ನನ್ನ ಕವನ ನನ್ನ ಹಾಡು 2



(
31) ಆತುರಗಾರ



ಕೂಗದ ಕೋಳಿಯ ಕತ್ತನು ಕೊಯ್ದು
ದೂರದಿ ಎಸೆದನವನು
ಜೀವವಿರುವತನಕ ಒದ್ದಾಡಿ ಒದ್ದಾಡಿ 
ಪ್ರಾಣ ಬಿಟ್ಟೀತೇನು ಕೋಳಿ ಪ್ರಾಣ ಬಿಟ್ಟೀತೇನು 

ಅದಕಂಡ ದಾರಿಹೋಕನೊಬ್ಬ ಸುರಿಸುತ್ತಾ ನಿಂತನೇನು
ಜೆಲ್ಲಾ ಸುರಿಸುತ್ತಾ ನಿಂತನೇನು
ಕಾದು ಕಾದು ತಾಳಲಾರದೆ ಅವನು
ಹಿಡ್ಕೊಂಡು ಹೊಂಟನೇನು ಕೋಳಿಯ ಹಿಡ್ಕೊಂಡು ಹೊಂಟನೇನು

ರಬಸದಿ ಮಾಡಿದ ಕೃತ್ಯವ ನೆನೆದು
ಅಳುತ್ತಾ ಕುಂತನೇನು ತಿಮ್ಮ ಅಳುತ್ತಾ ಕುಂತನೇನು 
ಕೋಪ ಆಕಸ್ಮಿಕ ತಾಪ ಅನಿವಾರ್ಯ ಇದ ಅರಿಯದ ಅವನು
ಮಾಡಿದ್ದಾದರೂ ಏನು ತಮ್ಮ ಮಾಡಿದ್ದಾದರೂ ಏನು.|

                     ಸೋಮೇಶ್ ಗೌಡ

(32)  ಅನುಮಾನ ತಂದ ಕೃತ್ಯ


ದೂರದಲ್ಲಿ ಇತ್ತು ಒಂದು ದೊಡ್ಡ ಬೆಟ್ಟವು
ಅಲ್ಲಿಂದ ಬಂತು ಏನೋ ಕಿರುಚೋ ಶಬ್ದವು
ಗುಂಪು ಹಕ್ಕಿ ಹಾರಿ ಹೋಗೋ ದೃಶ್ಯವು
ಬಂದಿತೇನೋ ಇರುವುದೆಂಬ ಅನುಮಾನವು

ಏನು ಮಾಡಬೇಕುಂಬುದೇ ತೋಚದೆ
ದೂರದಿಂದ ನಿಂತು ಗುಂಡು ಹಾರಿಸಿದೆ
ಹೆಮ್ಮೆಯಿಂದ ಏನೋ ಬಿದ್ದಿತೆನ್ನುತ
ಹೊರಟೆ ನಾನು ಹೆಜ್ಜೆ ಹಾಕಿ ಬೆಟ್ಟದತ್ತ

ಹೋಗಹೋಗುತ್ತಲೇ ನಾನು ಕಂಡೆನು
ರಾಶಿ ಬಿದ್ದಿದ ಮಕ್ಕಳ ಹೆಣಗಳನ್ನು
ಕೊಟ್ಟರೆನಗೆ ಅರಿಯದೆ ಮಾಡಿದ ಕೃತ್ಯಕ್ಕೆ ಶಿಕ್ಷೆ
ಇಲ್ಲವೇ ಅನುಮಾನದಿಂದ ಆದ ತಪ್ಪಿಗೆ ಭಿಕ್ಷೆ|

                         ಸೋಮೇಶ್ ಗೌಡ

(33) ಕರ್ನಾಟಕದ ಕೀರ್ತಿ ಪುತ್ರ ಅಂಬರೀಶ


ಅಂಬೆಗಾಲನ್ನಿಟ್ಟು ಬಂದ ಅಮರನಾತನು
ಅಂಬಾರಿ ಏರಿ ಕೂತಿಹ ಈಗ ಅಂಬರೀಶನು
ನೋಡಿರಪ್ಪ ನಮ್ಮ  ಮಂಡ್ಯದ  ಗಂಡಿವನು
ಮಿಂಚಿನಂತೆ ಹೊಳೆವ ಸಿಡಿಗುಂಡಿವನು

ದಾನಸೂರ ಕರ್ಣನಿವನು
ನಂಬಿಬಂದ ಜನರಿಗೆ
ಸ್ನೇಹಜೀವಿ ಎಂದೂ ಇವನು
ಪ್ರೀತಿಸೋ ಅಭಿಮಾನಿಗಳಿಗೆ

ಕೃಷ್ಣನಂತೆ ಚತುರನಿವನು
ಭೀಮನ ಬಲವುಳ್ಳವನು
ಘರ್ಜಿಸುವ ಸಿಂಹನವನು
ತಪ್ಪಿ ನಡೆವವರಿಗೆ
ಕರ್ನಾಟಕದ ಕೀರ್ತಿ ಪುತ್ರನು
ಇವನೇ ನಮ್ಮ ಅಂಬರೀಶನು.|
                  
                ಸೋಮೇಶ್ ಗೌಡ

(34) ಸೂರ್ಯನೆಂಬ ಶಾಖವಾದಿ


ನಮಗಿಂತ ಮುಂಚೆಯೆದ್ದು ಕೆಲಸಕ್ಕೆ ಹಾಜರಾಗಿ
ತನ್ನ ನಂಬಿದವರನು ಮರೆತಿಲ್ಲ ಇನ್ನೂ
ಸೂರ್ಯನೆಂಬ ಶಾಖವಾದಿ, ಸಸ್ಯಗಳಿಗೆ ತಂದೆಯಾಗಿ
ಬೆಳೆದು ಫಲ ಕೊಟ್ಟರು ಬಿಡನು ತಂದೆಯ ಮಮತೆಯನ್ನು

ಸುಡುವ ಬಿಸಿಲ ಕೆಳಗೆ ನೆನೆದ ಅಕ್ಕಿಯ ಹಾಕಿ
ನಿನ್ನ ನಂಬಿ ಸ್ತ್ರೀ ಮನೆಯೊಳಗೆ ಹೊಕ್ಕಿರಲು
ನೀನೇಕೆ ಮೊಡದ ಹಿಂದೆ ಅಡಗಲು ಹೋಗುವೆ
ಗಿಣಿಯೊಂದು ನೆನೆದ ಅಕ್ಕಿಯ ಹೆಕ್ಕುತ್ತಾ ಕುಂತಿರಲು

ಕೋಪಿಷ್ಟನೆನ್ನುವರು ನಿನ್ನ 
ದೇವನೆಂದು ಪೂಜಿಸುವರು ನಿನ್ನ
ನೀನಿಲ್ಲದ ಒಂದು ದಿನ
ಕೆಲಸದಲ್ಲಿ ಜಿಗುಪ್ಸೆ ತರುವುದು ಆ ಕ್ಷಣ.|

                      ಸೋಮೇಶ್ ಗೌಡ

(35)  ಭೂಮಿಯನ್ನ ಕ್ಷೀರ ಸಾಗರ ಮಾಡಿದ ಚಂದ್ರ 



ಗಗನದಲ್ಲಿರುವ ಚಂದ್ರ ನಕ್ಷತ್ರಗಳ ಒಗ್ಗಟ್ಟನ್ನು ನೋಡಿ
ಜನರಿಗೆಲ್ಲಾ ಮಾಡಿಹನು ಬೆಳದಿಂಗಳ ಮೋಡಿ
ತಂಪಾದ ಗಾಳಿಯ ಜೊತೆ ತಿಂಗಳ ಬೆಳಕಿರಲು
ಮೈಮರೆತು ನಿಂತಾಗ ನಿದ್ರೆ ಅವರಿಸಿರಲು


    ಕತ್ತ ಮೇಲೆತ್ತಿ ನೋಡಿದರೆ
    ನನ್ನ ಕಣ್ಣಲ್ಲಿ ನಿನ್ನ ಬಿಂಬ
    ಕೆಳ ಕತ್ತು ಬಾಗಿದರೆ
    ಚೆಲ್ಲಿರುವೆ ಬೆಳಕ ಭೂಮಿ ತುಂಬ.


ಸೋಮ ಏನು ನಿನ್ನ ಲೀಲೆ
ಜನರೆಲ್ಲಾ ನಿನಗೆ ಮರಳಾಗುವಂತೆ ಮಾಡಿ
ಸವಿಯುತ್ತಿರುವೆಯಲ್ಲಾ ಕೂತು ಮೇಲೆ
ಭೂಮಿಯನ್ನೆಲ್ಲಾ ಕ್ಷೀರ ಸಾಗರ ಮಾಡಿ


ಸಮುದ್ರದಲ್ಲಿರುವ ಮುತ್ತಿನ ಹಾಗೆ
ನೀಲಿಬಾನಲಿ ವಜ್ರದಾಗೇ ಪ್ರಕಾಶಿಸುವ
ಭೂಮಿಯ ಜೊತೆಗಿರುವ ನೆಂಟನ್ನು ಬಿಡದ
ಕೋಪವೇ ಬರದ ಶಾಂತಿದಾತ ನೀನಾದೆ.|

                   ಸೋಮೇಶ್ ಗೌಡ

(36)   ಬಡ ಜೀವ


ಬಳ್ಳಿಯೊಂದು ಬಾಡಿಹೋಯ್ತು ಮೇಲಿನ ಹೂವ ನೋಡದೆ
ಹಕ್ಕಿಯೊಂದು ಹಾರಿಹೋಯ್ತು ಪುಕ್ಕ ಬೀಳುವುದೇ ಕಾಣದೆ
ಹೂವಿಗಿಲ್ಲ ಇಂದು ಯಾರು ಆಸರೆ
ಇನ್ನೂ ಬಲೆ ಬೀಸಿ ಹಕ್ಕಿ ಯಾರು ಹಿಡಿಯರೆ

ಒಂಟಿಯಾಯಿತು ಬಡ ಜೀವ
ನೆಂಟರಿಸ್ಟರು ಕೊಡಲಿಲ್ಲ ತಾವ
ಕಣ್ಣು ಕಾಣದ ಕುರುಡನ ಹಾಗೆ
ಹುಡುಕುತ್ತಿರುವನು ನೆಲೆಸಲು ಜಾಗವ

ಕರುಣೆಯಿಲ್ಲದ ಈ ಜನಗಳ ಮದ್ಯೆ
ಬಾಡಿಹೋದ ತಾವರೆಯಂತೆ ಅವನು
ನೀರಿನಲ್ಲಿ ಬಿದ್ದ ಕಪ್ಪೆಯ ಹಾಗೆ
ಈಜಿ ಈಜಿ ದಡ ಸೇರುತ್ತಿರುವನು

ಊಟಕೆ ಹುಡುಕದ ದಿನಗಳೆ ಇಲ್ಲ
ಆಟ ಆಡುವ ಮನಸ್ಸು ಇನ್ನಿಲ್ಲ
ತಂದೆ ತಾಯಿ ಇಲ್ಲದ ಮಾತ್ರಕೆ ಅವನು
ಲೋಕದಲ್ಲಿ ಅನಾಥನೆನ್ನುವುದು ಸರಿಯೇನು..?
  
                        ಸೋಮೇಶ್ ಗೌಡ   

(37) ರಕ್ತದ ಓಲೆ


ಕಾಗದದ ಮೇಲೆ ಬರಹಗಳನ್ನು ಗೀಚಿ
ಬರಹದಲ್ಲಿ ತುಂಬಿದ್ದಳು ಹೃದಯದಲ್ಲಿದ ಪ್ರೀತಿ
ಪ್ರೀತಿ ಕಾಣದಂತೆ ಇಟ್ಟಿದ್ದಳು ಮರೆಮಾಚಿ
ದುರ್ಯೋಧನ ನೀರಿನಲ್ಲಿ ಅವಿತು ಕುಂತ ರೀತಿ

ಮರೆತಿದ್ದಳು ಭೀಮನಂತ ಅಣ್ಣನಿರುವುದನ್ನು
ಹುಡುಕಿ ಎಳೆತಂದ ಪತ್ರದ ಜೊತೆ ಅವಳನ್ನು
ಯಾರಿಗಾಗಿ ಈ ಪತ್ರ ಬರೆದೆ ಎಂದು ಗರ್ಜಿಸುತ
ನಿಧಾನವಾಗಿ ತೆರೆದನು ಅವಳು ಬರೆದಿದ್ದ ಓಲೆಯನ್ನು

ನೋಡನೋಡುತ್ತಲೇ ಸೆಳೆಯಿತವನ ಅವಳ  ಬರಹಗಳು
ಬರಹಗಳನ್ನು ಅಲಂಕರಿಸಿದ್ದವು ಅವಳ ರಕ್ತದ ಕಲೆಗಳು
ನಿಶ್ಚಲವಾದ ಅವಳ ಪ್ರೀತಿಗೆ ಸೋತ ಅವನು
ರಕ್ತದ ಕಣ ಕಣದಲ್ಲೂ ಇದ್ದ ಅವಳ ಪ್ರಿಯತಮನನ್ನು ತಂದಿಟ್ಟನು.|

                                  ಸೋಮೇಶ್ ಗೌಡ

(38)         ಶ್ರದ್ದೆ


ತಮಟೆ ಬಡಿದಾಗ
ಮನಸ್ಸು ಕುಣಿಯಲು ಬಯಸುವುದು
ಪ್ರೀತಿ ಹುಟ್ಟಿದಾಗ 
ಹೃದಯ ಹಾಡಲು ಬಯಸುವುದು

ಗಾಳಿ ಬೀಸದೇ ರಾಗಿ ತೂರಿದರೆ
ಶ್ರಮದ ಜೊತೆ ಸಮಯವೂ ವ್ಯರ್ಥವಾಗುವುದು
ಮಾಡೋ ಕಾರ್ಯದಲ್ಲಿ ಶ್ರದ್ದೆ ಇಲ್ಲದಿದರೆ
ಮಾಡಿದ ಕೆಲಸ ಅರ್ಹಹೀನವಾಗುವುದು

ಮಾಡೋ ಕಾರ್ಯದಲ್ಲಿ ಶ್ರದ್ದೆ  ಇರಲಿ
ಆಡುವ ಮಾತಲ್ಲಿ ಹಿತವಿರಲಿ
ಇನ್ನೊಬ್ಬರನ್ನು ಮೆಚ್ಚಿಸುವ ಆತುರದಲ್ಲಿ
ನೀವು ಗೂಬೆಗಳಾಗದಿರಿ

ತಾಯಿ ಭಾಷೆಯನ್ನು ಮರೆಯದೆ 
ವೀರ ಕನ್ನಡಿಗನಾಗಿ ಬದುಕಿರಿ.|

                  ಸೋಮೇಶ್ ಗೌಡ

(39) ಕನ್ನಡದ ರುಚಿ


ತಿಂದವರಿಗೆ ಗೊತ್ತು ಬೆಲ್ಲದ ರುಚಿ
ಕಷ್ಟ-ಸುಖ ಕಂಡವರಿಗೆ ಗೊತ್ತು ಜೀವನದ ರುಚಿ
ನೊಂದವರಿಗೆ ಗೊತ್ತು ಪ್ರೀತಿಯ ರುಚಿ
ಬೆಂದವರಿಗೆ ಗೊತ್ತು ಬೆಂಕಿಯ ರುಚಿ
ಅಪ್ಪಟ ಕನ್ನಡಿಗನಿಗೆ ಮಾತ್ರ ಗೊತ್ತು
ಕನ್ನಡ ಎಂದಾಗ ಆಗುವ ಹೆಮ್ಮೆಯ ರುಚಿ.| 

                      ಸೋಮೇಶ್ ಗೌಡ

 (40)   ಒಲವೆ ಜೀವನ


  ನೆನಪಿಲ್ಲದೆ ನೆಮ್ಮದಿಯಿಲ್ಲ
  ಕನಸಿಲ್ಲದೆ  ಗುರಿ ಮುಟ್ಟಲಾಗಲ್ಲ
  ಮನಸ್ಸಿಲ್ಲದೆ ಮಮತೆ ಹುಕ್ಕಲ್ಲ 
  ಹೃದಯ ಇಲ್ಲದೆ ಪ್ರೀತಿ ಹುಟ್ಟಲ್ಲ 
  ಪ್ರೀತಿ ಇಲ್ಲದೆ ಜೀವನ ಸಾಗಲ್ಲ
  ಒಲವೆ ಜೀವನ ಬದುಕೇ ಪಯಣ.|

                      ಸೋಮೇಶ್ ಗೌಡ

(41) ಮರೆಯಲಾಗದ ಉಡುಗೊರೆ


ದಣಿದು ಬಂದಾಗ ಸಿಕ್ಕ ತಣ್ಣನೆಯ ನೀರು
ಹಸಿದು ಬಂದಾಗ ಸಿಕ್ಕ ಮೃಷ್ಟಾನ  ಭೋಜನ
ಬೇಡ ಬೇಡವೆಂದರೂ ಕೈತುತ್ತು ತಿನಿಸಿದ ತಾಯಿ
ಎಳೆದು ಎಳೆದು ಆಟಕ್ಕೆ ಕರೆದ್ದೊಯ್ಯುವ ಗೆಳೆಯರು
ಹಬ್ಬದ ದಿನಗಳಲ್ಲಿ ಒಂದೆಡೆ ಸೇರುವ ಸಂಬಂದಿಕರು
ನೆನೆದು ನೆನೆದಾಗೆಲ್ಲ ಎದುರು ಬಂದ ಪ್ರಿಯತಮೆ
ಕಣ್ಮುಚ್ಚಿದರೆ ಸಾಕು ಕಾಡುವ ನೆನಪುಗಳು
ಹುಟ್ಟಿ ಬೆಳೆದ ಊರು,ತಾಯಿ ಭಾಷೆ
ನಮ್ಮ ಜನ, ನಮ್ಮ ಮೇಲೇರುವ ಋಣ
ನಮ್ಮಿಂದ ಮರೆಯಲು ಸಾಧ್ಯಾನ.|

                      ಸೋಮೇಶ್ ಗೌಡ

(42)    ಹುಟ್ಟಿದ ದಿನ


ಅಂದು ನನಗಾಗಿ ತಾಯಿ ಕೊಟ್ಟಳು ಜನನ
ಇಂದು ನಾ ಆಚರಿಸುತ್ತಿರುವೆ ಹುಟ್ಟಿದ ದಿನ
ನಲಿದಾಡುತ್ತಿದೆ ನನ್ನ ಮನ
ನೆನೆಯುತ್ತಾ ಆರಾದಿಸುತ್ತ ಜನನಿಯನ್ನ

ವರುಷ ವರುಷಗಳು ಉರುಳುತ್ತಿವೆ
ಮತ್ತೆ ಮತ್ತೆ ಹುಡುಕಿಕೊಂಡು ಹುಟ್ಟಿದ ದಿನ ಬರುತ್ತಿದೆ
ತಾಯಿ ಕೊಟ್ಟ ಜನನಕ್ಕೆ ನಾನಿನ್ನೂ ನೀಡಿಲ್ಲ ಅರ್ಥ
ಇನ್ನೂ ಸಿಕ್ಕಿಲ್ಲ ನನಗೆ ತಾಯ್ನಾಡು ಗುರುತಿಸುವಂತ ಪಾತ್ರ

ಎಲ್ಲರಿಗೂ ಬರುತ್ತದೆ ಹುಟ್ಟಿದ ದಿನ
ತೀರಿಸಲಾಗಲ್ಲ ನಮ್ಮಿಂದ ತಾಯಿ,ತಾಯ್ನಡ ಋಣ
ಇರುವತನಕ ಹೆಮ್ಮೆಯ ಪುತ್ರನಾಗಿ ಬದುಕೊಣ
ದೇಶಕ್ಕಾಗಿ ಹೋರಾಡಿದ ಹಿರಿಯರನ್ನು ನೆನೆಯೋಣ.| 
                           ಸೋಮೇಶ್ ಗೌಡ   

(43) ಹೃದಯ ಕಿತ್ತ ಗೆಳತಿ


ಹಕ್ಕಿ ಹಾರುವ ಹಾಗೆ
ಗಾಳಿ ಬೀಸುವ ಹಾಗೆ 
ನನ್ನ ಬಿಟ್ಟು ನೀ ಹೊರಟೆಯಲ್ಲೆ 
ಹಿಡಿಯಲಾರೆನು ನಾ ನಿನ್ನ ಪ್ರೀತಿನ
ಒಮ್ಮೆ ತಿರುಗಿ ನೀ ನನ್ನ ನೋಡೆ

ಕೋಳಿ ಕೂಗಿದ ರೀತಿ
ಕೋಗಿಲೆ ಹಾಡಿದ ರೀತಿ
ನೀ ನುಡಿದ ಮಾತನು ನಾ ಮರೆಯಲೇನೆ
ನಿನ್ನ ಬಿಟ್ಟು ನಾ ಹೇಗೆ ಬದುಕಲಿ 
ಒಮ್ಮೆನೀನೆ ಯೋಚಿಸಿ ಹೇಳೆ

ಕಣ್ಣ ಮುಚ್ಚಿದರೆ ನಿನ್ನ ನೆನಪುಗಳೇ
ಕಾಡಿ ಕಾಡಿ ಸುಡುತಿದೆಯಲ್ಲೇ
ಮಲ್ಲಿಗೆ ಹೂವಿನಂತ ಪ್ರೀತಿಯನ್ನ ನೀ
ಕಾದ ಕಬ್ಬಿಣದಂತೆ ಮಾಡಿ ಹೊರಟೆಯಲ್ಲೇ

ನಿನ್ನ ನೆನಪಲ್ಲೆ ನಾ ಬದುಕಲಾರೆ
ನಿನ್ನಂತ ಮತ್ತೊಬ್ಬ ಹುಡುಗಿ ಸಿಕ್ಕರೆ ಬಿಡಲಾರೆ.!!!  

                      ಸೋಮೇಶ್ ಗೌಡ

(44)  ಮೌನ ದೇವತೆ

ಮಾತನಾಡದೆ ಮೂಕದಳು
ನೋವನು ಮನದಲ್ಲೇ ನುಂಗುತ
ಮೌನವನ್ನೇ ಜೀವನವಾಗಿರಿಸಿಕೊಂಡಳು
ಎಲ್ಲಾ ಸುಖವನ್ನು ಧಾರೆಯೆರೆಯುತ

ಬಡ ಜೀವ ನೊಂದು ನೊಂದು ಸಾಕಾಗಿದೆ
ಜೀವನದ ಯುದ್ದದಲ್ಲಿ ಸೋತು ಕೂತಿದೆ
ಬಾಣ ಇಲ್ಲದ ಬತ್ತಳಿಕೆ ಇಟ್ಟುಕೊಂಡು
ಯುದ್ದ ಮಾಡಲಾಗದೆ ಮೂಕಾಗಿದೆ

ಮೌನವೆಂದು ದೂರಹೋಗದು
ಅವಳ ಒಳ ಮನಸ್ಸಿನಿಂದ
ಕೋಪ ತಾಪ ಮರೆಯಾಗಿದೆ
ಆ ದೇವತೆಯ ಅರಮನೆಯಿಂದ.|

                      ಸೋಮೇಶ್ ಗೌಡ

(45) ಕುಡುಕ ಪ್ರಜೆ

ಎಣ್ಣೆ ಹೊಡೆದು ಕಣ್ಣಿಗೇಕೋ
ಧೈರ್ಯ ಬಂದೈತೆ
ಪಕ್ಕದಲ್ಲಿ ಹೋಗೋ ಹುಡುಗಿಗೆ
ಕಣ್ಣ್ ಹೊಡಿತೈತೆ

ಬಾಯಿಯೇಕೋ ತುಂಬ ತುಂಬ ಮಾತನಾಡ್ತೈತೆ
ನನ್ನ ನೋಡಿ ಜನರೆಲ್ಲಾ ನಗುವಂತೆ ಮಾಡೈತೆ
ಕಾಲೇಕೋ ಇಂದು ರಸ್ತೆ ತುಂಬಾ ನಡಿತೈತೆ
ನಡೆದು ನಡೆದು ಚರಂಡಿಯಲ್ಲಿ ಬೀಳುವಂತೆ ಮಾಡೈತೆ

ಮನಸ್ಸು ಏಕೋ ತಾಳಲಾರದೆ ಎಲ್ಲಾ ಹೇಳ್ತೈತೆ
ಹೇಳಿ ಹೇಳಿ ನಿದ್ದೆಗೇಕೊ ಜಾರಿ ಹೋಯ್ತೈತೆ 
ನಾನು ಕುಡುಕನೆಂದು ಜನರೆಲ್ಲಾ ಹೇಳ್ತಾರೆ
ಅವರು ಕುಡಿದ ಮೇಲೆ ಹೀಗೆ ಮಾಡ್ತಾರೆ.|

                           ಸೋಮೇಶ್ ಗೌಡ

(46) ಸಿಗರೇಟು ದಾಸ

ಸಿಗರೇಟು ಬಂದು ಮನಸ್ಸಲ್ಲಿ ನಾಟಿ
ನಮ್ಮನ್ನು ಸುಡುತ್ತಿರಲು
ಬಿಡದೆ ನಾನು
ಗಂಟೆಗೊಮ್ಮೆ ಸಿಗರೇಟ ಸೇದುತ್ತಿರಲು

ದುಃಖವೆಲ್ಲಾ ಮರೆಸಿತು
ಒಂದು ದಮ್ ಸಿಗರೇಟು ಸೇದಿದಾಗ
ಖುಷಿ ಹೆಚ್ಚಾಯಿತು 
ಸೇದಿ ಸಿಗರೇಟ ತುಂಡು ಬಿಸಾಡಿದಾಗ

ಕೊನೆಗೊಮ್ಮೆ ಅದೇ ನಮ್ಮನ್ನ ಸೇದುತ್ತಿರಲು
ಮೈಮರೆತು ನಾವು ಅದರ ದಾಸನಾಗಿರಲು
ಕಲಿತ ಛಟವನ್ನು ಬಿಡಲಾಗದೆ
ಮನಸ್ಸು ನೊಂದು ಒದ್ದಾಡುತ್ತಿರಲು
ಸಿಗರೇಟು ನಮ್ಮನ್ನು ಬಿಡದೆ ಆವರಿಸಿರಲು.|

                           ಸೋಮೇಶ್ ಗೌಡ

(47) ಜೀವನವೇ ಪಯಣ

ನಾ ನಡೆವ ದಾರಿಯಲ್ಲಿ 
ನೂರಾರು ಕನಸುಗಳಿರಲು
ಹೆಜ್ಜೆ ಹೆಜ್ಜೆಗೂ ನೋಯುತ್ತಿದೆ
ಹಣದ ಮುಳ್ಳು ಚುಚ್ಚುತ್ತಿರಲು

ಕನಸಲ್ಲೆ ಅರಮನೆ ಕಟ್ಟಿ
ನಾ ಒಳಗೆ ಹೊಕ್ಕುತ್ತಿರಲು
ಎಳೆಯುತ್ತಿರುವರು ಹಗ್ಗ ಕಟ್ಟಿ
ನನ್ನ ಸುಖವ ಬಯಸದವರು

ಬದುಕೆಂಬ ಪಯಣದಲ್ಲಿ
ಸಿಗುವುದು ಕಲ್ಲು ಮುಳ್ಳು
ಆದ ದಾಟಿದಗಲೇ
ಬಾಳಾಗುವುದು ಬೆಲ್ಲ ಬೆರೆಸಿದ ಎಳ್ಳು.|

               ಸೋಮೇಶ್ ಗೌಡ

(48) ನಮ್ಮ ಗೆಳೆತನ 

ಸ್ನೇಹವೆಂಬ ದ್ರಾಕ್ಷಿ ಗೊಂಚಲಿನಲ್ಲಿ
ರಸತುಂಬಿದ ಹಣ್ಣುಗಳಂತೆ ನಾವು
ಹಾವಿಗೆ ಹುತ್ತ ಕಟ್ಟುವ ಗೆದ್ದಲು ಹುಳಗಳ ಹಾಗೆ
ಒಬ್ಬರಿಗೊಬ್ಬರು ಸಹಕರಿಸುತ್ತಾ ಬದುಕುತ್ತಿರುವೆವು

ಗುಂಪಿನಲ್ಲಿ ಕೂತು ನಾವು ಎಣ್ಣೆ ಹೊಡೆಯಲು
ಎಣ್ಣೆ ಜೊತೆ ಉಪ್ಪಿನಕಾಯಿ ಸವಿಯಲು
ನಾಲಿಗೆ ರಸ ತುಂಬಿದ ಹಣ್ಣoತಾಗಲು
ಸ್ನೇಹಿತರ ಮುಖದಲ್ಲಿ ಎಲ್ಲಿಲ್ಲದ ಕಳೆ ಬಂದಿರಲು

ಒಮ್ಮೊಮ್ಮೆ ಗುಡ್ಡಾಡಿ ಕೊನೆಗೆ ಅಪ್ಪಿಕೊಂಡು
ಮನಸ್ಸಿನ ನೋವನ್ನು ಸ್ನೇಹಿತರೊಂದಿಗೆ ಹಂಚಿಕೊಂಡು
ಜೀವನದ ಪ್ರಮುಖ ಪಾತ್ರವನ್ನು ಸ್ನೇಹಿತನಿಗೆ ಇಟ್ಟು
ಬದುಕುತ್ತಾರೆ ನಮ್ಮ ಹುಡುಗರು ಒಂಟಿತನ ಬಿಟ್ಟು.|

                             ಸೋಮೇಶ್ ಗೌಡ

(49)  ಹಾಡನು ಹಾಡುವೆ ನಾ

ಹಾಡನು ಹಾಡುವೆ ನಾನು
ಕವಿತೆಯ ಬರೆಯುತಲಿ
ಹೃದಯದಿ ಹುಟ್ಟಿದ ಕವಿತೆಗೆ ಏಕೋ
ರಾಗವು ಬೆರೆತಿಹುದು

ಸಣ್ಣನೆ ತಾಳಕೆ ಹೆಜ್ಜೆಯ ಹಾಕುತ
ಮೈ ಮರೆಯುವೆನು ನಾ ಮೈಮರೆಯುವೆನು
ಬಣ್ಣದ ಲೋಕದಿ ಬಲ್ಲಿದನಲ್ಲ ನಾ
ಬೇವನು ಸವಿಯುತಿಹ ಆಸ್ತಿಕನು ನಾ

ಹಾಡನು ಹಾಡುವೆ ನಾನು
ನಿಮ್ಮ ಮನಸ್ಸ ಮುಟ್ಟುವಂತೆ
ಕವಿತೆ ಸಾಲುಗಳ ಕಟ್ಟುವೆ ನಾನು
ನಿಮ್ಮ ಮನ ಸೆಳೆಯುವಂತೆ.|
     
               ಸೋಮೇಶ್ ಗೌಡ

(50)   ಹೃದಯ ಕದ್ದ ಚೋರ

ಗೋವಿನ ಹಾಡ ಕೇಳಿ
ಮನಸೇಕೋ ನೊಂದಿರಲು
ಮಲ್ಲಿಗೆ ಹೂವ ನೋಡಿ
ಜೊತೆಗಾರನ ಹುಡುಕುತ್ತಿರಲು.
ಕಂಡ ಕನಸೆಲ್ಲ ಬೆಳೆಯುತ್ತಾ ಹೋಗಿರಲು
ಸಿಕ್ಕಿಲ್ಲ ಇನ್ನೂ ನನ್ನೊಲವ ಚೆಲುವ
ನನ್ನ ಹೃದಯ ಕದ್ದ ನಲ್ಲ ನೀ ಬೇಗ ಬಾರ
ನಿನಗಾಗಿ ಪ್ರೇಮದ ಕಾಣಿಕೆಯ ಇಟ್ಟಿರುವೆ
ಕಾಣದಂತೆ ಯಾರಿಗೂ ಹೃದಯದಿ ಬಚ್ಚಿಟ್ಟು
ಬೇಗ ಬಾರೋ ನನ್ನ ಅರಮನೆಯ ರಾಜ
ನೀನಿಲ್ಲದ ಅರಮೆನೆಯಲ್ಲಿ ಏನಿದೆ ಮಜ
ಬಾ ಬಾರೋ ಬೇಗ ನನ್ನೊಲವ ಚೋರ
ನೀ ಬಂದು ನನ್ನ ಮನೆ ಸೇರ...|
             
              ಸೋಮೇಶ್ ಗೌಡ

(51)  ಕನ್ನಡಮ್ಮನ ದೇವಾಲಯ


ಇದು ಕನ್ನಡಮ್ಮನ ದೇವಾಲಯ
ಕೈ ಮುಗಿದು ಒಳಗೆ ಬಾ ಗೆಳೆಯ
ನೀನು ಮೆಟ್ಟಿದ ಈ ನಾಡಿಗೆ
ವಂದಿಸು.. ಅಭಿನಂದಿಸು...
ನಿನ್ನ ಬೆಳೆಸುತ್ತಿರುವ ಈ ನಾಡನು
ಪೂಜಿಸು ...ಆರಾದಿಸು....
ಇದು ಕನ್ನಡಮ್ಮನ ಮಮತಾಲಯ
ಈ ಮಣ್ಣಿನ ಋಣ ಮರೆಯದಿರು ಎಂದೆಂದಿಗೂ.....

                      ಸೋಮೇಶ್ ಗೌಡ

(52) ಗಂಗೆ ಪುತ್ರ

ಹರಿಗೋಲ ಮೀಟಿ ನದಿಯ ದಾಟಿ
ದಡದ ಮೇಲೆ ಏರಿ ಬರುವ ಚಂದಗಾರನೆ
ರಾತ್ರಿಯೆಲ್ಲಾ ಬಲೆಯ ಬೀಸಿ
ಮೀನ ಹಿಡಿದು ತಂದ ಗಂಗೆಪುತ್ರನೆ

ಬೀದಿ ಬೀದಿ ಅಲೆದು
ಹಿಡಿದ ಮೀನ ಮಾರಿ
ಮತ್ತೆ ಬಲೆಯ ಜೊತೆ ನಡೆವ
ವೃತ್ತಿ ಧರ್ಮವ ಬಿಡದ ಬೆಸ್ತನೆ

ಸಣ್ಣ ಪುಟ್ಟ ಮೀನನೆಲ್ಲ
ಹೆಕ್ಕಿ ಹೆಕ್ಕಿ ಗುಂಪು ಮಾಡಿ
ಹುಕ್ಕಿನ ಮನುಷ್ಯನಂತೆ
ಹಿಡಿದ ಕಾರ್ಯ ಮುಗಿಸುವ ಮೀನುಗಾರನೆ..|

                   ಸೋಮೇಶ್ ಗೌಡ

(53)    ಗಬ್ಬನ್ನು ಹೊರಬಿಡಲು

ಮುಕ್ಕಿರಿದು ಓಡಳೊಳಗಿನ ಗಬ್ಬನ್ನು ಹೊರಬಿಡಲು
ಶುರುವಾಯ್ತು ಯಾರೆಂಬ ತನಿಕೆಗಳ ಸಾಲು
ಮಿತಿಮೀರಿ ಹುಡುಕಾಡಿ ಕೊನೆಗೊಬ್ಬ ಸಿಕ್ಕಿರಲು
ಕೃತ್ಯ ಮಾಡಿದಂತೆ ಅವನ ಮಾನ ತೆಗೆದಿರಲು
ಮತ್ತೆ ಬಂದಾಗವನು ಬಿಗಿಯಾಗಿ ಹಿಡಿದಿರಲು
ಅಕ್ಕ ಪಕ್ಕದವರಿಗೆ ಅವನ ಗಾಂಭೀರ್ಯ ಸೆಳೆದಿರಲು
ಸಿಡಿಯಿತು ಒಮ್ಮೆಲೇ, ಅದು ಗುಡುಗು ಬಡಿದಂತಿರಲು
ಭಯಬಿದ್ದು ಎಲ್ಲರೂ ಶಾಲೆಯಿಂದ ಹೊರ ಓಡಿರಲು.....|

                                ಸೋಮೇಶ್ ಗೌಡ

(54)  ಕನ್ನಡಿಗರ ಗತ್ತು

ಆಸೆಗಳ ಏರಿ ಬಂದವರಿಗೆ ಇಲ್ಲಿಲ್ಲ                                                  
ಅಭಿಮಾನದ ಮುತ್ತು
ಹೃದಯವಂತರಿಗೆ ಇಲ್ಲಿಲ್ಲ
ಪ್ರೀತಿಯಲಿ ಕುತ್ತು
ಹುತ್ತು ಹುತ್ತು ಸುಸ್ತಾದ
ರೈತನನ್ನು ಮರೆಯೊಲ್ಲಾ ನಾವ್ ಯಾವತ್ತೂ
ಶತ್ರುಗಳಿಗೂ ಇಲ್ಲಿಲ್ಲ ಆಪತ್ತು
ಇದು ನಮ್ಮ ಸ್ವತ್ತು
ಮೆರೆಯುತಿಹುದು ಕನ್ನಡಿಗರ ಗತ್ತು
ಕನ್ನಡವ ಹೆಗಲ ಮೇಲೊತ್ತು
ಇದು ನಮ್ಮ ಸ್ವತ್ತು
ಕರ್ನಾಟಕದ ಸಂಪತ್ತು

              ಸೋಮೇಶ್ ಗೌಡ

(55) ನಾವು ಕನ್ನಡಿಗರು

ಹಾರಡಲಿ ಹಾರಡಲಿ ಕನ್ನಡದ ಭಾವುಟ
ಮೆರೆದಾಡುತ್ತಿರಲಿ ಕರ್ನಾಟಕದ ಭೂಪಟ
ಕನ್ನಡ ಕನ್ನಡ ಎನ್ನುವ ಪದದಲಿ
ಹಚ್ಚಿರಿ ಕಿಚ್ಚನು ಒಮ್ಮೆಲೆ ಧ್ವನಿಯಲಿ
ಕನ್ನಡ ಕನ್ನಡ ಕನ್ನಡ ಎನ್ನುತಲಿ

ಮರೆಯದಿರಿ ಎಂದು ಕನ್ನಡ ಎಲ್ಲರಿಗೂ ಬಂಧು
ಮರೆತು ನೀವು ಹೊಗದಿರಿ ಎಂದೆಂದೂ ಮುಂದು
ಕೂಗಾಡಿ  ಎಲ್ಲರೂ ಮೆರೆದಾಡಿ ಎಲ್ಲರೂ
ನಾವು ಕನ್ನಡಿಗರು ನಾವು ಕನ್ನಡಿಗರು
ಕನ್ನಡವ ನಂಬಿಹ ಕರುನಾಡ ಮಕ್ಕಳು

ಕನ್ನಡವೆ ಜೀವ ಕನ್ನಡವೆ ದೈವ
ಕರ್ನಾಟಕದಲ್ಲಿಲ್ಲ ಕನ್ನಡಿಗರಿಗೆ ಅಭಾವ
ಕಟ್ಟು ಕಟ್ಟು ನೀ ಕನ್ನಡದ ನೇಗಿಲ
ಹೊಡೆದಟ್ಟು ಮನಸ್ಸಿಂದ ನಿನ್ನದಲ್ಲದ ಭಾಷೆಗಳ

ಕನ್ನಡಕೆ ನೀನಾಗು ಕರ್ಪೂರದ ಗೊಂಬೆ
ಕನ್ನಡಮ್ಮನಿಗೆ ನಿನ್ನ ಬೆಳಕು ಮೀಸಲಿಡುವಂತೆ
ಕನ್ನಡ ಕನ್ನಡ ಉಸಿರು ಉಸಿರಲ್ಲೂ ಕನ್ನಡ
ಹರಿದಾಡಲಿ ನಿಮ್ಮ ರಕ್ತದ ಕಣ ಕಣದಲ್ಲು ಕನ್ನಡ.|

ಹಾರಡಲಿ ಹಾರಡಲಿ ಕನ್ನಡದ ಭಾವುಟ
ಮೆರೆದಾಡುತ್ತಿರಲಿ ಕರ್ನಾಟಕದ ಭೂಪಟ


                    ಸೋಮೇಶ್ ಗೌಡ

(56) ಮಳೆಯ ಹನಿಗಳು

ಮಳೆಯ ಹನಿಗಳು ಮನೆಯ ಒಲಗೆಡೆ 
ನುಗ್ಗಿ ಬಂದು ಮೈ ತಣ್ಣಗಾಗಿರಲು
ಗಾಳಿ ಬೀಸಿರೆ ಹೊದಿಕೆ ಹೊತ್ತರೂ
ಛಳಿಯು ಬಿಡದೆ ಮೈಯ ಆವರಿಸಿರಲು
ಬಿಸಿ ಬಿಸಿ ಚಹಾ ಕುಡಿದು ಕುಂತರೆ
ಕೊಂಚ ಚಳಿ ನನ್ನ ಬಿಟ್ಟು ಸರಿದಿರಲು
ಮೆಲ್ಲ ಮೆಲ್ಲನೆ ಬೋರ್ಗೋರೆವ ನೀರ ಶಬ್ದ ಕೇಳಿರೆ
ಸುರಿವ ಮಳೆಯ ಆರ್ಭಟ ನಿಂತಿರಲು
ಮಲೆಯ ಹನಿಗಳು ಮನೆಯ ತಾರಿಸಿ
ಮೇಲಿನ ಛಾವಣಿಯ ಸರಿಪಡಿಸಲು ನೆನೆಪಿಸಿರಲು
ತಲೆ ಕೆರೆಯುತ್ತಾ ಕಾಸಿಗೆ ಯೋಚಿಸುತ್ತಾ
ಮೆಲ್ಲನೆ ನಿದ್ದೆಗೆ ಜಾರಿರಲು
ಮತ್ತೆ ಮಳೆಯ ಹನಿಗಳು ಬಡಿದೆಬ್ಬಿಸಿರಲು...|
                 
                          ಸೋಮೇಶ್ ಗೌಡ

(57) ನನ್ನಯ ಗೆಳತಿಯ ಕಂಗಳ ನೋಟದಿ

ಗಾಳಿಯೂ ಬೀಸಿರೆ ಮನದಲಿ
ಮೌನಾದಿ ರಾಗವು ಮೂಡುತಲಿ
ಪ್ರೇಮದ ಪಾಠದಿ ಮಂತ್ರವ ಕಲಿತಿಹ 
ಒಂಟಿ ಪೂಜಾರಿಯೂ ನಾನಿಲ್ಲಿ

ಪುರ್ರನೆ ಹಕ್ಕಿಯು ಹಾರಿತು ಕಾಣದೆ
ನನ್ನಯ ಹೃದಯದ ಬಡಿತವು ಹೆಚ್ಚಿದೆ
ಚಂದ್ರನೆ ನಿನ್ನಯ ತಿಂಗಳ ಬೆಳಕಲಿ
ಹುಣ್ಣಿಮೆ ರಾತ್ರಿಯ ತಣ್ಣನೆ ಗಾಳಿಲಿ 

ನನ್ನಯ ಗೆಳತಿಯ ಕಂಗಳ ನೋಟದಿ
ಪೆನ್ನನೆ ನಂಬಿಹ ಖಾಲಿಯ ಹಾಳೆಲಿ
ತುಂಬಿದೆ ನನ್ನಯ ಪ್ರೀತಿಯ ಸಿಂಚನ
ಕಾಣದ ಅವಳಿಗೂ ಎಂತದೋ ಕಂಪನ


ಅವಳ ಹಂಸದ ನಡಿಗೆಗೆ ನಾ ದ್ವ0ಸವಾದೆ
ಪ್ರೇಮದ ಮಾಟಕೆ  ನಾ ಬಂದಿತನಾದೆ
ಗಾಳಿಯೂ ಬೀಸಿದ ರಭಸವು ನನ್ನೇಕೆ
ತೂರಿದೆ ಪ್ರೇಮದ ಮಾಯಾ ಲೋಕಕೆ.|
                
                       ಸೋಮೇಶ್ ಗೌಡ

(58)ಮಂಪರು ಕಣ್ಣಿಗೆ ಕನ್ನಡಕದ ಅಂದ 


ದೂರದಿ ಇರುವ ಸುಂದರ ಚಿತ್ರವು
ಸ್ಪಷ್ಟದಿ  ಕಾಣದ ಕಣ್ಣಿಗೇಕೆ ಈ ಅಂದವು
ಬಣ್ಣ ಬಣ್ಣದ ರಂಗೋಲಿಯ ಚಂದವು
ಸೆಳೆಯದ ನನಗೆ ಬೇಕೆ ಕನ್ನಡಕವು

ಅರ್ಧದ ವಯಸ್ಸಿಗೆ ಕಣ್ಣಿನ ರೋಗವು
ತಂದಿತೆ ಎನಗೆ ಮಂಪರು ನೋಟವ
ಮಂಜು ಮಂಜಿನ ಈ ಕಣ್ಣಿಗೆ ಹಂಸವು
ಕಂಡಿತು ತೇಲುವ ಹೊಂಬಾಳೆಯ ರೂಪವು

ಸೂರ್ಯನ ಕಿರಣಕೆ ನನ್ನಯ ಕಂಗಳು
ಮುದುಡಿದ ತಾವರೆಯಂತೆ ಮುದುಡಿತು
ಬೀಸುವ ಗಾಳಿಗೆ ನನ್ನಯ ಕಂಗಳು
ಸುಮ್ಮನೆ ಕಣ್ಣೀರ ಧಾರೆ ಹರಿಸಿತು


                       ಸೋಮೇಶ್ ಗೌಡ

(59) ವರವ ಕೊಡು ತಾಯೆ ವರಮಹಾಲಕ್ಷ್ಮಿ


ವರವ ಕೊಡು ತಾಯೆ ವರವ ಕೊಡು ತಾಯೆ
ನಿನ್ನ ನಂಬಿಹ ಜನರ ನೀ ಕಾಯೆ ತಾಯೆ
ವರವ ಕೊಡು ಅಮ್ಮ ವರವ ಕೊಡು ನಮ್ಮಮ್ಮ
ನಿನ್ನ ಭಜಿಸುತ ಕುಂತಿಹೆವು ನಾವಮ್ಮ
ವರವ ಕೊಡು ತಾಯೆ ವರವ ಕೊಡು...

ನಿನ್ನ ಪೂಜೆಗೆಂದೇ ಈ ದಿನವ ಮುಡಿಪಿಟ್ಟು
ಲಕ್ಷ್ಮಿ ಲಕ್ಷ್ಮಿ ಎಂದು ಜಪಿಸುತ್ತಿರುವೆವು ಒಗೊಟ್ಟು
ವರಮಹಾಲಕ್ಷ್ಮಿಯೇ ಒಲಿದು ಬಾ ನಮ್ಮಮ್ಮ
ಕಷ್ಟ ಕಾರ್ಪಣ್ಯಗಳ ಸರಿಸಲು ನೀ ಬಾರಮ್ಮ
ವರವ ಕೊಡು ತಾಯೆ ವರವ ಕೊಡು.....

ಸಿಹಿಯನ್ನು ಮುಂದಿಟ್ಟು ಹಣೆಯಲ್ಲಿ ಬೊಟ್ಟಿಟ್ಟು
ನಿನ್ನ ನಾಮದಿ ನಾವು ಮುಳುಗಿರಲು ಇಂದು
ಬಾರಮ್ಮ ನಮ್ಮಮ್ಮ ನಮ್ಮನೆಯ ಸೇರು
ನಿನಗಾಗಿ ಸಿದ್ದವಿದೆ ನಮ್ಮ ಭಕುತಿಯ ತೇರು

ಬಾರಮ್ಮ ನಮ್ಮಮ್ಮ ಒಲಿದು ನೀ ಬಾರಮ್ಮ
ನಮ್ಮ ಕರೆಯ ನೀ ಸ್ವೀಕರಿಸಮ್ಮ
ವರವ ಕೊಡು ತಾಯೆ ವರವ ಕೊಡು ತಾಯೆ
ನಿನ್ನ ನಂಬಿಹ ಜನರ ನೀ ಕಾಯೆ ತಾಯೆ....

                       ಸೋಮೇಶ್ ಗೌಡ

(60)ಕವಿತಾ ಭಾಷಣ

ಏನ ಹೇಳಲಿ ನಾನು
ಏನ ಕೇಳುವುರಿ ನೀವು
ಹೇಳಲೇನಿಲ್ಲ ನನ್ನಲ್ಲಿ
ಇರುವುದೆಲ್ಲ ಕವಿತೆಗಳ ಸಾಲು

ನಿಮಗಾಗಿ ನಾ ಬರೆದೆ ಒಂದು ಕವಿತೆ
ಅದ ಹೇಳಲೆಂದೆ ನಾನಿಲ್ಲಿ ಇಂದು ನಿಂತೆ
ನಿಮ್ಮ ಮುಖದ ಮೇಲಿನ ಮುಗುಳ್ನಗೆ ಹೀಗೆ ಇರಲಿ
ನಿಮ್ಮ ಕನಸುಗಳು ನನಸಾಗೋ ಕಾಲ ಬೇಗ ಬರಲಿ

ಹೀಗೆ ಹಾಡಿ ನಲಿಯುತ್ತಿರಿ ನೀವು ಎಂದೆಂದೂ
ನೋವಿಗೆ ಆಶ್ರಯ ಕೊಡದಿರಿ ನಿಮ್ಮ ಬಾಳಲ್ಲಿ ಎಂದೂ
ನನ್ನ ಮಾತಿಗೆ ನಿಮ್ಮ ಮೌನವು..ಹೇಳುತ್ತಿದೆ...ಹಾರೈಸುತ್ತಿದೆ
ಕಂದ ನೀ ಹೀಗೆ ಕವಿತೆ ಬರೆಯುತ್ತಿರು ಎಂದೆಂದೂ....

                                  ಸೋಮೇಶ್ ಗೌಡ



(61)ರಮ್ಯಕ ತಾಣ

ರಾರಾಜಿಸುತ್ತಿದೆ ರಮ್ಯಕ ತಾಣ
ಅಂದವ ಸವಿಯುತಿಹ ಕಣ್ಣಿಗೆ ಔತಣ
ನೀರಿನ ಶಬ್ದಕೆ ಕಿವಿಗಳು ತಲ್ಲಣ
ಮೈ ಜುಂ ಜುಂ ಎನ್ನಿಸುವ ಈ ಕ್ಷಣ

ಸೂರ್ಯನ ಕಿರಣಕೆ ಕಾಮನಬಿಲ್ಲು ರಂಜಿಸಿರೆ
ನೀರು ಝರಿ ಝರಿಯಾಗಿ ಹರಿದಿರೆ
ಮೌನವ ಮುರಿದು ವಾದ್ಯವ ನುಡಿಸಿರೆ
ಮನದಲಿ ಆಶಾಕಿರಣ ಮೂಡಿರೆ

ಮೇಲಿಂದ ಬೀಳುವ ಆ ನೀರಿನ ಗಾತ್ರವು
ಬಿದ್ದು ಹೊಂಡ ಸೇರುವ ಆ ರಭಸವು
ಎಲ್ಲರ ಸೆಳೆಯುತ್ತಿದೆ ಜೋಗ ಜಲಪಾತವು
ಕರ್ನಾಟಕದಲ್ಲಿದೆ ಇದಕೆ ಪ್ರಮುಖ ಪ್ರಾತ್ರವು.|

                               ಸೋಮೇಶ್ ಗೌಡ

(62)ಕವಿತೆ ಬರೆಯಬೇಕು 
      
     ಚಿಕ್ಕದಾಗೆ ಚೊಕ್ಕವಾಗಿ
       ಕವಿತೆ ಬರೆಯಬೇಕು
ಅದು ಜನರ ಮನದಲ್ಲಿ ಉಳಿಯಬೇಕು
        ಪದಗಳ ಕಟ್ಟಬೇಕು
      ಕಟ್ಟಿದ ಪದಗಳ ಅರ್ಥವು
  ಮುಗಿಲ ಮುಟ್ಟುವಂತಿರಬೇಕು
        ಪೆನ್ನ ಹಿಡಿಯಬೇಕು
  ಹಿಡಿದ ಪೆನ್ನಿಂದ ಇಂಕ ಕಕ್ಕಿಸಿ
        ಕವಿತೆ ಗೀಚಬೇಕು
  ಆಶ್ರಯ ಕೊಟ್ಟ ಹಾಳೆಗೂ
        ಬೆಲೆ ಸಿಗಬೇಕು
   ಹಾಗೆ ಕವಿತೆ ಬರೆಯಬೇಕು 
    ಅದು ಬಾಡಿಹೋಗದಂತೆ
        ಕಾಪಾಡಬೇಕು
    
             ಸೋಮೇಶ್ ಗೌಡ

(63)ಅಮ್ಮನಿಗಾಗಿ ಪ್ರೀತಿಯ ನುಡಿಗಳು

ಲಾಲಿ ಹಾಡಿ ಬೆಳೆಸಿದಂತ ನನ್ನ ಅಮ್ಮಗೆ
ನಿನ್ನ ಕಂದನ ಕೋಟಿ ನಮನಗಳು
ಸಿಹಿ ಮುತ್ತು ಕೊಟ್ಟು ಸಲುಹಿದಂತ ಪ್ರೀತಿ ಅಮ್ಮಗೆ
ನಿನ್ನ ಮುದ್ದು ಮಗನ ಪ್ರೀತಿಯ ನುಡಿಗಳು

ಅಮ್ಮ ನಿನ್ನಯ ಹೆಸರನು ನನ್ನಯ ಮನದಲಿ
ಅಳಿಸದಂತೆ ಬರೆದಿಹನು ಆ ದೇವರು
ನೀ ಕೊಟ್ಟ ಕೈತುತ್ತು ನನ್ನಯ ಬದುಕಲಿ
ಮರೆಯಲಾಗದ ಉಡುಗೊರೆ, ಅಮ್ಮ ನೀ ನನಗೆ ದೇವರು

ನಿನ್ನಯ ಹೊಗಳಲು ನನ್ನಯ ಮಾತುಗಳು
ಪದಗಳ ಹುಡುಕುವಂತಾಗಿದೆ 
ನಿನ್ನಯ ಋಣ ತೀರಿಸಲು ನನ್ನಯ ಮನವು
ಇನ್ನೊಂದು ಜನ್ಮ ನೀಡುವಂತೆ ಕೋರುತ್ತಿದೆ.|

                             ಸೋಮೇಶ್ ಗೌಡ
                    

(64)ಗೆಳೆತಿಯ ನೋಟ ಚೆಂದ

ಗೆಳೆತಿಯ ನೋಟ ಚೆಂದ ಮಾತು ಇನ್ನೂ ಚಂದ
ನನ್ನಯ ಸನಿಹದಲ್ಲಿ ಅವಳಿರಲು ಬಲು ಚೆಂದ
ಪ್ರೇಮದ ಹಾಡಿಗಾಗಿ ರಾಗವ ಸೇರೀಸೋಣ
ಸೇರಿದ ರಾಗದಲಿ ಮೈ ಮರೆಯೋಣ.....

ನನ್ನನು ನೀ ನೋಡಿ ಹೃದಯವ ಕೆಣಕಿರಲು
ನಿನ್ನ ನೋಟಕೆ ನಾ ಬಾಗಿ  ಸೋತಿರಲು
ಬಾರೆ ಗೆಳತಿಯೇ ನನ್ನ ಪ್ರೇಮದ ಅರಮನೆಗೆ
ಬಂದು ಸೇರು ನೀ ನನ್ನ ಮನದೊಳಗೆ......

ಗೆಳತಿಯ ನೋಟ ಚೆಂದ ನಕ್ಕರೆ ಬಲು ಚೆಂದ
ನಕ್ಕಾಗ ಹರಳುವ ತುಟಿಗಳ ಹೊಳಪಿನ ಅಂದ
ನಿನ್ನಯ ಅಂದಕೆ ಸಾಟಿಯೇ ಇಲ್ಲ ಯಾರು
ನಿನ್ನಯ ಮಾಟಕೆ ಸೊಲದವರು ಯಾರು...
ಗೆಳತಿಯ ನೋಟ ಚೆಂದ....!!!

                          ಸೋಮೇಶ್ ಗೌಡ

(65)   ನೆಗಡಿಯ ಮಹಿಮೆ

ಚಿಕ್ಕಂದಿನಿಂದಲೂ ನನಗು ಅದಕ್ಕೂಬಿಡಲಾರದ ನಂಟು
ಹದಿನೈದು ದಿನಕೊಮ್ಮೆ ಭೇಟಿ ಕೊಡುವ ಬಂಧು
ಎಂಥ ಪರಿಸ್ಥಿತಿಯಲ್ಲೂ ಮರ್ಯಾದೆ ತೆಗೆಯುವ ಏಕೈಕ ಸಾಧನ
ಎಲ್ಲರ ಕಾಡುವ ವೈರಿ ಅದೇ ನೆಗಡಿ

ಮಳೆ ನೀರು ಗೋಣಿ ಚೀಲವನ್ನು ತೇವ ಮಾಡುವಂತೆ
ಇದು ನನ್ನ ಕರವಸ್ತ್ರವನ್ನೆಲ್ಲಾ ಒದ್ದೆ ಮಾಡಿಬಿಡುತ್ತದೆ
ಕಣ್ಣನ್ನು ಕೆಂಪಗೆ ಮಾಡುವುದಲ್ಲದೇ
ಒಮ್ಮೊಮ್ಮೆ ಅದರಿಂದಲೂ ನೀರ ಹರಿಸುತ್ತದೆ

ಕಬ್ಬಿಣವನ್ನು ತಗ್ಗಿಸಲು ಕೆಂಡ ಬಳಸುವಂತೆ
ನನ್ನ ತಗ್ಗಿಸಲು ಇದು ಮೂಗನ್ನೆ ಕೆಂಡ ಮಾಡಿಕೊಳ್ಳುತ್ತದೆ
ಸುಡುವ ಕೆಂಡವ ತುಳಿಯಬಹುದು 
ಆದರೆ ಉರಿವ ಮೂಗಿನ ಸ್ಥಿತಿ ಹೇಳತೀರದು
ನೆಗಡಿಯ ಮಹಿಮೆಯನು ಮರೆಯಾಲಾಗದು.|

                           ಸೋಮೇಶ್ ಗೌಡ

(66)   ಗೆಳತಿ

    ಇಂಪಾದ ರಾಗವು ಹೃದಯದಿ
    ತಂಪಾದ ಗಾಳಿಯು ಉಸಿರಲಿ
    ಮುಗಿಯದ ಸಂತಸ ಎದೆಯಲಿ
    ಗೆಳತಿ ನೀನಿರಲು ನನ್ನ ಜೊತೆಯಲಿ

ಒಂದೇ ಪದ ಸಾಕು ಒಂದು ಕವಿತೆ ಮೂಡಲು
ಒಂದು ಮಾತು ಸಾಕು ಒಂದು ಸಂಬಂದ ಹೊಡೆಯಲು
ಒಂದೆ ಒಂದು ಬಯಕೆ ಸಾಕು ಆಸೆಗಳು ಹುಟ್ಟಲು
ಒಂದೆ ಒಂದು ನೋಟ ಸಾಕು ಗೆಳತಿ ನೀ ನನ್ನ ಸೆಳೆಯಲು

ಪ್ರಕೃತಿಗೆ ಸಮನಾದ ಸೌಂದರ್ಯ ನಿನ್ನದು
ಕೋಗಿಲೆಗೂ ಮೀರಿದ ಮಾಧುರ್ಯ ನಿನ್ನದು
ಪ್ರಪಂಚದಲ್ಲಿ ನಿನಗಿಂತ ಮಿಗಿಲಾದ ವ್ಯಕ್ತಿ ನನಗ್ಯಾರಿಲ್ಲ
ಗೆಳತಿ ನಿನ್ನ ಬಿಟ್ಟು ನನಗೆ ಬೇರಾರೂ ಬೇಕಿಲ್ಲ.|

                        ಸೋಮೇಶ್ ಗೌಡ

(67)ಅಮೃತ ಬಳ್ಳಿ

ಆರಂಭವಾಯ್ತು ನಮ್ಮ ಈ ಸ್ನೇಹ
ಅಂತ್ಯವೇ ಇಲ್ಲಯ್ಯ
ಆಧಾರವಾಯ್ತು ನಮಗಿ ಈ ನಂಬಿಕೆ
ಕೆಡಗುವವರು ಯಾರಾಯ್ಯ

ನೋಡಿರಿ ನಮ್ಮ ಈ ಸ್ನೇಹವ
ಅಪರೂಪದ ಅಭಿಮಾನವ

ಮುಸ್ಸಂಜೆಯ ಕಡಲ ಅಲೆಗಳ ಹಾಗೆ
ಕ್ಕೇರುತ್ತಿದೆ ನಮ್ಮ ಈ ಪ್ರೀತಿ
ನೀರಿಗಾಗೆಂದೆ ಸೃಷ್ಟಿಯಾದ ಕೊಡದ ಹಾಗೆ
ಒಂದಾಗಿದೆ ನಮ್ಮಿಬ್ಬರ ಪ್ರಾಣ

ದೇವರ ಸೃಷ್ಟಿಯೋ ..ನನ್ನಯ ಭಾಗ್ಯವೋ
ಯಾವ ಜನ್ಮದ ಅನುಭಂದವೋ
ಕಾಣದ ಪ್ರಪಂಚಕ್ಕೆ ಕಾಲಿಟ್ಟ ನನಗೆ
ಹುಡುಕದೇ ಸಿಕ್ಕ ಅಮೃತ ಬಳ್ಳಿ ಈ ಸ್ನೇಹ.|

                         ಸೋಮೇಶ್ ಗೌಡ

(68) ಸೋಮಾರಿಯಾದ ಸಂಸಾರಿ.!!!

ಜೇಬಿಂದ ಕೇಳಬಿದ್ದ ಕಾಸನ್ನು ಎತ್ತಲು
ಕಾಲನ್ನೇ ಬಳಸುವನು ಸೋಮಾರಿ ಸೋಮಾರಿ
ಮುಂದೆ ಹೋಗುತ್ತಿದ್ದ ಗುರುವನ್ನು ಕೂಡ
ಕೈತಟ್ಟಿ ಕರೆಯುವನು ಸೋಮಾರಿ ಸೋಮಾರಿ

ಸೂರ್ಯ ನೆತ್ತಿಗೇರಿ ಅರ್ಧ ದಿನ ಕಳೆದಿರಲು
ಎದ್ದಿಲ್ಲ ಇನ್ನೂ ಸೋಮಾರಿ ಸೋಮಾರಿ
ಬಸ್ಸಲ್ಲಿ ಪ್ರಯಾಣಿಸಲು ಇಳಿವ ಸ್ಥಳ ಬಂದಿರಲು
ಕುಂತ ಜಾಗದಿಂದ ಕದಲಿಲ್ಲ ಇನ್ನೂ ಸೋಮಾರಿ ಸೋಮಾರಿ
ಸೋಮಾರಿ ಸೋಮಾರಿ ಇವನೊಬ್ಬ ಸೋಮಾರಿ

ಮನೆಯ ಮುಂದೆ ಮುಳ್ಳಿನ ಗಿಡವೊಂದು ಹಬ್ಬಿರಲು
ಆದ ದಾಟಿಕೊಂಡೆ ಹೋಗುವನಿವನು ಸೋಮಾರಿ ಸೋಮಾರಿ
ಇವನ ಸೋಮಾರಿತನ ಕಂಡ ತಾಯವ್ವ ಹೆದರಿ
ಕಟ್ಟುತ್ತಾಳೆ ಇವನಿಗೊಂದು ಜೋಡಿ

ಸೋಮಾರಿ ಆದ ಈಗ ಸಂಸಾರಿ ಸಂಸಾರಿ....|

                                ಸೋಮೇಶ್ ಗೌಡ

(69)ನಮ್ಮೂರ ದೇವರ ಮೆರವಣಿಗೆ 

ನಡೆಯುತ್ತಿತ್ತು ನಮ್ಮೂರ ದೇವರ ಮೆರವಣಿಗೆ 
ತುಂಬು ಜನರ ಸಮ್ಮುಖದಲ್ಲಿ
ರಾಶಿ ರಾಶಿ ಹೂಗಳ ಎರೆಚಾಡುತ್ತಲಿ
ಸಿಡಿಮದ್ದುಗಳ ಸದ್ದಿನಲಿ

ನಡೆಯುತ್ತಿತ್ತು ನಮ್ಮೂರ ದೇವರ ಮೆರವಣಿಗೆ 
ಬಣ್ಣ ಬಣ್ಣದ ವಿದ್ಯುತ್ ಬಲ್ಪ್ಗಳ ಬೆಳಕಲ್ಲಿ
ಕೂಗಾಡುತ್ತಿದ್ದ ಭಕ್ತರ ಓಂಕಾರದಲ್ಲಿ
ಡೋಲು ತಮಟೆಗಳ ಬಡಿಯುತ್ತಲಿ

ನಡೆಯುತ್ತಿತ್ತು ನಮ್ಮೂರ ದೇವರ ಮೆರವಣಿಗೆ 
ಸುಡುವ ಕೆಂಡವ ತುಳಿಯುತ್ತಲಿ
ಮುಗಿಬಿದ್ದ ಜನರ ನುಗ್ಗಾಟದಲಿ
ಭಕ್ತಿಯ ಆರತಿ ಬೆಳಗುತಲಿ

                   ಸೋಮೇಶ್ ಗೌಡ

(70)  ಶ್ರೀ ರಕ್ಷೆ

ಅಣ್ಣ ಅಣ್ಣ ಎನ್ನುವ ಪದದಲೆ
ಅಡಗಿದೆ ರಕ್ಷಣೆ ಎಂಬ ಅಸ್ತ್ರ
ನನ್ನ ರಕ್ಷಿಸುವ ಈ ಅಣ್ಣನಿಗೆ
ಕಟ್ಟುವೆ ಪ್ರೀತಿಯ ಈ ರಕ್ಷಾ ಬಂಧನ

ಭೀಮನ ಬಲವುಳ್ಳವನಾಗುತ್ತಾನೆ
ಇನ್ನೊಬ್ಬರು ನನ್ನ ಕೆಣಕಿದಾಗ
ಘರ್ಜಿಸುವ ಸಿಂಹದಂತಾಗುತ್ತಾನೆ
ನನ್ನ ಬಗ್ಗೆ ಯಾರಾದರೂ ಕೆಟ್ಟದ್ದು ಮಾತಾಡಿದಾಗ

ವೀರನಂತೆ ನೂರು ವರ್ಷ  ಬದುಕಲಿ
ಯಶಸ್ಸು ಸದಾ ಅವನದಾಗಿರಲಿ
ಅಣ್ಣನ ರಕ್ಷಣೆ ನನಗಾಗೆ ಮುಡಿಪಾಗಿರಲೆಂದು 
ಬಂಧಿಸುವೆ ನನ್ನಯ ಈ ರಕ್ಷಾ ಬಂಧನದಿಂದ.|

                    ಸೋಮೇಶ್ ಗೌಡ

(71)ಗೆಳೆಯನ ಪಾತ್ರ

ಅಪ್ಪಿ ಬೆಳೆಸಿದ ಅಮ್ಮನಂತೆ
ತಪ್ಪಿ ನಡೆದಾಗ ಗುರುವಿನಂತೆ
ಮುಪ್ಪಿನತನಕ ಸಹಕರಿಸುವ
ಒಪ್ಪಿ ಕೈಜೋಡಿಸುವ ಗೆಳೆಯನೆ

ಉಪ್ಪಿಲ್ಲದೆ ರುಚಿಕೊಡದ ಸಾಂಬಾರ್ನಂತೆ
ನನ್ನ ಬಾಳಲ್ಲಿ ನಿನ್ನ ಪಾತ್ರ
ಸೊಪ್ಪಿಲ್ಲದೆ ಬದುಕದ ಕುರಿಯ ಹಾಗೆ
ನೀನಿಲ್ಲದೆ ನಡೆಯದು ನನ್ನ ಜೀವನದ ರಥ

ಒಪ್ಪಿದೆ ನಿನ್ನ ಈ ಪ್ರೀತಿಯ
ಅಪ್ಪಿಕೊ ಬಾರೋ ಗೆಳೆಯ
ನೋಡಾಗ ನನ್ನ ಮುಖದ ಕಳೆಯ
ಸುರಿಸಬಲ್ಲೆ ಪ್ರೀತಿ ಮಳೆಯ.|

          ಸೋಮೇಶ್ ಗೌಡ


(72) ಮಾಸದ ನೆನಪುಗಳು

      ನಾನು ಚಿಕ್ಕವಾನಿದ್ದಾಗ
      ಹಾಡುತ್ತಿದ್ದೆ ಕುಣಿಯುತ್ತಿದ್ದೆ
ಕೀಟಲೇ ಮಾಡುತ್ತಾ ಕಾಲ ಕಳೆಯುತ್ತಿದ್ದೆ

        ಚಡ್ಡಿ ಹರಿದಿದ್ದರು
ಮತ್ತೊಮ್ಮೆ,ಮಗದೊಮ್ಮೆ ಎಂದು
ಸಿಮೆಂಟ್ ಕಲ್ಲ ಮೇಲೆ ಜಾರಿ ಹೋಗುತ್ತಿದ್ದೆ

      ಗೆಳೆಯರ ಜೊತೆ 
 ಗುದ್ದಾಡಿಕೊಂಡೆ ಆಟವಾಡುತ್ತಿದ್ದೆ
   ಓದುತ್ತಿದ್ದೆ,ಮರೆಯುತ್ತಿದ್ದೆ
 ಮಂಗನಂತೆ ಮರ ಹೇರುತ್ತಿದ್ದೆ

 ಆ ದಿನಗಳು ಎಂತಹ ಕ್ಷಣಗಳು
 ದ್ರೊಣಚಾರ್ಯರಂತೆ ನಿಂತು
ತಿದ್ದಿ ಬುದ್ದಿ ಹೇಳಿದ ತಾತನ ನುಡಿಗಳು
   

ಅಮ್ಮನೊಂದಿಗೆ ಮುನಿಸಿಕೊಂಡು ಮಲಗಿದ್ದಾಗ'
    ಹೊಡೆದಾದರೂ ಎಬ್ಬಿಸಿ
  ಕೈತುತ್ತು ತಿನಿಸಿದ ಕ್ಷಣಗಳು

ಹೇಳುತ್ತಾಹೋದರೆ ಮುಗಿಯದ ಈ ಸಾಲುಗಳು
   ಎಂದೆಂದೂ ಮಾಸದ ನೆನಪುಗಳು
    ಅವೇ ನನ್ನ ಬಾಲ್ಯದ ದಿನಗಳು
  
                 ಸೋಮೇಶ್ ಗೌಡ

(73)ಬಿಡದ ಪ್ರಯತ್ನ

ನಿರಂತರ ಹುಡುಕಾಟದಲ್ಲಿ
ಕಾಣದ ಪ್ರಪಂಚದಲ್ಲಿ
ಸಾವಿರ ಕನಸುಗಳ ಕಟ್ಟಿಕೊಂಡು
ಸಾಗುತ್ತಿರುವ ಪಯಣಿಗರು ನಾವು..|

ಹುಡುಕಾಟ ಯಶಸ್ವಿ ಆಗುವುದೋ ಇಲ್ಲವೋ
ಕನಸುಗಳು ನನಸಾಗುತ್ತೋ ಇಲ್ಲವೋ
ಆದರೂ ಜೀವನದ ದೋಣಿಯಲ್ಲಿ ತೇಲುತ್ತಾ ಇರುತ್ತೇವೆ
ಪ್ರಯತ್ನವ ಬಿಡದೆ ಹುಡುಕಾಡುತ್ತಿರುತ್ತೇವೆ

ದಡ ಸೇರುವುದು ಯಾವಾಗ.....
ಗುರಿ ಮುಟ್ಟುವುದು ಯಾವಾಗ....
ಉತ್ತರವೇ ಸಿಗದೆ..ಹುಡುಕುವ ಪ್ರಯತ್ನವನ್ನು ಬಿಡದೆ
ಸಾಗುತ್ತಿದೆ ನಮ್ಮ ಸವಾರಿ ....ಎಲ್ಲರ ಜೊತೆ ಸೇರಿ.|
                       
                                ಸೋಮೇಶ್ ಗೌಡ


(74) ಹೆಂಗಯ್ಯ ಬಾಳುವುದು ಬಣ್ಣದ ಲೋಕದಲ್ಲಿ

ಕುಂಟುತ್ತಾ ಸಾಗಿದೆ ಕೂಲಿಗಾರನ ಕುದುರೆ
ಗುರಿ ಮುಟ್ಟುವ ನಂಬಿಕೆನೇ ಇಲ್ಲದೆ
ಕುಣಿದಾಡುತ್ತಾ ಸಾಗಿದೆ ಕುಬೇರನ ಕುದುರೆ
ಗುರಿ ಮುಟ್ಟಿದರು ನಿಲ್ಲದೆ

ಹೆಂಗಯ್ಯ ಬಾಳುವುದು ಬಣ್ಣದ ಲೋಕದಲ್ಲಿ
ಬಣ್ಣ ಹಚ್ಚದಿದ್ರೆ ಬದುಕೋಕೆ ಆಗಲ್ಲ ಇಲ್ಲಿ
ಒಂದು ಮದ್ವೆ ಮಾಡೋಕಂತ ಹೇಳ್ತರಂತೆ ಸಾವ್ರ ಸುಳ್ಳು
ಇಲ್ಲಿ ಬದುಕ್ಬೇಕಂದ್ರೆ ಬೇಕು ಕೋಟ್ಯಂತರ ಸುಳ್ಳು

ಕೂಲಿಗಾರನ್ ದಾರಿ ತುಂಬಾ ಇರೋದೆಲ್ಲಾ ಕಲ್ಲು ಮುಳ್ಳು
ಕುಬೇರನ್ ದಾರಿಯಲ್ಲಿ ತು0ಬೈತೆ ಬರಿ ಸುಳ್ಳು
ಹ್ಯಾಂಗ್ ಹ್ಯಾಂಗೊ ಬದ್ಕ್‌ಬೇಕಂತ ಹಿಂಗೆಲ್ಲಾ ಮಾಡ್ತಾರ್ ನಮ್ ಜನ
ಹಿಂಗ್ಯಲ್ಲ ಮಾಡ್ಲಿಲ್ಲ ಅಂದ್ರೆ ಇಲ್ಲಿ ಬದುಕೋದೇ ಕಷ್ಟ ನೋಡಣ್ಣಾ.|

                                        ಸೋಮೇಶ್ ಗೌಡ

(75) ತಪ್ಪಿದ ಗುರಿ

ಪಡ್ಡೆ ಹುಡುಗನೊಬ್ಬ ಒಂಟಿಕಾಲ ಮೇಲೆ ನಿಂತು
ಚಡ್ಡಿ ಹಾಕದೇನೇ ಹಕ್ಕಿ ಹೊಡೆಯುತ್ತಿದ್ದನು
ಕೊಬ್ಬಿದಂತ ಹಕ್ಕಿಯೊಂದು ರೆಂಬೆ ಮೇಲೆ ಕೂತು
ಕುಕ್ಕಿ ಕುಕ್ಕಿ ತಿನ್ನುತ್ತಿತ್ತು ಮಾವಿನ ಹಣ್ಣನು

ಪಡ್ಡೆ ಹುಡುಗನ ಆಸೆ ಜಾಸ್ತಿಯಾಗಿ ಕಲ್ಲ ಎತ್ತಿಕೊಂಡು
ಹಕ್ಕಿ ಇರುವ ಕಡೆಗೆ ಗುರಿಯ ಇಟ್ಟೆ ಬಿಟ್ಟನು
ಹಕ್ಕಿಗಿಟ್ಟ ಗುರಿಯು ತಪ್ಪಿ ಹೋಗಿ
ಕುಕ್ಕಿ ತಿನ್ನುತ್ತಿದ್ದ ಮಾವಿನ ಹಣ್ಣ ಕೆಡಗೆ ಬಿಟ್ಟನು

ರಭಸದಿಂದ ಹಕ್ಕಿ  ಹೆದರಿ ಹಾರಿ ಹೋಗಿತ್ತು
ಹಕ್ಕಿಯ ಬಿಟ್ಟ ಪುಕ್ಕ ಮಾತ್ರ ಕೆಳಗೆ ಬಿದ್ದಿತ್ತು
ಮತ್ತೆ ಮತ್ತೆ ಹಕ್ಕಿ ಇವನ ಕಲ್ಲಿಗೆ ಸಿಗುತ್ತಾ
ಒಮ್ಮೆ ತಪ್ಪಿದ ಗುರಿ ಮತ್ತೆ ಇವನ ಪಾಲಾಗುತ್ತಾ.|

                                 ಸೋಮೇಶ್ ಗೌಡ

(76)ಬಡ್ಡಿ ವಸೂಲಿ ಸರಸಮ್ಮ

ಬೆಳಗ್ಗೆ ಬೆಳಗ್ಗೆ ಎದ್ದು 
ಬಡ್ಡಿ ವಸೂಲಿ ಮಾಡಿ 
ಅತ್ತ ಇತ್ತ ನೋಡದೇನೆ
ಓಡಿಬಂದ್ಲು ನೋಡು ನಮ್ ಸರ್ಸಿ 

ಮಂಚದ ಮೇಲೆ ಕೂತು
ಬಡ್ಡಿ ದುಡ್ದ ತೆಗ್ದು'
ಎಣಿಸುಕೊಂಡು ಕುಂತವ್ಳೆ
ನೋಡು ನೋಡು ನಮ್ ಸರ್ಸಿ

ಎಣಿಸ್ತಾ ಎಣಿಸ್ತಾ
ಕುಣಿದಾಡ್ತಾವ್ಳೆ ನಮ್ ಸರ್ಸಿ
ಮಂಚಾನೆ ಮುರಿದು ಬೀಳ್ವನ್ಗೆ.

ಇರೋ ಬರೋ ದುಡ್ಡನೆಲ್ಲ 
ಎತ್ಕೊಂಡು ಹೋಗಿ ಮಡ್ಗ್ತಾವ್ಳೆ
ಬೀರ್ನಲ್ಲಿ ಯಾರ್ಗು ಕಾಣ್ಣ್ದನ್ಗೆ

ನೋಡು ನೋಡು ನಮ್ ಸರ್ಸಿ
ಹಿಂಗೆಲ್ಲಾ ಮಾಡ್ತಾವ್ಳೆ...
ಕಣ್ಣ್ ಮುಚ್ಕೊಂಡ್
ಒಬ್ಬೊಬ್ಬಳೆ ಮಾತಾಡ್ತಾವ್ಳೆ
ನಲಿದಾಡ್ತಾವ್ಳೆ ಕುಣಿದಾಡ್ತಾವ್ಳೆ...!!!!

          ಸೋಮೇಶ್ ಗೌಡ      

(77) ನಿದ್ದೆ ಬರದ ಹೊತ್ತಿನಲ್ಲಿ
         ಪೆದ್ದನ ಕಾಟ

ನಿದ್ದೆ ಬರದ ಹೊತ್ತಿನಲ್ಲಿ
ಎದ್ದೆದ್ದು ಕುಳಿತಾಗ
ಪೆದ್ದನೊಬ್ಬ ನನ್ನ ಮುಂದೆ
ಗೂಬೆಯಂತೆ ನಿಂತಾಗ
ಗುದ್ದಿ ಗುದ್ದಿ ಇಲ್ಲ ಸಲ್ಲದ
ಪ್ರೆಶ್ನೆ ಕೇಳಿ ಕಾಡಿದಾಗ
ಮುದ್ದು ಮುಖವು ಕೂಡ
ಕೋಪದಿಂದ ಕೆರಳಿದಾಗ
ಶುರುವಾಯ್ತು ಆಕ್ರಂಧನ 
ಪೆದ್ದನ ಅಳಲು ಗಾನ
ಹಸಿದ ಹುಲಿ ಕೆಣಕಿದಾಗ
ಕೊಬ್ಬಿದ ಹಾವ ತುಳಿದಾಗ
ಏನಾಗುವುದು ನೀ ಬಲ್ಲೆಯಾ
ಪೆದ್ದನ ಸ್ಥಿತಿಯ ನೀನೀಗ ಹೇಳುವೆಯ.|

               ಸೋಮೇಶ್ ಗೌಡ

(78) ನಿದ್ದೆ ಇಲ್ಲದೆ  ನೆಮ್ಮದಿ ಇಲ್ಲ


ಒಂದು ಎರಡು ಮೂರು ಗಂಟೆಯಾದರೂ
ಕಣ್ಣಿಗೆಕೊ ನಿದ್ದೆಯಂತೂ  ಬಾರದು
ರಾತ್ರಿಯೆಲ್ಲ ಎದ್ದು ಕುಳಿತು ಮಲಗುವ
ಚಟವಂತೂ ನನ್ನ ಬಿಟ್ಟು ಹೋಗದು

ಏಕೆ ಏಕೆ ನನ್ನನ್ನೇಕೆ
ಕನಸುಗಳು ಹೀಗೆ ಕಾಡುತ್ತಿರುವವೋ
ಜೋಕೆ ಜೋಕೆ ಮುಂದೆ ಜೋಕೆ
ಎಂದೇಕೆ ನೆನಪುಗಳು ನನ್ನ ಚುಚ್ಚುತ್ತಿರುವವೋ

ಬಯಸಿದ್ಯಾವ್ದು ಹಾಗ್ತಾ ಇಲ್ಲ
ಕನಸಿಗೆ ಮಾತ್ರ ರಜೆನೇ ಇಲ್ಲ
ನಿದ್ದೆ ಇಲ್ದೇ ನನಗೇಕೊ ನೆಮ್ಮದಿನೇ ಇಲ್ಲ
ಬಾಳಲ್ಲಿ ಇದೆಲ್ಲಾ ಮಾಮೂಲಿ ಆಗೊಯ್ತಲ್ಲ.|

                  ಸೋಮೇಶ್ ಗೌಡ

(79) ಕಾಲ ಕೈಗೆ ಸುಗುತ್ತಿಲ್ಲ

ಎತ್ತ ಹೋಗುತ್ತಿದೆಯೋ ಕಾಲ
     ಕೈಗೆ ಸಿಗುತ್ತಿಲ್ಲ

ಸುತ್ತಲು ಕರಿಗತ್ತಲು
ಮುತ್ತಿಗೆ ಹಾಕಿದೆಯಲ್ಲ
ಇಲ್ಲಿ ಮುತ್ತಿಗೆ ಹಾಕಿದೆಯಲ್ಲ
ಕಾಲ ಕೈಗೆ ಸಿಗುತ್ತಿಲ್ಲ 

ಬೆಳಕ ನೋಡಲಿಲ್ಲ
ಬೆಳ್ಳಿ ಚಂದ್ರ ಮೂಡಲಿಲ್ಲ
ಮನಸು ಹಿಡಿತದಲ್ಲಿ ಇಲ್ಲ
ಕಾಲ ಕೈಗೆ ಸಿಗುತ್ತಿಲ್ಲ

ದಿನಗಳೆಲ್ಲ ಉರುಳಿ
ವರುಷ ಮುಗಿದೆ ಹೋಗೀತಲ್ಲ
ಮುಗಿದ ವರುಷ ಮತ್ತೆ ಬರಲಿಲ್ಲ
ಕಾಲ ಕೈಗೆ ಸಿಗುತ್ತಿಲ್ಲ

ವಯಸ್ಸು ಏರುತ್ತಿರಲು
ಜವಾಬ್ದಾರಿ ಹೆಚ್ಚುತ್ಟಿರಲು
ಕನಸು ನನಸಾಗಲೇ ಇಲ್ಲ
ಕಾಲ ಕೈಗೆ ಸಿಗುತ್ತಿಲ್ಲ
ಕಾಲ ಕೈಗೆ ಸಿಗುತ್ತಿಲ್ಲ .|

   ಸೋಮೇಶ್ ಗೌಡ

(80)  ನನ್ನ ಬರಹ


ಬಿಳಿಯ ಹಾಳೆ ಮೇಲೆ
ನಾನು ಬರೆದೆ ಕಪ್ಪು ಬರಹ
ನನ್ನ ಹೃದಯದಲ್ಲಿ
ಅಡಗಿದ್ದ ಆ ವಿರಹ

ಮಾತು ಬಾರದೇ
ಹೇಳಲಾಗದೆ
ಬರೆದೆ ನಾನು ಅಲ್ಲಿ
ನನ್ನ ಮನದ ಪ್ರೀತಿ ಚೆಲ್ಲಿ

ಬಿಳಿಯ ಕುದುರೆ ಮೇಲೆ
ಏರಿ ಕುಳಿತೆ ರಾಜನಂತೆ
ಓಡಲಾರದ..ಜೀವವಿರದ
ಕುದುರೆ ಏರಿಹ ನಾ ಮಗುವಂತೆ

ರಾತ್ರಿ ಕನಸಿನೊಳಗೆ
ನುಗ್ಗಿ ಬಂದಳು ನನ್ ಚೆಲುವೆ
ಹೋಗಲಾರದೇ,ಮಲಗಲು ಬಿಡದೆ
ಕಾಡಿದಳು  ಓ ಮನವೇ
ನನ್ನ ಕಾಡಿದಲು ಓ ಮನವೇ.|

          ಸೋಮೇಶ್ ಗೌಡ


(81) ಜೀನ್ಸು ತೊಟ್ಟ ಹುಡುಗಿಯರು


ಜೀನ್ಸು ತೊಟ್ಟ ಹುಡುಗಿಯರು
ಡ್ಯಾನ್ಸು ಮಾಡೋ ಈ ಬೆಡಗಿಯರು
ಜೀನ್ಸಿನಲ್ಲೆ ಮೂರು ಲೋಕವ
ಸುತ್ತಿ ಬರುವ ಈ ಬಳ್ಳಿಯರು

ಕಣ್ಣಿನಲ್ಲೆ ಕುಕ್ಕ್ತಾರೆ
ಮಾತಿನಲ್ಲೆ ಮಂತ್ರ ಹಾಕ್ತಾರೆ
ಹೃದಯ ಕಿತ್ತು ಕೈಗೆ ಕೊಟ್ಟು
ಜಾಗ ಖಾಲಿ ಮಾಡ್ತಾರೆ  ||ಜೀನ್ಸು|

ಅಳುಕು ಬಳುಕು ಈ ನಡಿಗೆಯಲಿ
ಹೊಳಪು ಹೊಳಪು ಬಟ್ಟೆಯ ವೈಭವ
ಮೊಟುಕು ಮೊಟುಕು ಮನಸಿನ ಒಳಗೆ
ಏಟುಕಲಾರದ ಆಸೆಯ ವೈಭವ ||ಜೀನ್ಸು|

ಭಾನುವಾರದ ಶಾಪಿಂಗ್ ಮಾಲು
ಜೀನ್ಸು ತೊಟ್ಟ ಹುಡುಗಿಯರ ಸಾಲು
ಹೊಳೆಯುತ್ತಿದೆ ಅವರ ಕಣ್ಣುಗಳು
ಸೆಳೆಯುತ್ತಿದೆ ಬಣ್ಣ ಬಣ್ಣ ಬಟ್ಟೆಗಳು ||ಜೀನ್ಸು|

ಬೆದರು ಗೊಂಬೆಯಂತೆ ಇದ್ದರು
ಎದುರು ಮಾತು ಇವರ ಸಂಪತ್ತು
ಮಾತಿನಲ್ಲೇ ಸೈನ್ಯವ ಕಟ್ಟಿ
ಯುದ್ದ ಮಾಡೋ ಇವರ ಗಮ್ಮತ್ತು ||ಜೀನ್ಸು|

                    ಸೋಮೇಶ್ ಗೌಡ

(82) ಸ್ಪರ್ಧೆ ಇರಲಿ  ಜೀವನದಲ್ಲಿ


ಬಲ್ಲವರಾರು ಬಲ್ಲಿದಾರಾಟವ
ಬಣ್ಣಿಸಲಾಗದು ಅವರ ಮಾಟವ
ಮಂತ್ರಕು ಒಂದು ತಿರುಮಂತ್ರ ಇರುವುದು
ತಂತ್ರದಿ ಕಾರ್ಯವ ಮುಗಿಸುವುದು 

ಇದೆಲ್ಲವೂ ಅವರ ನಿತ್ಯದ ಜೀವನ
ಬದುಕಲು ಬೇಕು ತಂತ್ರದ ಸಾದನ
ಫ್ಯಾಶನ್ ಕ್ರಿಯೇಶನ್ ಈ ಜಗತ್ತಿನಲ್ಲಿ
ಬಡವರ ಗೋಳು ಕೇಳುವರು ಯಾರಿಲ್ಲಿ

ಸ್ಪರ್ಧೆ ಇರಲಿ  ಜೀವನದಲ್ಲಿ
ಅಸೂಯೆ ಹೊಟ್ಟೆಹುರಿ ಯಾಕಿಲ್ಲಿ
ಒಲವೆ ಜೀವನ ಬದುಕೇ ಪಯಣ
ಇರುವಷ್ಟು ದಿನ ಜಾಲಿಯಾಗಿ ಬದುಕ್ ಬಿಡೋಣ.|

                   ಸೋಮೇಶ್ ಗೌಡ



(83)ಚಂದದ ಅರಮನೆ

ಚಂದದ ಅರಮನೆಯಲ್ಲಿ
ಬೆಲ್ಲ ಸಕ್ಕರೆಯಿಲ್ಲ
ಮನೆ ಕಾಯೋ
ಆಳಿಗಂತೂ ಕೊರತೆಯಿಲ್ಲ

ಬಣ್ಣ ಬಳಿದರು ಏನು
ಕಷ್ಟ ಮುಗಿಯುವುದಿಲ್ಲ

ಉಕ್ಕಿನ ಮನುಜನಿಗೂ
ಅಪಾಯ ತಪ್ಪಿದಲ್ಲ
ಎಚ್ಚರ ತಪ್ಪಿದರೆ
ಮೇಲೇಳಲು ಅವಕಾಶವಿಲ್ಲ

ಕೊಬ್ಬಿದ ಹಾವನ್ನು
ಬಗ್ಗಿಸುವವರಿಗೆ ಬರವಿಲ್ಲ
ಇನ್ನೊಬ್ಬರನ್ನು ಹಿಗ್ಗಿಸುವ
ಪ್ರಯತ್ನ ಪೂರ್ಣಗೊಳ್ಳುತ್ತಿಲ್ಲ.|

ಇದು ಸಮಾಜದ ಸತ್ಯ ನಡೆಯುತ್ತಿದೆ ನಿತ್ಯ

                   ಸೋಮೇಶ್ ಗೌಡ 


(84)  ಅಪರೂಪದ ಈ ಸಂಗಮ

ನಡೆವಾಗ ನುಡಿ ಎಂದಿತು ಮನವು
ಮದುರದ ಈ ಕ್ಷಣವು
ನುಡಿವಾಗ ತಡೆ ಎಂದಿತು ಹೃದಯ
ಯಾಕೆಂದು ನೀ ಅರಿಯ

ಈ ಸುರಿವ ಮಳೆಯಲಿ

ಒಂದೇ ಕೊಡೆಯ ಕೆಳಗಡೆ
ಬೀಸೊ ಗಾಳಿ ರಭಸಕ್ಕೆ
ಚಳಿಯು ಮೈಯ ಒಳಗಡೆ

ಕೊಂಚ ಕೊಂಚ ಕೈ ಕೈ ತಾಗಿ

ಬಿಸಿಯು ಎದೆಯ ಹೊಕ್ಕಿರೆ
ಗಾಳಿಗೆ ಉದುರಿದ ಎಲೆಗಳೆಲ್ಲ
ನಮ್ಮ ಮೈಯ ಅಂಟಿರೆ

ಅವಳ ಮುಖದಲ್ಲಿ ಮಂದಹಾಸವು 

ಕಣ್ಣಂಚಲಿ ಕುಡಿಯ ನೋಟವು
ಏನೀದೇನಿದು ಇದೆಂಥಾ ಅನುಭವ
ಮಾತು ಮುರಿದು ಮೌನ ಉದ್ಭವ.|

ನಮ್ಮಿಬ್ಬರ ಅಪರೂಪದ ಈ ಸಂಗಮ

ತಂದಿತು ಎಲ್ಲಿಲ್ಲದ ಸಂಭ್ರಮ

                   ಸೋಮೇಶ್ ಗೌಡ 


(85)ಹೃದಯದೊಡತಿ


ಓ ಗೆಳತಿ 
ಹೃದಯದೊಡತಿ
ಈ ಪ್ರೀತಿ 
ನಿನಗಾಗೆ ಮೀಸಲಾತಿ

ನಿನ್ನ ಈ ಸುಂದರ ನಯನ
ಸೆಳೆಯಿತು ನನ್ನನ್ನ
ನೀ ನಕ್ಕಾಗ ಮೂಡಿದ ಈ ಕವನ 
ನಿನ್ನಂತೆಯೆ ಸುಂದರ ಸಾಲುಗಳ ಚರಣ

ಬಯಸಿದೆ ನನ್ನ ಈ ಮನ
ನಿನ್ನ ನಿಶ್ಚಲ ಪ್ರೀತೀನ
ನನ್ನೊಂದಿಗೆ ಕೈ ಜೋಡಿಸಿ 
ಮುಂದುವರೆಸು ಪ್ರೀತಿ ಪ್ರಯಾಣನ

                   ಸೋಮೇಶ್ ಗೌಡ 

                
  (86)    ಹೋಳಿಗೆ ಊಟ


ಎರಡು ಕರಿ ಮುಖ ಎರಡು ಬಿಳಿ ಮುಖ
ಮುಂದೆ ಬಣ್ಣ ಬಣ್ಣದ ಹೋಳಿಗೆ
ಎಡೆಬಿಡದೆ ತಿಂದರು...ಹೊರಟೆ ಬಿಟ್ಟರು
ಮಿಕ್ಕ ಪುಡಿಯ ಕೊಟ್ಟು ಯಜಮಾನನ ಕೈಯಿಗೆ

ಹೊಟ್ಟೆ ಬಿರಿದಿರಲು ಸೊಟ್ಟ ದಾರಿಯಲಿ
ನಡೆಯಲಾರದೆ ಕುಂತರು
ಸಿಹಿಯ ತೇಗುತ ಖುಷಿಯ ಹಂಚುತ
ತಂಪಾದ ಗಾಳಿಯಿರಲು ಮಲಗೆ ಬಿಟ್ಟರು|ಎರಡು|

ಇರುವೆ ಮುತ್ತರು ಜ್ಞಾನ ಇಲ್ಲದೆ
ಗಾಡ ನಿದ್ರೆಗೆ ಇವರು ಜಾರಿರಲು
ಕಚ್ಚಿ ಕಚ್ಚಿ ಹುಣ್ಣಾದ ಮೇಲೆ
ಎದ್ದು ಕೆರೆಯುತ ಇವರು ಕುಂತಿರಲು |ಎರಡು|

                           ಸೋಮೇಶ್ ಗೌಡ

(87)ದೊರೆಯಂತೆ ಆಗಬಾರದೇನು ನಾನು
 ಧರೆಯ ಮೇಲೆ ದೊರೆಯ ಬಾಳು
ಆಹಾ ಎಂತದೋ ಕಣ್ಣ ಕುಕ್ಕುವಂತದೋ
ಕುಪಿತನಾದೆ ಅವನ ಕಂಡು
ಕಪಿಯೆ ನಾನು ಹೇಳು ನೀನು
ಆಗಬಾರದೇನು ನಾನು ಅವನಂತೆಯೇ
ಹೋಗಬಾರದೇನು ನಾನು ಅವನ ದಾರಿಯಲ್ಲಿಯೇ
ನನ್ನ ಬಾಳು ಚುಚ್ಚೋ ಮುಳ್ಳು
ಬಿದ್ದಿದೆ ಮೇಲೆ ಚಪ್ಪಡಿ ಕಲ್ಲು..
ಮನಸ್ಸು ಹೃದಯ ಹೊಡೆದು ಹೋಯ್ತು
ಮಧುರ ಗೀತೆ ಉದಯವಾಯ್ತು
ಆಹಾ ಎಂತದೋ ಈ ಗೀತೆ ಮನಸ ಸೆಳೆಯುವಂತದೊ
ಮೌನ ಮೂಡುವಂತದೋ...

                 ಸೋಮೇಶ್ ಗೌಡ
(88)I T ಜೀವನ
 ಕೈಯಲ್ಲಿ ಮೊಬೈಲ್ ನಿಮಿಷಕ್ಕೊಂದು ಈಮೇಲ್ 
ಎಡೆಕೊಡದ ಫೋನ್ ಕಾಲ್ 
ಈ ಕೆಲಸವೇ ಒಂದು ಸವಾಲು
ಆಗಾಗ ಟೀ ಬ್ರೇಕು ಮಧ್ಯಾಹ್ನ ಲಂಚ್  ಬ್ರೇಕು
ಒಮ್ಮೊಮ್ಮೆ ಬೇಕು ಸಿಗರೇಟು ಸೇದೋಕು  ಬ್ರೇಕು 

ದಿನಕ್ಕೊಂದು ಮೀಟಿಂಗು ಫೇಸ್‌ಬುಕ್ನಲ್ಲಿ ಚಾಟಿಂಗು
ನಮ್ಮ ಕೆಲಸದಲ್ಲಿ ನಾವೇ ಕಿಂಗು... 

ಇರೋ ಅಷ್ಟು ಟೈಮ್ನಲ್ಲಿ  ಬರಾಬರಿ ಕೆಲ್ಸಾ ಮುಗ್ಸಿ
ತರಾತುರಿಯಲ್ಲಿ ಮನೆಗೆ ಹೋಗೋದೆ ದಿನ
ವೂದಿನವೆಲ್ಲಾ ಆಯಾಸ ಮನೆಯಲ್ಲಿ ಅದೇ ಹೆಂಡತಿ ಪ್ರಾಸ
ಇದೆ ದಿನವೂ ನಡೆಯುವ ನಮ್ಮೆಲ್ಲರ ಹವ್ಯಾಸ 

ಇಷ್ಟೇ ಕಣಪ್ಪ ನಮ್ ಲೈಪು ..ಎನ್ಗೆ ನಿನ್ನ ವೈಪು...?

                             ಸೋಮೇಶ್ ಗೌಡ

(89)ವಯಾರಗಿತ್ತಿ ನಡಿಗೆಯನ್ನ ಹೆಂಗಾರ ಮುರೀಬೇಕಾ


ವಯಾರಗಿತ್ತಿ ನಡಿಗೆಯನ್ನ ಹೆಂಗಾರ ಮುರೀಬೇಕಾ
ಸಿಂಗಾರಗಿತ್ತಿ ಸಿಂಗಾರವನ್ನ ಹೆಂಗಾರ ತಡಿಬೇಕಾ
ಸುಬ್ಬ್ನಾತಿ ಸುಬ್ಬಕ್ಕನ ಸೊಂಟನ ಮುರಿದು ಮೂಲೇಲೀ ಕೂರ್ಸ್ಬೆಕಾ ಯಪ್ಪ
ಬಾಯ್ ಬಡ್ಕಿ ಬಂಗಾರಮ್ಮನ ಬಾಯಿಗೆ ಹೋಲ್ಗೇನಾ ಹಾಕ್ಬೇಕಾ

ಹೇಳು ಹೆಂಗೆಂಗ ಮಾಡ್‌ಬೇಕಾ ಇವರ್ಗೆ ಏನೇನಾ ಮಾಡ್‌ಬೇಕಾ

ವಯಾರಗಿತ್ತಿ ಹೊಂಬಾಳೆ ತಿಮ್ಮನ ಮನಸ್ಸನ್ನೆ ಗೆದ್ದವ್ಳೆ
ಸಿಂಗಾರಗಿತ್ತಿ ಸಿಂಗ್ಲಿಕನಂತ ಸೀನನ್ನೇ ಮರಳು ಮಾಡವ್ಳೆ
ಸುಬ್ಬ್ನಾತಿ  ಸುಬ್ಬಕ್ಕನ ಸೊಂಟನ ನೋಡಿ ಸುಬ್ಬಣ್ಣ ಮೂರ್ಛೆ ಬಿದ್ದವ್ನೆ
ಬಂಗಾರಿ ಮಾತಾ ಕೇಳಲಾಗದೆ ಬಿಳಿಗಿರಿ ಊರ್ನೆ ಬಿಟ್ಟವ್ನೇ
ಬಿಳಿಗಿರಿ ಊರ್ನೆ ಬಿಟ್ಟವ್ನೇ......................

ಪಕ್ಕದ ಮನೆ ಪವಿತ್ರಕ್ಕ ಪಲ್ಲಕ್ಕೀನೆ ಇಲ್ದನ್ಗೆ
ಊರ್ನಲ್ಲೆಲ್ಲಾ ಮೆರಿತಾವ್ಳೆ
ಎದ್ರುಮನೆ ಎಲ್ಲಕ್ಕ ಎಲೆ ಅಡ್ಕೆ ಹಾಕೊಂಡೆ
ಎಲ್ಲ್ರೂಗೂ ಕ್ಯಾಕರಿಸಿ ಉಗಿತಾವ್ಳೆ

ಯಪ್ಪ ಇವರ್ಗೆ ಹೆಂಗಾರ ಬಡಿಬೇಕಾ
ಹೇಳು ಏನೇನಾ ಮಾಡ್‌ಬೇಕಾ.. ಇವರ್ಗೆ ಏನೇನಾ ಮಾಡ್‌ಬೇಕಾ..|

                                  ಸೋಮೇಶ್ ಗೌಡ


(90) ಪ್ರೇಮಿ ನಾನಲ್ಲ

ಪ್ರೇಮಿ ನಾನಲ್ಲ
ನಂಗೆ ಪ್ರೀತಿ ಮಾಡೋಕೆ ಬರಲ್ಲ
ಏನೋ ಗೊತ್ತಿಲ್ಲ
ನೀನು ಬಂದ ಮೇಲೆ ನಂಗೆ ಹೀಗೆಲ್ಲಾ..
ಒಂಥರ ಒಂಥರ
ಆಗುತ್ತಿದೆ ಏನೋ ಒಳಗೆ ಒಳಗೆ
ತರ ತರ ತರ ತರ
ಬಯಕೆಗಳು ನನ್ನ ಎದೆಯ ಒಳಗೆ

ಇದೇನಾ ಪ್ರೀತಿಯು ಇದೇನ್ ಇದರ ರೀತಿಯೂ
ಇದೇನಾ ಪ್ರೀತಿಯು ಇದೇನ್ ಇದರ ರೀತಿಯೂ

ಕನಸೊಳಗು ನೀನೆ ಬರುವೆ
ಎದೆಯ ಮೇಲೆ ನಡೆದೆ ಬಿಡುವೆ
ನನ್ನೊಳಗೆ ಏಕೆ ಕೂತು
ನನ್ನ ಹೀಗೆ… ಕಾಡುವೆ ..............
ಯಾರೇ ನೀನು ಹೇಳೆ....ಹೆಹೆಹೆ ಹೆ.

ಪ್ರೇಮಿ ನಾನಲ್ಲ
ನಂಗೆ ಪ್ರೀತಿ ಮಾಡೋಕೆ ಬರಲ್ಲ
ಏನೋ ಗೊತ್ತಿಲ್ಲ
ನೀನು ಬಂದ ಮೇಲೆ ನಂಗೆ ಹೀಗೆಲ್ಲ,..

ನಿದ್ದೇನೂ ಬರಲ್ಲ...ಕೂರಕ್ಕೂ ಆಗಲ್ಲ
ಎದ್ದೆದ್ದು ನಿಂತರೂ ನಿನ್ನದೆ ನೆನಪೆಲ್ಲಾ
ನನ್ನನ್ನು ನೀನು ಮೌನಿ ಮಾಡಿ ಏಕೆ ಹೀಗೆ
ಸುಮ್ಮನೆ ನಿಂತೆ ಮಾತಾಡೆ ನನ್ನ ಚೆಲುವೆಯೇ.....
ನಿನ್ನ ಪ್ರೇಮದಾಸ ನಾನು...............ಊಊಊಊ..

ಪ್ರೇಮಿ ನಾನಲ್ಲ
ನಂಗೆ ಪ್ರೀತಿ ಮಾಡೋಕೆ ಬರೋಲ್ಲ
ಏನೋ ಗೊತ್ತಿಲ್ಲ
ನೀನು ಬಂದ ಮೇಲೆ ನಂಗೆ ಹೀಗೆಲ್ಲಾ.....ಹ್ಮ್ ಮ್ ಎಮೆಮ್

                -ಸೋಮೇಶ್ ಗೌಡ


(91) ಗೆದ್ದಲ ಹುಳುವಿನ ಶ್ರಮವನು ಕೆಡಗಿ

ಗೆದ್ದಲ ಹುಳುವಿನ ಶ್ರಮವನು ಕೆಡಗಿ
ಗುದ್ದಲಿ ಪೂಜೆ ಮಾಡಿದರೇನು
ಕುಗ್ಗದ ಹಾವಿನ ರೋಷವ ತಡೆಯಲು
ಪೂಜೆಯ ಮಾಡಿ ನಮಿಸಿದರೇನು

ತುಕ್ಕಿಡಿಯುವ ಕುಡುಗೋಲನು ಬಳಸಿ
ಎಕ್ಕದ ಗಿಡವ ಕಡಿದರು ಏನು 
ನಿನ್ನ ಕೋಪಕೆ ಲಗಾಮು ಹಾಕದಿದ್ದರೆ
ಪಕ್ಕದ ಮನೆ ಹತ್ತಿ ಹುರಿಯುವುದೇನು

ಪುಕ್ಕವೇ ಇಲ್ಲದೇ ಹಾರಲು ಹೋದರೆ
ನೆಲಕಚ್ಚದೆ ಹಾಗೆ ಉಳಿಯುವೆಯೇನು
ಅನ್ಯರ ಮಾತಿಗೆ ಕಿವಿಯನು ಕೊಟ್ಟು
ಹೀಗೆಲ್ಲಾ ಮಾಡಿದರೆ ನಿನಗೆ ಸುಖವೇನು.|

                         ಸೋಮೇಶ್ ಗೌಡ


 (92)  ನನ್ನವಳು

ಸಂಪಿಗೆ ಮರದ ಕೆಳಗೆ
ಸಂಪಂಗಿ ಜೊತೆಯಲಿ ಕುಳಿತು
ಸಲ್ಲಾಪದ ಮಾತನಾಡುತ್ತಿದ್ದೆ ನಾ

ಸೇವಂತಿ ಹೂವ ಹಿಡಿದು
ಸೇರೋಣ ಬಾ ಎಂದು
ಸಾರಿ ಸಾರಿ ಕರೆದಳು ಹಾಲ್ಗೆನ್ನೆ ಚೆಲುವೆ ನನ್ನ

ಚಂದ್ರಂಗೂ ಬ್ಯಾಸರವಾಗಿ
ಮೋಡದ ಹಿಂದೆ ಹೊರಟೆ ಬಿಟ್ಟ
ಚುಕ್ಕಿ ಬೆಳಕಲ್ಲೂ ಮಿಂಚುತ್ತಿದ್ದಳು ನನ್ ಚೆಲುವೆ

ಅವಳ ಗೆಜ್ಜೆಯ ನಾದದಲ್ಲಿ
ಹುಚ್ಚೆದ್ದು ಕುಣಿಯುತ ನಾನು
ಏನೆಂದು ಹೇಳಲಿ ನಿಮಗೆ ನಾ ಅವಳ ಬಗ್ಗೆ

ಗೊತ್ತಿರುವುದಿಷ್ಟೇ ಎನಗೆ ಅವಳು ನನ್ನವಳು ನನ್ನವಳು
ಗೊತ್ತಿರುವುದಿಷ್ಟೇ ಎನಗೆ ಅವಳು ನನ್ನವಳು ನನ್ನವಳು

                            ಸೋಮೇಶ್ ಗೌಡ

(93) ಕಣ್ಣೆಲ್ಲಾ ಕೆಂಪಗೆ ಆಗಿ
ಕಣ್ಣೆಲ್ಲಾ ಕೆಂಪಗೆ ಆಗಿ
ಕಣ್ಣೀರು ಹರಿದು ಬಂತು
ಮನಸ್ಸೆಲ್ಲಾ ಹೊಡೆದು ಹೋಗಿ
ಕಲ್ಲು ಬಂಡೆ ಆಗೊಯ್ತು

ಎತ್ತ ಹೋಗಲಿ ನಾನು
ಸುತ್ತಲು ನಿಂತಿದೆ ತಿಳಿನೀರು

ಹರಿದ ಬಟ್ಟೆಯೂ ನಾನು
ಹೆಬ್ಬುಲಿಗೆ ಬಲಿಯಾದೆ ನಾನು
ಹೇಗೆ ಬಾಳಲಿ ನಾನು
ಸುತ್ತಲು ಕವಿದಿದೆ ಕರಿಗತ್ತಲು

ಹುಲಿಯ ಬೇಟೆಯಾಡಲೇನು
ಪಂಜರದ ಗಿಳಿಯಂತೆ ಸುಮ್ಮಲಿರಲೇನು
ನನಗೇಕೆ ಹೀಗಗೊಯ್ತೋ
ತುಕ್ಕಿಡಿದ ಕಬ್ಬಿಣದಂತಾದೆ ನಾನು

                  ಸೋಮೇಶ್ ಗೌಡ


(94) ಸಂಜೆ ಹೊತ್ತಿನಲ್ಲಿ ನಾನು ನನ್ನ ಗೆಳೆಯರು

ಸಂಜೆ ಹೊತ್ತಿನಲ್ಲಿ ನಾನು ನನ್ನ ಗೆಳೆಯರು
ಮೋರಿ ಮೇಲೆ ಕೂತು ಪೋಲಿ ಮಾತನಾಡುತ್ತಿದ್ದೆವು

ಅವನು ಹೆ0ಗ್ಲ ರಾಮ ಇವನು ಹೆ0ಗ್ಲ ಸೋಮ
ಎಲ್ಲಿ ಭೀಮ ಅವನನ್ನು ಕೂಡ ಇಲ್ಗೆ ಎಳೆದು ತನ್ನಿ

ಏರಿ ಮೇಲಿನಿಂದ ಇಳಿದು ಮೋರಿ ಕಡೆಗೆ ಬಂದಳು ಸುಂದರಿ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಮ್ಮ ಮನಸ್ಸು ಕದ್ದ ಪೋರಿ
ದಾಳಿಂಬೆಯಂತವಳು ಕಣ್ಣಕುಕ್ಕುತ್ತಿದ್ದಳು
ಅವಳ ನೋಡನೋಡುತ್ತಾ ನಾವು ಟುಶ್ ಆದೇವು
ಉಸಿರುಗಟ್ಟಿ ಒಮ್ಮೆ ಬುಷ್ ಬುಷ್ ಎಂದೆವು

ಅಳುಕು ಬಳುಕು ನಡಿಗೆಯಲ್ಲಿ ಹೋಗಹೋಗುತ್ತಾ
ಕಾಲು ಜಾರಿ ಬಿದ್ದಳು ಅಳ ಅಳುತ್ತಾ 
ನಾವು ನಿಧ ನಿಧಾನವಾಗಿ ಅವಳ ಕಡೆಗೆ ಹೋಗಿ
ಉಳುಕಿದ ಕಾಲನ್ನೆತ್ತಿ ಉಪಚರಿಸುತ್ತಿರಲು
ಭೀಮ ಅವಳ ಸ್ಪರ್ಸದಿಂದ ಮೂರ್ಛೆ ಬಿದ್ದನು
ಕರೆಂಟ್ ಹೊಡೆದ ಕಾಗೆಯಂತೆ  ಮೆಲ್ಟ್ ಆದನು

ಸುಂದರಿಯೂ ಮೆಲ್ಲನ್ನೆದ್ದು ಉಸುನಗೆಯನು ಕೊಟ್ಟಳು
ಕೆನ್ನೆ ಸವರಿ ಟಾಟಾ ಹೇಳಿ ಹೊರಟೆ ಬಿಟ್ಟಳು
ಅಬ್ಬಾಬ್ಬ ಏನು ಅವಳ ಮೋಡಿ ಇತ್ತ ರಾಮನನ್ನು ನೋಡಿ
ಮುಟ್ಟಿದೊಡನೆ ಇವನು ಕೂಡ ಕಲ್ಲಾದನು
ರಂಭೆ ಊರ್ವಶಿಯರಿಗೆ ಸೋತ ವಿಶ್ವಾಮಿತ್ರನಂತಾದನು

ಸುಂದರಿಗೆ ಸೋತ ಇವರು ಅವಳ ನೆನಪಿನಲ್ಲಿ
ಊಟ ನಿದ್ದೆ ಬಿಟ್ಟು ಆಸ್ಪತ್ರೆ ಸೇರುವಷ್ಟರಲ್ಲಿ
ಮತ್ತೆ ಬಂದಳು ಮೆಲ್ಲ ಕಣ್ಣು ಹೊಡೆದಳು
ಮೋರಿ ಬಿಟ್ಟು ಪೋಲಿ ಹುಡುಗರು ಹಾರೆ ಬಿಟ್ಟರು
ಹಾರಿ ಹಾರಿ ಅವಳ ಜೊತೆಗೆ ಸೇರೆ ಬಿಟ್ಟರು.

                                  ಸೋಮೇಶ್ ಗೌಡ




(95) ಹೃದಯ ಗೀತೆ

ಹೃದಯ ಗೀತೆ ಬರೆದೆ ನೀನು

ಮನದ ಒಳಗೆ ಉಳಿಯುವಂತೆ
ಬಿಡದ ಚಳಿಯ ನಡುವಿನಲ್ಲಿ
ನಡುಗುತ್ತಿದ್ದರು ನಾ ನೆನೆಯುವಂತೆ
ನಿನ್ನ ಗೀತೆ ಎಷ್ಟು ಚೆಂದ
ಹೃದಯಕ್ಕೆ ಹೊಕ್ಕಿದೆ ಅದರ ಸುಗಂಧ
ಮೌನಿಯಾದೆ ನಾ ಅದರಿಂದ
ಮಾತನಾಡಿದರೆ ಹೊಮ್ಮುವುದು
ನೀ ಬರೆದ ಸಾಲುಗಳ ಗಂಧ
ನಿದ್ರೆಯಲ್ಲೂ ನಿನ್ನ ಕವನವೇ ಕನವರಿಕೆ
ಎದ್ದಾಗಲು ಅದರದೇ ಚಡಪಡಿಕೆ
ಅಬ್ಬಾಬ್ಬಾ ಹೇಗೆ ಹೇಳಲಿ ನಾ
ನಿನ್ನ ಸಾಹಿತ್ಯದ ಮಾಟವ
ಅದೆಷ್ಟು ಬೇಗ ಸೆಳೆದು ನನ್ನ
ಕಲಿಸಿತು ಜೀವನದ ಪಾಠವ.|

                ಸೋಮೇಶ್ ಗೌಡ

(96) ಉಳಿಸಿ ಬೆಳೆಸಿ ಕನ್ನಡದ ಸಾಹಿತ್ಯ
ಹರಿದಾಡಲಿ ಹರಿದಾಡಲಿ ಕನ್ನಡದ ಸಾಹಿತ್ಯ

ಅರೆಗಳಿಗೆಯೂ ಮರೆಯದಿರಿ ಕನ್ನಡದ ಲಾಲಿತ್ಯ
 
ಕವನವನ್ನು ಬರೆದ ಕವಿಯು

ಮನದ ನೂರು ಆಸೆ ಚೆಲ್ಲಿ

ಅರಿತು ಬದುಕ ನಡೆಸೋ ತಮ್ಮ

ಬೆಳೆಯಲಿ ನಿನ್ನ ಜೀವನದ ಬಳ್ಳಿ

ಸಾಹಿತ್ಯದ ಸರಪಳಿಯನು ಬಿಡಿಸಿದರೆ ಸ್ವರ್ಗವಂತೆ

ಸಾಹಿತ್ಯವಿಲ್ಲದ ಜೀವನ ಹೆಣ್ಣಿರದ ಸಂಸಾರದಂತೆ

ಸಲಹೊ ತಮ್ಮ ಸಲಹೊ ನೀನು ಕನ್ನಡದ ಸಾಹಿತ್ಯವ

ಕೈ ಬಿಡದೆ ಉಳಿಸೋ ತಮ್ಮ ಕರ್ನಾಟಕದ ಮುಕುಟವ

 
ಬಯಸುವುದಿಲ್ಲ ಕವಿಯು ಸಿರಿ ಸಂಪತ್ತು ಬೇಕೆಂದು

ಅರಿತಿಹನವನು ಮೆಚ್ಚುಗೆ ಹಾರೈಕೆಯೆ ಅದಕೆ ಸಮವೆಂದು

ಶ್ರದ್ದೆ ಇರಲಿ ಭಕ್ತಿ ಇರಲಿ ಸರಸ್ವತಿಯು ನಿಮಗೊಲಿಯಲಿ

ಮನದ ನೋವ ಮರೆಸುವ ಕವಿತೆಗಳಿಗಿಲ್ಲಿ ಜಾಗವಿರಲಿ

 
ಹರಿದಾಡಲಿ ಹರಿದಾಡಲಿ ಕನ್ನಡದ ಸಾಹಿತ್ಯ

ಅರೆಗಳಿಗೆಯೂ ಮರೆಯದಿರಿ ಕನ್ನಡದ ಲಾಲಿತ್ಯ.|
   
                                   ಸೋಮೇಶ್ ಗೌಡ

(97) ಈ ಹೃದಯ ನಿನ್ನದೆ

ಈ ಹೃದಯ ನಿನ್ನದೆ
ನೀನು ರುಜು ಮಾಡಿರುವ ಈ ಹೃದಯ
ನಿನ್ನದೆ ಎಂಬುದ ನೀ ಮರೆತೆಯ
ಒಮ್ಮೆಯಾದರೂ ಬಂದು ಇದರ ಬಡಿತವನ್ನ ಕೇಳುವೆಯಾ.....

ನಿನ್ನ ಹೆಸರನ್ನೇ ಹೇಳುತ್ತಾ ಚಡಪಡಿಸುತ್ತಿದೆ
ನಿನ್ನ ನೆನಪಲ್ಲೆ ಕೊರಗುತ್ತಿದೆ
ನಿನ್ನ ಪ್ರೀತಿಗಾಗಿ ಹಂಬಲಿಸುತ್ತಿದೆ
ಬಾ ಬಾ ಎಂದು ಕೂಗುತ್ತಿದೆ ಈ ಪುಟ್ಟ ಹೃದಯ

ನೀ ಹೋಗುವುದಾದರೆ ಹೋಗು ಆದರೆ ಹಾಗೇ ಹೋಗಬೇಡ
ಈ ಹೃದಯವನ್ನು ನೀನೆ ತೆಗೆದು ಕೊಂಡು ಹೋಗು
ನನ್ನಲ್ಲಿ ಮಾತ್ರ ಬಿಟ್ಟು ಹೋಗಬೇಡ
ಇದು ಕ್ಷಣ ಕ್ಷಣವೂ ಚುಚ್ಚಿ ಕಾಡುವುದೆನ್ನ..|

                                         ಸೋಮೇಶ್ ಗೌಡ

(98)  ಎಲ್ಲಾನೂ ಸಾಧಿಸಬಹುದು
ಎಲ್ಲಾನೂ ಸಾಧಿಸಬಹುದು
ಎಲ್ಲಾನೂ ಗೆಲ್ಲಬಹುದು
ನಮ್ಮನ್ನು ನಾವು ನಂಬಬೇಕು ಮೊದಲು

ಯಾರನ್ನೂ ಎದುರಿಸಬಹುದು
ಎಲ್ಲಾನೂ ಪಡೆಯಬಹುದು
ಎಲ್ಲಾದಕ್ಕೂ ಬೆಂಬಲ ಬೇಕು ಮೊದಲು
ನಮ್ಮನು ನಾವು ನಂಬ ಬೇಕು ಮೊದಲು

ಇಲ್ಯಾರೂ ದಡ್ಡರು ಅಲ್ಲ
ಇಲ್ಯಾರೂ ನಿಸ್ಪ್ರಯೋಜಕರು ಅಲ್ಲ
ಎಲ್ಲದಕ್ಕೂ ಒಂದು ಸಮಯ ಬರಬೇಕು ಮೊದಲು
ನಮ್ಮನ್ನ ನಾವು ನಂಬಬೇಕು ಮೊದಲು

ಪ್ರೀತಿನೆ ಎಲ್ಲಾ ಇಲ್ಲಿ
ದ್ವೇಷಿಸಿ ಗೆದ್ದೋರ್ ಯಾರು ಇಲ್ಲ ಇಲ್ಲಿ
ಎಲ್ಲದಕ್ಕೂ ತಾಳ್ಮೆ ಬೇಕು ಮೊದಲು
ನಮ್ಮ ನಾವು ನಂಬಬೇಕು ಮೊದಲು.

                                   ಸೋಮೇಶ್ ಗೌಡ

(99) ಒಲವಿನ ದೇವತೆ

ಚೆಲುವಿನಾ ಗೆಳತಿಗೆ ನಾ ಏನ ಹೇಳಲಿ
ಒಲವಿನ ದೇವತೆಯಲಿ ನಾ ಏನ ಬೇಡಲಿ
ನನ್ನ ಹುಡುಗಿಯೂ ಹುಡುಗಾಟದವಳೇ ಆದರೂ
ಉರಿವ ಬೆಂಕಿಯಲ್ಲ ಒಳಗೆ ಬೇಧವಿಲ್ಲ
ನಗು ನಗುತಾ  ಮನಕೆ ಮುದವ ನೀಡುವ
ಅವಳು ನನ್ನ ದೇವತೆ

ಚಂದ್ರನಂತೆ ಬೆಳ್ಳಗೆ ಬಳ್ಳಿಯಂತೆ ತೆಳ್ಳಗೆ
ನೋಡುಗರ ಕಣ್ಣಿಗವಳು ಮಲ್ಲಿಗೆ
ಅವಳ ಸಿಹಿ ಅಪ್ಪುಗೆ ಮತ್ತೇರಿಸುವುದು ಮೆಲ್ಲಗೆ
ಮಮತೆ ಪ್ರೀತಿಗೆ ಅವಳೇ ಒಂದು ಪೆಟ್ಟಿಗೆ

ಅವಳ ಪ್ರೇಮ ಸಿಂಚನ ನನ್ನ ಬಾಳಿನ ಚೇತನ
ಅವಳ ನಗು ಮುಖವೇ ನಮ್ಮ ಪ್ರೀತಿಯ ಮುಖ್ಯ ಸಾಧನ 



                                     ಸೋಮೇಶ್ ಗೌಡ

(100)  ಹೆಣ್ಣೆನ್ದರೆ ಹೀಗಿರಬೇಕು 

  ಹೆಣ್ಣೆನ್ದರೆ ಹೀಗಿರಬೇಕು 
 ಹೆಣ್ಣಿನ ಒಳಗೊನ್ದ್ ಕಣ್ಣಿರಬೇಕು
ಎಂಟೆದೆಯ ಭಂಟನ
ಗುಂಡಿಗೆಯೂ ಅವಳಲ್ಲಿರಬೇಕು
ಚೆಂದಿರಬೇಕು ಚೆಲುವು
ಅವಳನ್ನೇ ನಾಚಿಸುವಂತಿದ್ರೆ ಸಾಕು

ಹೆಣ್ಣೆನ್ದರೆ ಹೀಗಿರಬೇಕು
ಹೆಣ್ಣಿನ ಮನವು ಬೆಣ್ಣೆಯಂತಿರಬೇಕು
ಹೂ ಮುಡಿದು ನಡೆದರೆ ಅವಳು
ಸಿಪಾಯಿಯೂ ಬೆರಗಾಗಬೇಕು
ಸಿಳ್ಳೆ ಹೊಡೆದು ಗೇಲಿ ಮಾಡುವ
ಪೋಲಿ ಹುಡುಗರು ನಮಿಸಬೇಕು

ಹೆಣ್ಣೆನ್ದರೆ ಹೀಗಿರಬೇಕು
ಸಂಸ್ಕೃತಿಗೆ ತಲೆಬಾಗಬೇಕು
ಸಂಸಾರದ ಆಗು ಹೋಗುಗಳನ್ನ
ಅರಿತು ಬಾಳನು ನಡೆಸಬೇಕು|


                 ಸೋಮೇಶ್ ಗೌಡ


                  
   *********ಧನ್ಯವಾದಗಳು*********

1 ಕಾಮೆಂಟ್‌: