ಒಳಗೊಳಗೆ ನಕ್ಕಳು
ಕಣ್ಣಲ್ಲೇ ಕೊಂದಳು
ಒಮ್ಮೆ ಕೈ ಬೀಸಿ ಹಾಯ್ ಎಂದೆ ಅಷ್ಟೇ
ಬಂದು ಬಡಿದೇ ಬಿಟ್ಟಳು.!
******************
ಬಯಸಿದೆಲ್ಲಾ ಸಿಗುತ್ತಾ ಹೋದರೆ
ನಮ್ಮ ಬಯಕೆಗಳಿಗೆ ಕೊನೆಯೇ ಇರುವುದಿಲ್ಲ
ಗಳಿಸಿದ್ದೆಲ್ಲಾ ಉಳಿಸುತ್ತಾ ಹೋದರೆ
ಗಳಿಕೆಯ ಗುಣ ಹೆಚ್ಚಾಗುವುದಿಲ್ಲ.
***********************
ಕವಿತನ ಸೆಳೆಯುವುದು ಎಲ್ಲರನು
ಕವಿಮನ ಮರೆಸುವುದು ಎಲ್ಲವನು
***********************
ಜೀವನ ಅನ್ನೋದು ನುಗ್ಗಾಟ ಇದ್ದ ಹಾಗೆ.
ಹಿಂದೆ ಇರೋರು ಮುಂದೆ ತಳ್ಳುತ್ತಾರೆ, ಮುಂದೆ ಇರೋರು ಹಿಂದೆ ತಳ್ಳುತ್ತಾರೆ .
ಯಾವಾಗ ನಾವು ಅದನ್ನೆಲ್ಲ ಸಹಿಸಿ,ಎಲ್ಲರನ್ನೂ ಹಿಂದಿಕ್ಕಿ ಯಶಸ್ಸಿನ ಗೆರೆ ಮುಟ್ಟಿದಾಗ ಆಗುವ ಖುಷಿಯೇ ಜೀವನ.
(ಮುನ್ನುಗಿದವನು ಯಶಸ್ವಿಯಾಗ್ತಾನೆ, ಆ ನುಗ್ಗಟದಲ್ಲು ಮಜ ಇದೆ ಅಂತ ನಿಂತವನು ಕಾಲ್ತುಳಿತಕ್ಕೆ ಶರಣಾಗ್ತಾನೆ)
****************************
ನಗುವಿನ ನೊಗಹೊತ್ತವನಿಗೆ ಕಲ್ಲು ಮುಳ್ಳು ಕಾಣುವುದಿಲ್ಲ
ನಯನಗಳಿಗೆ ಸೋತವನು ಸೌಂದರ್ಯದ ಅರ್ಥ ಹುಡುಕುವುದಿಲ್ಲ
***************************
ಕನಸು:
ಕಣ್ಣ್ ಮುಚ್ಚಿ ನಮ್ಮದೇ ಪ್ರಪಂಚ ಸೃಷ್ಟಿಸಿಕೊಳ್ಳುವುದು
ಮನಸ್ಸು:
ಆ ಕನಸಲ್ಲಿ ಇದ್ದ ನೂರು ವಿಷಯಗಳನ್ನು ನೂರು ತರ ಚಿಂತಿಸುವುದು.
***************************
ಒಲವೇ.
****
ಮುತ್ತ ಕೊಡಲು ಬಾರೆ ನನ್ನ ಮುದ್ದು ಮುದ್ದು ಚೆಲುವೆ
ಹತ್ರ ಕುಂತು ನನ್ನ ಮುದ್ದು ಮಾಡು ಬಾರೆ ಒಲವೆ
ಹೇಗೆ ಕೇಳಿದರು ಉತ್ತರವಿಲ್ಲದೇ
ಹೀಗೇಕೆ ನೀ ನನ್ನ ಸತಾಯಿಸುವೆ..........
ಒಲವೇ.
ಪ್ರೀತಿಯೆಂದರೇನು ನೀನು ಹೇಳಬಾರದೇನೂ
ರಾತ್ರಿಯಾದರೂನೂ ನನಗೆ ನಿದ್ದೆ ಬಾರದು ಜಾನೂ
ನಿನ್ನ ಕಣ್ಣಿನಲಿ ಏನೋ ಸೆಳೆತವಿದೆ
ನಿನ್ನ ಮಾತಿನಲೇ ನನ್ನ ಹಸಿವು ನೀಗಿದೆ,
ಯಾರೇ ನೀನು ಹೇಳೆ........ಒಲವೇ.
***************************
ಏಳು ಬೀಳಿನ ಈ ಜೀವನದಲ್ಲಿ ಏಳಿಗೆಯೊಂದೇ ನಿಮಗಿರಲಿ
ಯಶಸ್ಸಿನ ಮೆಟ್ಟಿಲುಗಳನ್ನೇರುತ್ತಾ ನಿಮ್ಮ ಜೀವನ ಸಾಗುತ್ತಿರಲಿ
**************************************
ಬೇಡ ಮುನಿಯಬೇಡ ಈ ಪ್ರೀತಿಯಲ್ಲಿ ನೀನು
ಬೇಗ ಅಳಿಯಬೇಡ ನನ್ನ ಉಸಿರಿನಿಂದ ನೀನು.
ತುಸು ಹೊತ್ತು ನೀನನ್ನ ಪ್ರೀತಿಸು ಸಾಕದುವೆ ಸಾಕದುವೆ.
ಈ ಪ್ರೀತಿಲಿ ನೀನೆ ಬಂಗಾರದ ಒಡವೆ
**************************************
ಅವಳು
******
ಅವಳು
ಮನೆಯೊಳಗೆ
ಬರಲು
ಉರಿಯಿತು
ಬೆಂಕಿ
ದೀಪದಲ್ಲಿ
ಅವಳು
ಮನೆತೊರೆಯಲು
ಉರಿಯಿತು
ಬೆಂಕಿ
ನನ್ನೆದೆಯಲ್ಲಿ
**************************************
ಕಣ್ಣ ಮುಚ್ಚಲು ಜಗವೇ ಕತ್ತಲು
ಪ್ರೀತಿ ಕಾಣಲು ಬೇಕಿಲ್ಲ ಕಂಗಳು
**************************************
"ಹೆಂಡತಿ ಬಂದ ಮೇಲೆ ತಾಯಿಯನ್ನ ಮರೆಯುವ ಹಾಗೆ.. ಇಂಗ್ಲೀಷ್ ಕಲಿತ ಮೇಲೆ ತಾಯಿ ಭಾಷೆಯನ್ನೇ ಮರೆಯುತ್ತಾರೆ" The great people
**************************************
ಹೆಣ್ಣು ಅಬಲೆಯಲ್ಲ, ತಬಲವೂ ಅಲ್ಲ..ಹೆಣ್ಣು ಹೂ ಮಾಲೆ!!!
**************************************
ಸಂಬಂಧ ಬಿಡಿಸಲಾಗದ ಅನುಬಂಧ.. ಸಮಾಜ ಸಂಸ್ಕೃತಿ,ಸಂಪ್ರದಾಯ, ಸಮೂಹಕ್ಕೇ ಅಂದ.
ಇವೆರಡು ಚೆನ್ನಾಗಿದ್ದರೆ ನಮಗೆ ಆನಂದ..
ಇವುಗಳನ್ನ ನಾವು ರಕ್ಷಿಸಿದರೆ ಅವು ನಮ್ಮನ್ನ ರಕ್ಷಿಸುತ್ತವೆ.
**************************************
ಕಂಪ್ಯೂಟರ್ ಲೋಕವಿದು
ಕಣ್ತೆರೆದು ನೋಡೋ ತಮ್ಮ
ಎಲ್ಲೆಲ್ಲೂ ಈಮೇಲ್ ಆರ್ಭಟ
ಎಲ್ಲರಿಗೂ ಫೇಸ್‌ಬುಕ್ ಚಟ
ಕುಂತಲ್ಲೂ ನಿಂತಲ್ಲೂ ಕನವರಿಸುತ್ತಾರೆ ಇಂಟರ್‌ನೆಟ್ ಪಾಠ
ಇದೆ ಇವತ್ತಿನ ಜನರು ಆಡುವ ಆಟ
ಇಲ್ಲೇ ನಡೆವುದು ತಮ್ಮ ಬದುಕಿನ "ಜಂಜಾಟ"**************************************
ಸೂರ್ಯನ ಬೆಳಕಿಗೆ ಅರಳಿದ ಹೂ
ಹೂ ಸೂಸೂವ ಪರಿಮಳ
ಆ ಪರಿಪಮಳದ ಸುವಾಸನೆಗೆ
ದಿಗ್ಬ್ರಮೆಯಾಗಿ ನಿಲ್ಲುವ ನಮ್ಮನ್ನ ಆಳುವ
ಒಡೆಯನೆ ನೀನಲ್ಲವೇ ನಂಜುಂಡೇಶ್ವರ.|
**************************************
ನೀ ಬಂದೆ ಮೆಲ್ಲಗೆ ನಮ್ಮೂರ ಸಂತೆಗೆ
ನನ್ನಯ ಹೃದಯವ ಕದಿಯಲೆಂದೆ
ಕಣ್ಣಲ್ಲೇ ಕೊಲ್ಲುತಾ ನನ್ನ ಮೌನಿ ಮಾಡುತಾ
ಮನದ ಒಳಗೆ ಹೊಕ್ಕಿದೆ ಸ್ವರವ ನುಡಿಸಲೆಂದೆ
ಯಾವ ಊರ ಬೆಡಗಿ ನೀ
ಏನ ಬಯಸಿ ಬಂದೆ ನೀ
ನನ್ನನು ಹೀಗೇತಕೆ ಕಾಡುತ್ತಿರುವೆ ಹೇಳು ನೀ
ಚೆಂದವುಂಟು ಕಿರುನಗೆ ಪ್ರೀತಿಯಲ್ಲಿ ಬಹುಬಗೆ
ನನ್ನಯ ಹೃದಯಕ್ಕೆ ನೀ ಹಾಕಿದೆ ಲಗ್ಗೆ
**************************************
ನಾನು ನಿನ್ನಲಿ ನೀನು ನನ್ನಲಿ
ನಾವಿಬ್ಬರು ಈ ಪ್ರೀತಿಯಲ್ಲಿ
ಭೂಮಿ ಮೇಲೆ ಈ ಪ್ರೀತಿ ಲೀಲೆ
ಕುಣಿವ ಮನವೀಗ ನೈದಿಲೆ
ಚೆಂದವಾಗಿದೆ ಸುಖವ ತಂದಿದೆ
ನಾನು ನಿನ್ನಲಿ ಸೇರಿ
ಬಂದು ಸೇರಿದೆ ನಿನ್ನ ಮಡಿಲನು
ಹೃದಯ ಜಾರಿ ಜಾರಿ
ನಾನು ನಿನ್ನಲಿ ನೀನು ನನ್ನಲಿ
ಈಗೆಯೇ ಇರಬೇಕು ಎಂದಿಗೂ
ನಮ್ಮ ಪ್ರೀತಿಯೇ ಮಾದರಿ ಎಲ್ಲ ಮಂದಿಗೂ..
**************************************
ಕುಡಿದು ತುರಾಡುವವ ಕುಡುಕ
ಕುಡಿಯದೆ ತುರಾಡುವವ ಮುದುಕ
ಕುಡಿದಿದ್ದರೂ ಏನು ಗೊತ್ತಿಲ್ಲದವನಂತೆ ನಟಿಸುವವ ಮೂರ್ಖ
ಆದರೆ
ಕುಡಿಯದಿದ್ದರು ಕುಡಿದ ಹಾಗೆ ನಟಿಸುವವ ನಟ-ನಾಯಕ
**************************************
ಆನೆ ಮೇಲೆ ಏರಿಕೊಂಡು
ತನ್ನ ಭಕ್ತರ ಹುಡುಕಿಕೊಂಡು
ಹಣ್ಣು ಕಡುಬು ತಿನ್ನಲೆಂದೂ
ಬಂದ ಬಂದ ನಮ್ಮ ಗಣಪ ನಮ್ಮ ಊರಿಗೆ
ಬಣ್ಣ ಬಣ್ಣದ ಹೂ ಚೆಲ್ಲಿ
ಮನಸ್ಸಿನಿಂದ ಕಪಟ ತಳ್ಳಿ
ಕೈಯ ಮುಗಿದು ನಮಿಸುತ್ತಲಿ
ಕರೆದು ತಂದೋ ನಮ್ಮ ಗಣಪನ ನಮ್ಮ ಸೂರಿಗೆ
ತರ ತರದ ಅಡುಗೆ ಮಾಡಿ
ಮನೆಯ ಮಂದಿಯೆಲ್ಲ ಕೂಡಿ
ಭಕ್ತಿಯಿಂದ ಪೂಜೆ ಮಾಡಿ
ಜೈಕಾರವನ್ನ ಹಾಕುತ್ತಿದ್ದೋ ನಮ್ಮ ಗಣಪಗೆ
****** ಜೈ ಗಣೇಶ ******
**************************************
ಗಜಾನನ ಗೌರಿಸುತ
ವಿಘ್ನ ವಿನಾಯಕನೆ
ಸಲಹು ತಂದೆ ನಮ್ಮನೆಲ್ಲಾ
ನಂಬಿರುವೆವು ನಿನ್ನನ್ನೆ
ಕಾಯಿಕಡುಬು ಸಿದ್ದ ಮಾಡಿ
ನೀನು ಬರುವ ದಾರಿ ನೋಡಿ
ವಿನಾಯಕ ವಿನಾಯಕ ಎಂದು
ಜಪಿಸುತ್ತಿರುವೆವು ಎಲ್ಲಾ ಹಾಡಿ
ಬಾರೋ ಗಣಪ ಬಾರೋ ಗಣಪ
ನಮ್ಮ ಮನೆಯ ಸೇರೋ ಗಣಪ
ನಿನ್ನ ಭಕ್ತರನ್ನೆಲ್ಲಾ ಹರಸಲು
ನೀ ಬೇಗ ಬಾರಪ್ಪ.....
***************
ಕಪ್ಪ ಕೇಳಿರೆ
ಒಪ್ಪದಾಗಿದೆ
ಎತ್ತ ಹೋಗಲೂ ತೋಚದೆ
ಗಾಳಿ ಬೀಸಿರೇ
ಮಾತು ಮುರಿದಿದೆ
ಮೌನ ಮನದಲಿ ಕುಂತಿರೆ
ಏನ ಮಾಡಲಿ ಏನು ಹೇಳಲಿ
ಏನು ಕಾಣದಾಗಿದೆ
ದೂರದೂರಿನ ಅಪ್ಪನರಮನೆಗೆಗೆ
ಹೋಗಲು ಮನಸಾಗಿದೆ.|
***************
Thank You
Somesh N Gowda
**************************************
**************************************
**************************************
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ