೆಯಲ್ಲಿ ಅವಳ ಬಿಂಬ ಕಂಡು
ಎದೆಯಲ್ಲಿ ಹುಟ್ಟಿದೆ ಸಾವಿರ ಆಸೆಗಳ ಹಿಂಡು


ಪ್ರೀತಿಗಿಲ್ಲ ಎಂದು ಸೋಲು
ಸೋತಿದ್ದರೆ ಅದವರ ಪಾಪದ ಪಾಲು
ನಮ್ಮ ಪ್ರೀತಿ ಮಾತ್ರ ಎಲ್ಲರಿಗೂ ಮಾದರಿ
ನಾವೆಂದು ಓಡಿಹೋಗಲಿಲ್ಲ ಯಾರಿಗೂ ಹೆದರಿ.|


                             ಸೋಮೇಶ್ ಗೌಡ
(19)ಪ್ರಾಯದ ಪ್ರೀತಿ




ಹೃದಯಕ್ಕವಳು ಮಾಡಿದ್ದಳು ವಾಸಿಯಾಗದಂತ ಗಾಯ
ಆಗ ನನಗಿನ್ನೂ ಹದಿನೆಂಟರ ಪ್ರಾಯ
ನನ್ನಿಂದಾಗುತ್ತಿದ್ದಳು ಅವಳು ಆಗಾಗ ಮಾಯಾ
ನಾ ಕಂಡ ಹುಡುಗಿಯರಲ್ಲಿ ನನಗವಳೇ ಅತ್ಯಂತ ಪ್ರಿಯ

ಅಚ್ಚ ಹಸಿರಿನ ಮದ್ಯೆ ನಿಂತು ಮೆಚ್ಚಿದಲ್ಲೇ ನನ್ನ ಓ ನಲ್ಲೇ
ಈಗೇನಾಯ್ತು ಕಟ್ಟುತಿರುವೆಯಲ್ಲ ನನ್ನ ಪ್ರೀತಿಗೆ ಬೆಲೆ
ಎಲ್ಲರಿಗಿಂತ ವಿಶ್ವಾಸ ಇಟ್ಟಿದ್ಡನಲ್ಲೇ ನಿನ್ನ ಮೇಲೆ
ನೀನೀಗ ಕೊಟ್ಟ ಕಾಣಿಕೆಗೆ ಮೈಯೆಲ್ಲಿ ಹುಕ್ಕುತ್ತಿದೆ ಬೆಂಕಿ ಜ್ವಾಲೆ.|

                              ಸೋಮೇಶ್ ಗೌಡ


(20)    ರಾಜಕೀಯ


ಸಿಗುವುದಿಲ್ಲವಿಲ್ಲಿ ನಮಗೆ ಉತ್ತಮವಾದ ನ್ಯಾಯ
ಕೊಳೆತ ಹೆಣದಂತಾಗಿದೆ ನನ್ನ ರಾಜಕೀಯ
ಬಟ್ಟೆಕಟ್ಟಿಕೊಂಡು ನಿಂತಿಹಳು ಕಣ್ಣಿಗೆ,ನ್ಯಾಯ ದೇವತೆ
ಅಪರಾಧಿಗಳು ಮಾಡೋ ಕೆಟ್ಟ ಕೆಲಸ ಅವಳೀಗೆ  ಕಂಡೀತೆ

2012 ಆದರೂ ಅಭಿವೃದ್ದಿಯಾಗಲಿಲ್ಲ ನಮ್ಮ ಬೆಂಗಳೂರು
ಇದೆಲ್ಲಾ ರಾಜಕೀಯದಿಂದಾದ ಗೋಳು
ಇದು ಕೆಂಪೆಗೌಡ್ರು ಕಟ್ಟಿದ ಊರು
ಆ ಕಾರಣಕ್ಕಿನ್ನು ಕಿಡಿಗೇಡಿಗಳಿಂದಾಗುತ್ತಿದೆ ಪಾರು

ನಮ್ಮ ರಾಜಕೀಯ ನಮ್ಮ ರಾಜಕೀಯ
ಮತದ ಸಮಯದಲ್ಲಿ ಮಾತ್ರ ಸಿಗುವುದು ನಮಗೆ ಸಹಾಯ
ಗೆದ್ದ ಮೇಲೆ ಮಾಡುವುದೊಂದೇ ಅವರು ಕಪ್ಪು ಹಣ ಸಂಗ್ರಹಿಸುವ ಉಪಾಯ
ಸರಿಯೋಗದೆಂದು ನಮ್ಮ ರಾಜಕೀಯ ನೀನೆ ನೋಡಯ್ಯ.|

                                             ಸೋಮೇಶ್ ಗೌಡ



(21) ಕನ್ನಡ ನುಡಿ ಕನ್ನಡ ನುಡಿ
       ಕನ್ನಡವೆಂದರೆ ಮೆರೆದಾಡಿ.


ಕನ್ನಡ ನುಡಿ ಕನ್ನಡ ನುಡಿ
ಕನ್ನಡವೆಂದರೆ ಮೆರೆದಾಡಿ.
ಸಾಹಿತ್ಯದ ಬೀಡು ಕನ್ನಡ ನಾಡಿದು
ಕವಿಚಕ್ರವರ್ತಿಗಳು ನೆಲೆಸಿದ ಬೀಡಿದು
ಕನ್ನಡ ನುಡಿ ಕನ್ನಡ ನುಡಿ ಕನ್ನಡವೆಂದರೆ ಮೆರೆದಾಡಿ

ಸಾಹಿತ್ಯಕ್ಕೆಂದು ದಕ್ಕೆಯಿಲ್ಲ
ಸಂಸ್ಕೃತಿಯೆಂದು ಮರೆತಿಲ್ಲ
ಗಂಧದ ನಾಡಿದು ಚಿನ್ನದ ಬೀಡು
ಬಸವಣ್ಣನವರು ಜನಿಸಿದ ಈ ನಾಡು
ಕನ್ನಡ ನುಡಿ ಕನ್ನಡ ನುಡಿ ಕನ್ನಡವೆಂದರೆ ಮೆರೆದಾಡಿ

ಸರ್ವಜ್ಞನು ಬೆಳೆದ ಕನ್ನಡ ನಾಡು
ಕುವೆಂಪು ಕವಿತೆಗಳ ಕಲೆ ಬೀಡು
ರಾಜ್‍ಕುಮಾರ್ ನಟಿಸಿ ಬೆಳೆಸಿದ ನಾಡಿದು
ಸಿ ಅಶ್ವಥ್ ಹಾಡಿ ಹೊಗಳಿದ ಬೀಡಿದು
ಕನ್ನಡ ನುಡಿ ಕನ್ನಡ ನುಡಿ
ಕನ್ನಡವೆಂದರೆ ಮೆರೆದಾಡಿ ಕನ್ನಡವೆಂದರೆ ಮೆರೆದಾಡಿ .|
ಜೈ ಕರ್ನಾಟಕ ಮಾತೆ

                                         ಸೋಮೇಶ್ ಗೌಡ

(22) ನಮ್ಮೂರು


ಭೂಮಂಡಲವೆಲ್ಲಾ ಸುತ್ತಿ ಬಂದರು ಸಿಗಲಿಲ್ಲ ನನಗೆ ನಮ್ಮೂರ ಪ್ರೀತಿ
ನಾನಿನ್ನೂ ಕಲಿತಿಲ್ಲ ನಮ್ಮವರನ್ನು ಬಿಟ್ಟು ಬದುಕೋ ರೀತಿ
ನಮ್ಮ ಜನರೇ ಚೆಂದ, ನಮ್ಮ ನುಡಿಯೇ ಚೆಂದ
ನಾವೆಲ್ಲ ಸೇರಿ ಹಬ್ಬ ಆಚರಿಸುವ ಬಗೆ ಬಲುಚೆಂದ 

ಪ್ರೀತಿಯೆಂಬಾ ಮಾತಿನಲ್ಲೇ ಉಣಬಡಿಸುತ್ತಾರೆ ಊಟ
ಖುಷಿಯಾಗುತ್ತದೆ ಗೆಳೆಯರ ಜೊತೆ ಸೇರಿ ಆಡುವಾಗ ಆಟ
ದೇವನಿಲ್ಲ ಗುಡಿಯಲ್ಲಿ ಅವನಿರುವುದು ನಮ್ಮೂರ ಜನರ ಮನದಲ್ಲಿ
ನಮ್ಮ ಜನಕ್ಕೆಂದು ಬಡತನ ಬಂದಿಲ್ಲ ಪ್ರೀತಿಯಲ್ಲಿ

ಸಂಬಳಕ್ಕಾಗಿ ಕಾಯುವುದಿಲ್ಲ ಬರಲೇಬೇಕೆಂದು ಮಾಸ
ಬುದ್ದಿವಂತನಾಗಲು ಓದಲೇಬೇಕೆಂದಿಲ್ಲ ಕೋಶ
ಹೃದಯವಂತ ಜನ್ನಕ್ಕೀಗ ನಾನೇನ ನೀಡಲಿ
ಈ ಪ್ರೀತಿ ವಿಶ್ವಾಸ ಎಂದೆಂದಿಗೂ ಹೀಗೆ ಇರಲಿ.|

                             ಸೋಮೇಶ್  ಗೌಡ

(23) ಅಘೋರ

ಮೆಲ್ಲನೆ ನುಡಿ ಮೆಲ್ಲನೆ
ನಿನ್ನ ಪ್ರೀತಿಗೆ ನಾನೀಗ ಸೋತಿದೆ
ಹಕ್ಕಿಗೆ ಹಾರೋ ಹಕ್ಕಿಗೆ 
ಚಿಂತೆಯಿಲ್ಲದೆ ಹಾರಡಬಲ್ಲದೆ
ಮುಗಿಲ ಮೇಲೂ ನಿನ್ನ ಹಾಡ ನಾನು ಕೇಳಿದೆ
ಪ್ರೀತಿ ಹೆಸರಿನಲ್ಲಿ ಅಲ್ಲೂ ರಕ್ತ ಸುರಿದಿದೆ
ಹುಟ್ಟೋ ಪ್ರೀತಿಗೇಕೆ ಇಂತ ಘೋರ ಶಾಪವೋ
ಮೆಟ್ಟಿನಿಂತ ಪ್ರೇಮಿಗಳ ಪರೀಕ್ಷಿಸುವ ಆಟವೋ
ನಿನ್ನ ನೊಟ ಮರೆತ ಒಂದ ನೆನಪ ತಂದಿದೆ
ಬಿಡದೆ ನಿನ್ನ ಪ್ರೀತಿ ಮಾಡೋ ಆಸೆ ಬಂದಿದೆ
ಮೆಲ್ಲಗೆ ನುಡಿ ಮೆಲ್ಲಗೆ
ನಿನ್ನ ಪ್ರೀತಿಗೆ ನಾನೀಗ ಸೋತಿದೆ.|

                  ಸೋಮೇಶ್ ಗೌಡ

(24)       ತಿಗಣೆ

ತಿಗಣೆಗಳಿಂದ ಕಡಿಸಿಕೊಂಡವರಿಗೆ ಗೊತ್ತು
ನಿದ್ದೆ ಗೆಟ್ಟ ಆ ಸವಿ ಹೊತ್ತು
ಕಚ್ಚಿದಾಗೆಲ್ಲಾ ಎದ್ದೆದ್ದು ಕೆರೆದಾಗ
ಎಲ್ಲಿಂದಲೋ ಇದ್ದ ಮಜ ಬರುತ್ತಿತ್ತು

ಮತ್ತೆ ಮತ್ತೆ ಕಚ್ಚಿ ಕಾಡಿದಾಗ
ಕೆರೆದ ಜಾಗದಲ್ಲೆಲ್ಲಾ ಹುಣ್ಣೊ0ದು ಬಿದ್ದಿತ್ತು
ಕೋಪಗೊಂಡು ಹೆದರಿ ಚಾಪೆಯನ್ನೆಲ್ಲಾ ಒದರಿ
ಮಲಗಿದಾಗ ಮತ್ತೆ ಮುತ್ತಿಕ್ಕುತ್ತಿತ್ತು

ಮುಖದ ಮೇಲೆ ಏನೋ ಹರಿದಂತಾಗಿ
ಕೈ ಹಾಕುತ್ತಿದ್ದಂತೆ ಹೀರಿದ್ದ ರಕ್ತವು ಅಂಟುತಿತ್ತು
ಹೇಗೇಗೊ ಮಾಡಿ ಒದ್ದಾಡಿ ಗುದ್ದಾಡಿ
ಮಂಪರು ನಿದ್ದೆ ಬರುವಷ್ಟರಲ್ಲಿ ಬೆಳಕೇ ಆಗಿತ್ತು
ಕಡಿಸಿಕೊಂಡವರಿಗೆ ಗೊತ್ತು ತಿಗಣೆ ತಂದ ಆಪತ್ತು.|

                ಸೋಮೇಶ್ ಗೌಡ


(25)   ವಿದ್ಯಾಭ್ಯಾಸ  


ನಾವು ನೀವೆಲ್ಲಾ ಶಿಕ್ಷಣಕ್ಕಾಗಿ ನೀಡೋಣ ಪ್ರೋತ್ಸಾಹ
ಮಕ್ಕಳಿಗೆ ಬರುವ ತನಕ ಉತ್ಸಾಹ
ಓದಿನ ಜೊತೆಗಿರಲಿ ಕ್ರೀಡೆ ಕಲೆಯ ಹವ್ಯಾಸ
ಸ್ಪರ್ಧೆಯೊಂದಿಗೆ ನಡೆಯುತ್ತಿರಲಿ ನಿಮ್ಮ ವಿದ್ಯಾಭ್ಯಾಸ

ಮರೆಯದಿರಿ ಎಂದು ಗುರುಗಳಿಗೆ ಕೊಡುವ ಗೌರವ
ಗಿಟ್ಟಿಸಿಕೊಳ್ಳುತ್ತಿರಾಗ ಕೊಟ್ಟ ಗೌರವಕ್ಕೆ ತಕ್ಕ ಸ್ಥಾನವ
ಮನಸ್ಸೆಂಬ ಮಂದಿರದಲಿ ಪುಸ್ತಕವನ್ನಿಟ್ಟು ಪೂಜಿಸಿ
ವಿದ್ಯಾ ಸರಸ್ವತಿಯನ್ನು ಪ್ರೀತಿಯಿಂದ ಆರಾದಿಸಿ

ಕಸದಿಂದ ತೆಗೆಯಬೇಕು ರಸವನ್ನ
ಮಾತಿನಲ್ಲೇ ಕಟ್ಟಬೇಕು ಚಕ್ರವ್ಯೂಹನ
ಕಳೆದ ದಿನವ ಮೆಲುಕು ಹಾಕುತ್ತಾ, ಬರುವ ದಿನದ ಕನಸ ಕಾಣುತ್ತಾ
ಸಾಗಬೇಕು ನೀವು ಜನ ಮೆಚ್ಚೋ ಭವಿಷ್ಯದತ್ತ

                              ಸೋಮೇಶ್ ಗೌಡ

(26) ಬುದ್ದಿಯೇ ಇಲ್ಲದೆ ಕಾರ್ಯವು ಸಾಗುವುದೇ..


ಚಿತ್ರದಿ ಕೊಳಲನು ಬಿಡಿಸಿದರೇನು ನುಡಿಸಲು ಆಗುವುದೇ
ಕಲ್ಲಲಿ ಮೂರ್ತಿಯ ಕೆತ್ತಿದರೇನು ಜೀವವ ತುಂಬುವುದೇ
ಸುಂದರ ವನದಲಿ ಚೆಂದದ ಹಕ್ಕಿಗೆ
ಬೆಳ್ಳಿ ಪಂಜರವಿಟ್ಟರೇನು ಬಂದು ಕೂರುವುದೇ

ಅಂತೆಯೇ ಹೃದಯವು ಇಲ್ಲದ ಹೆಸರಿಗೆ ಜಾಗವ ನೀಡುವುದೇ
ಬಣ್ಣದ ಬಾಗಿಲ ಇಟ್ಟರು ಏನು ಕಷ್ಟವು ತಪ್ಪುವುದೇ
ಶಾಂತಿಯೇ ಇಲ್ಲದ ಜೀವನದಲ್ಲಿ ಪ್ರೀತಿಯು ಹುಕ್ಕುವುದೇ
ಕಣ್ಣಿಗೆ ಕಾಣದ ಕತ್ತಲಿನಲ್ಲಿ ದೀಪವು ಸಿಕ್ಕುವುದೇ 

ರಸವೇ ಇಲ್ಲದ ಹೂವಿನ ಮೇಲೆ ದುಂಬಿಯು ಕೂರುವುದೇ
ಎಳೆಯೇ ಇಲ್ಲದ ಮರದ ಕೆಳಗೆ ಜೋಗುಳ ಕಟ್ಟುವುದೇ
ನಿದ್ದೆಯೇ ಬಾರದ ಮುದ್ದು ಮಗುವಿಗೆ ಗೊಂಬೆಯ ನೀಡುವುದೇ
ಎಲ್ಲಾ ಇದ್ದರೇನು ಬುದ್ದಿಯೇ ಇಲ್ಲದೆ ಕಾರ್ಯವು ಸಾಗುವುದೇ..

                                  ಸೋಮೇಶ್ ಗೌಡ

(27)    ಜನ್ಮದಾತರು

ಮುದುಕನಾದರೇನು ಮುದುಕಿಯಾದರೇನು
ಯೌವನದಲ್ಲಿ ಜೀವನದ ಸುಖ ನೀಡಿಲ್ಲವೇನು
ಮರ ಮುದಿಯಾಯ್ತೆಂದು ಕಡಿಯುವುದು ಸರಿಯೇನು
ಹಸುವು ಸತ್ತರೇನು ಇರುವತನಕ ಹಾಲುಣಿಸಿಲ್ಲವೇನು

ನಿನ್ನದಲ್ಲದ ವಸ್ತುವನ್ನು ಅಲಂಕರಿಸಿ ಪ್ರಯೋಜನವೇನು
ನಿನ್ನ ಜನ್ಮದಾತರ ಅರಿಯದ ನೀನು 
ಬದುಕಿ ಸಾದಿಸುವುದಾದರು ಏನು
ಇರುವತನಕ ರಾಮನಂತೆ ಬದುಕುವುದ ಕಲಿ ನೀನು

ಜನ್ಮದಾತರೆಂದೂ ಹಾರೈಸುವ ಬಂಧು
ನೀನೇಕೆ ಮುರಿಯಲು ನಿಂತಿರುವೆ ಆ ಬಂಧವನ್ನು
ಶ್ರವಣನಂತೆ ಆಗದಿದ್ದರೂ ನೀನು
ತಂದೆ ತಾಯಿಗಳಿಗಾಗಿ ಶ್ರಮಿಸುವ ಮಗನಾಗಿ ಬದುಕಿನ್ನೂ.|

                             ಸೋಮೇಶ್ ಗೌಡ

(28)  ಗ್ರಾಮ ಯೋಧ

ಅನ್ನದಾತನು ರೈತನೊಬ್ಬನು
ದೇಶಕ್ಕಾಗಿ ಬೆವರ ಸುರುಸಿ ದುಡಿಯುತ್ತಿರುವನು 
ಕಳೆದ ದಿನದಲ್ಲೂ ಸುಖವ ಕಾಣುತ್ತಾ
ಫಸಲಿನಲ್ಲಿ ಬರುವ ಫಲವ ಬಯಸಿ ಕಾಯುತ್ತಿರುವನು

ಮಳೆಯ ಕಾದು ಹೊಲವ ಬಿತ್ತಿ ಬೆಳೆಯ ಬೆಳೆವನು
ನಮಗೆಲ್ಲಾ ಅನ್ನನೀಡೊ  ಪ್ರೀತಿ ಪಾತ್ರನು
ಬೆಳೆವ ಪೈರಲ್ಲೂ ಕೀಳೊ ಕಳೆಯಲ್ಲೂ
ಒಂದೇ ಶ್ರಮದಿ ದುಡಿದ ಗ್ರಾಮ ಯೋಧನು

ಒಳ್ಳೇ ಬೆಲೆಯೂ ಸಿಗದೆ ಫಲವ ಉಳಿಸಲಾಗದೆ ಎಂತೋ ಮಾರ್ವನು
ಸಿಕ್ಕ ಬೆಲೆಗೂ ಬೆನ್ನ ತಟ್ಟಿ ಹೆಮ್ಮೆ ಪಡುವನು
ಕಳೆದ ವರ್ಷ ಪಟ್ಟ ಕಷ್ಟವನೆಲ್ಲಾ ಮರೆವನು
ಹೊಸ ಬೆಳೆಗೆ ನೇಗಿಲೊತ್ತು ಮತ್ತೆ ನಡೆವನು
ನಮ್ಮ ರೈತನು ಅವನೇ ಅನ್ನದಾತನು.|

                      ಸೋಮೇಶ್ ಗೌಡ

(29)  ಮಹಾಪುರುಷ

ಮಹಾತ್ಮನೆ ಯೋಗಪುರುಷನೇ ಗಾಂಧಿ ತಾತನೆ
ಸವ್ಯಸಾಚಿಯಾಗಿ ದುಡಿದ ಮಹಾಪುರುಷ ನೀನೆ
ಸ್ವಾತಂತ್ಯಕ್ಕಾಗಿ ಪ್ರಾಣತೆತ್ತ ಹುತಾತ್ಮನೆ
ಭೂಲೋಕದಲ್ಲಿ  ಜನಿಸಿದಂತ ದೇವಮಾನವನು ನೀನೆ

ಹಗಲು ಇರುಳು ಶ್ರಮಿಸಿದೆ ನೀನು
ಸ್ವಾತಂತ್ಯಕ್ಕಾಗಿ ದಣಿದಿದೆ ನೀನು
ನಿನ್ನನು ಪೂಜಿಸೋ ಭಾರತೀಯರು
ವರವನು ಪಡೆದ ಸೌಖ್ಯಧಾತರು

ದಾರವ ಹೆಣೆಯುತ ತನ್ನ ಕೆಲಸವ ತಾನೆ ಮಾಡುತ
ದೇಶದ ಏಳಿಗೆಗೆ ಹೋರಾಡಿದ ವೀರನೆ
ಜನರಲಿ ಧೈರ್ಯವ ತುಂಬುತಾ ಪಕ್ಷವ ಕಟ್ಟುತಾ
ಸ್ವಾತಂತ್ಯ ತಂದಿಟ್ಟ ಭಾರತದ ರಾಷ್ಟಪಿತನೆ ಓ ಗಾಂಧಿ ತಾತನೆ.|

                           ಸೋಮೇಶ್ ಗೌಡ


(30)  ಸ್ವಾರ್ಥ


ಹೃದಯವೆಂಬಾ ಕಲ್ಲು ಬಂಡೆಯೂ ಸಿಡಿಲಿಗೆ ಸಿಕ್ಕಿ ಚೂರಾಯ್ತು
ಮನಸ್ಸೆಂಬ ಸೂಕ್ಷ್ಮ ಹತ್ತಿಯು ಬೆಂಕಿಗೆ ಸಿಕ್ಕಿ ಸುಟ್ಟೋಯ್ತು
ಇನ್ನೇನಿದೆ ನನ್ನ ಬಾಳಲಿ ನೆನಪೆಲ್ಲ ಬೂದಿಯಾಯ್ತು
ಕಾಣೊ ಕನಸಿಗೊಂದು ಅಡ್ಡ ಗೋಡೆ ಕಟ್ಟಾಯ್ತು

ಕಣ್ಣೇ ಕಾಣದ ಕುರುಡನಾದೆ ನಾನು
ಮಾತೆ ಬಾರದ ಮುಖನಾದೆ ನಾನು
ಕೆಟ್ಟ ಸಮಾಜದ ಸ್ವಾರ್ಥಕ್ಕೆ ಸಿಕ್ಕಿ
ಬದುಕನ್ನು ಅವರಿಸಿದೆ ಸುಡುವ ಬೆಂಕಿ

ಕಂಡಿದ್ದೆ ಒಂದು ಆಗಿದ್ದೆ ಇನ್ನೊಂದು
ಬದುಕ್ಕಿದ್ದು ಸತ್ತಂತೆ ನಾನಿರುವೆ ಇಂದು
ನಾ ದೇವರಲ್ಲಿ ಕೇಳುವುದು ಒಂದೇ
ಯಾರಿಗೂ ಕೊಡದಿರು ಅತಿಯಾದ ಸ್ವಾರ್ಥ ಓ ತಂದೆ.|

                                 ಸೋಮೇಶ್ ಗೌಡ



ಕುಂತಲೆಲ್ಲಾ ಬರೆಯುತ್ತೇನೆ ನಾನು ಕವನ
ಅದಕ್ಕೆಎಲ್ಲರೂ ಬೈಯುತ್ತಾರೆ ದಿನಾ
ಅವರಿಗೇನು ಗೊತ್ತು ನನಗದು ಪ್ರಾಣ
ಕವನವಿಲ್ಲದ ಜೀವನ .......ನನಗೆ ಸ್ಮಶಾನ.|




                            ಈಗೆ ಇರಲಿ ನಿಮ್ಮ ಬೆಂಬಲ
                            ಬರುವುದಾಗ ನನಗೆ ಹೆಚ್ಚೆಚ್ಚು  ಕವನ ಬರೆಯುವ ಹಂಬಲ
                                     
                                           ಧನ್ಯವಾದ

                                                                        ಸೋಮೇಶ್ ಗೌಡ
                                                                                                            
                                                                         ಮಾಕಳಿ

                                                                         ಚನ್ನಪಟ್ಟಣ




http://makalisoma.blogspot.in/p/2.html
ಮುಂದಿನ ಪುಟಕ್ಕೆ ಈ ಲಿಂಕ್ ಮೂಲಕ ಹೆಜ್ಜೆ ಇಡಿ....
ನನ್ನ ಹಾಡು ನನ್ನ ಕವನ2

ಈ ಬ್ಲಾಗ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುತ್ತಿಲ್ಲ ಆದ್ದರಿಂದ ನೀವು ನನ್ನ ಹೆಚ್ಚಿನ ಬರಹಗಳನ್ನು ನೋಡಲು

http://kavyasparsha.blogspot.in/   ಭೇಟಿ ಕೊಡಿ

ಧನ್ಯವಾದಗಳು
Somesh!
ನಿಮ್ಮ ಅಭಿಪ್ರಾಯಗಳನ್ನು  gowda.someshn@gmail.com  ಗೆ ತಿಳಿಸಿ