ಶನಿವಾರ, ಜುಲೈ 7, 2012

(19)ಪ್ರಾಯದ ಪ್ರೀತಿ




ಹೃದಯಕ್ಕವಳು ಮಾಡಿದ್ದಳು ವಾಸಿಯಾಗದಂತ ಗಾಯ
ಆಗ ನನಗಿನ್ನೂ ಹದಿನೆಂಟರ ಪ್ರಾಯ
ನನ್ನಿಂದಾಗುತ್ತಿದ್ದಳು ಅವಳು ಆಗಾಗ ಮಾಯಾ
ನಾ ಕಂಡ ಹುಡುಗಿಯರಲ್ಲಿ ನನಗವಳೇ ಅತ್ಯಂತ ಪ್ರಿಯ

ಅಚ್ಚ ಹಸಿರಿನ ಮದ್ಯೆ ನಿಂತು ಮೆಚ್ಚಿದಲ್ಲೇ ನನ್ನ ಓ ನಲ್ಲೇ
ಈಗೇನಾಯ್ತು ಕಟ್ಟುತಿರುವೆಯಲ್ಲ ನನ್ನ ಪ್ರೀತಿಗೆ ಬೆಲೆ
ಎಲ್ಲರಿಗಿಂತ ವಿಶ್ವಾಸ ಇಟ್ಟಿದ್ಡನಲ್ಲೇ ನಿನ್ನ ಮೇಲೆ
ನೀನೀಗ ಕೊಟ್ಟ ಕಾಣಿಕೆಗೆ ಮೈಯೆಲ್ಲಿ ಹುಕ್ಕುತ್ತಿದೆ ಬೆಂಕಿ ಜ್ವಾಲೆ.|

                              ಸೋಮೇಶ್ ಗೌಡ


(20)    ರಾಜಕೀಯ


ಸಿಗುವುದಿಲ್ಲವಿಲ್ಲಿ ನಮಗೆ ಉತ್ತಮವಾದ ನ್ಯಾಯ
ಕೊಳೆತ ಹೆಣದಂತಾಗಿದೆ ನನ್ನ ರಾಜಕೀಯ
ಬಟ್ಟೆಕಟ್ಟಿಕೊಂಡು ನಿಂತಿಹಳು ಕಣ್ಣಿಗೆ,ನ್ಯಾಯ ದೇವತೆ
ಅಪರಾಧಿಗಳು ಮಾಡೋ ಕೆಟ್ಟ ಕೆಲಸ ಅವಳೀಗೆ  ಕಂಡೀತೆ

2012 ಆದರೂ ಅಭಿವೃದ್ದಿಯಾಗಲಿಲ್ಲ ನಮ್ಮ ಬೆಂಗಳೂರು
ಇದೆಲ್ಲಾ ರಾಜಕೀಯದಿಂದಾದ ಗೋಳು
ಇದು ಕೆಂಪೆಗೌಡ್ರು ಕಟ್ಟಿದ ಊರು
ಆ ಕಾರಣಕ್ಕಿನ್ನು ಕಿಡಿಗೇಡಿಗಳಿಂದಾಗುತ್ತಿದೆ ಪಾರು

ನಮ್ಮ ರಾಜಕೀಯ ನಮ್ಮ ರಾಜಕೀಯ
ಮತದ ಸಮಯದಲ್ಲಿ ಮಾತ್ರ ಸಿಗುವುದು ನಮಗೆ ಸಹಾಯ
ಗೆದ್ದ ಮೇಲೆ ಮಾಡುವುದೊಂದೇ ಅವರು ಕಪ್ಪು ಹಣ ಸಂಗ್ರಹಿಸುವ ಉಪಾಯ
ಸರಿಯೋಗದೆಂದು ನಮ್ಮ ರಾಜಕೀಯ ನೀನೆ ನೋಡಯ್ಯ.|

                                             ಸೋಮೇಶ್ ಗೌಡ



(21) ಕನ್ನಡ ನುಡಿ ಕನ್ನಡ ನುಡಿ
       ಕನ್ನಡವೆಂದರೆ ಮೆರೆದಾಡಿ.


ಕನ್ನಡ ನುಡಿ ಕನ್ನಡ ನುಡಿ
ಕನ್ನಡವೆಂದರೆ ಮೆರೆದಾಡಿ.
ಸಾಹಿತ್ಯದ ಬೀಡು ಕನ್ನಡ ನಾಡಿದು
ಕವಿಚಕ್ರವರ್ತಿಗಳು ನೆಲೆಸಿದ ಬೀಡಿದು
ಕನ್ನಡ ನುಡಿ ಕನ್ನಡ ನುಡಿ ಕನ್ನಡವೆಂದರೆ ಮೆರೆದಾಡಿ

ಸಾಹಿತ್ಯಕ್ಕೆಂದು ದಕ್ಕೆಯಿಲ್ಲ
ಸಂಸ್ಕೃತಿಯೆಂದು ಮರೆತಿಲ್ಲ
ಗಂಧದ ನಾಡಿದು ಚಿನ್ನದ ಬೀಡು
ಬಸವಣ್ಣನವರು ಜನಿಸಿದ ಈ ನಾಡು
ಕನ್ನಡ ನುಡಿ ಕನ್ನಡ ನುಡಿ ಕನ್ನಡವೆಂದರೆ ಮೆರೆದಾಡಿ

ಸರ್ವಜ್ಞನು ಬೆಳೆದ ಕನ್ನಡ ನಾಡು
ಕುವೆಂಪು ಕವಿತೆಗಳ ಕಲೆ ಬೀಡು
ರಾಜ್‍ಕುಮಾರ್ ನಟಿಸಿ ಬೆಳೆಸಿದ ನಾಡಿದು
ಸಿ ಅಶ್ವಥ್ ಹಾಡಿ ಹೊಗಳಿದ ಬೀಡಿದು
ಕನ್ನಡ ನುಡಿ ಕನ್ನಡ ನುಡಿ
ಕನ್ನಡವೆಂದರೆ ಮೆರೆದಾಡಿ ಕನ್ನಡವೆಂದರೆ ಮೆರೆದಾಡಿ .|
ಜೈ ಕರ್ನಾಟಕ ಮಾತೆ

                                         ಸೋಮೇಶ್ ಗೌಡ

(22) ನಮ್ಮೂರು


ಭೂಮಂಡಲವೆಲ್ಲಾ ಸುತ್ತಿ ಬಂದರು ಸಿಗಲಿಲ್ಲ ನನಗೆ ನಮ್ಮೂರ ಪ್ರೀತಿ
ನಾನಿನ್ನೂ ಕಲಿತಿಲ್ಲ ನಮ್ಮವರನ್ನು ಬಿಟ್ಟು ಬದುಕೋ ರೀತಿ
ನಮ್ಮ ಜನರೇ ಚೆಂದ, ನಮ್ಮ ನುಡಿಯೇ ಚೆಂದ
ನಾವೆಲ್ಲ ಸೇರಿ ಹಬ್ಬ ಆಚರಿಸುವ ಬಗೆ ಬಲುಚೆಂದ 

ಪ್ರೀತಿಯೆಂಬಾ ಮಾತಿನಲ್ಲೇ ಉಣಬಡಿಸುತ್ತಾರೆ ಊಟ
ಖುಷಿಯಾಗುತ್ತದೆ ಗೆಳೆಯರ ಜೊತೆ ಸೇರಿ ಆಡುವಾಗ ಆಟ
ದೇವನಿಲ್ಲ ಗುಡಿಯಲ್ಲಿ ಅವನಿರುವುದು ನಮ್ಮೂರ ಜನರ ಮನದಲ್ಲಿ
ನಮ್ಮ ಜನಕ್ಕೆಂದು ಬಡತನ ಬಂದಿಲ್ಲ ಪ್ರೀತಿಯಲ್ಲಿ

ಸಂಬಳಕ್ಕಾಗಿ ಕಾಯುವುದಿಲ್ಲ ಬರಲೇಬೇಕೆಂದು ಮಾಸ
ಬುದ್ದಿವಂತನಾಗಲು ಓದಲೇಬೇಕೆಂದಿಲ್ಲ ಕೋಶ
ಹೃದಯವಂತ ಜನ್ನಕ್ಕೀಗ ನಾನೇನ ನೀಡಲಿ
ಈ ಪ್ರೀತಿ ವಿಶ್ವಾಸ ಎಂದೆಂದಿಗೂ ಹೀಗೆ ಇರಲಿ.|

                             ಸೋಮೇಶ್  ಗೌಡ

(23) ಅಘೋರ

ಮೆಲ್ಲನೆ ನುಡಿ ಮೆಲ್ಲನೆ
ನಿನ್ನ ಪ್ರೀತಿಗೆ ನಾನೀಗ ಸೋತಿದೆ
ಹಕ್ಕಿಗೆ ಹಾರೋ ಹಕ್ಕಿಗೆ 
ಚಿಂತೆಯಿಲ್ಲದೆ ಹಾರಡಬಲ್ಲದೆ
ಮುಗಿಲ ಮೇಲೂ ನಿನ್ನ ಹಾಡ ನಾನು ಕೇಳಿದೆ
ಪ್ರೀತಿ ಹೆಸರಿನಲ್ಲಿ ಅಲ್ಲೂ ರಕ್ತ ಸುರಿದಿದೆ
ಹುಟ್ಟೋ ಪ್ರೀತಿಗೇಕೆ ಇಂತ ಘೋರ ಶಾಪವೋ
ಮೆಟ್ಟಿನಿಂತ ಪ್ರೇಮಿಗಳ ಪರೀಕ್ಷಿಸುವ ಆಟವೋ
ನಿನ್ನ ನೊಟ ಮರೆತ ಒಂದ ನೆನಪ ತಂದಿದೆ
ಬಿಡದೆ ನಿನ್ನ ಪ್ರೀತಿ ಮಾಡೋ ಆಸೆ ಬಂದಿದೆ
ಮೆಲ್ಲಗೆ ನುಡಿ ಮೆಲ್ಲಗೆ
ನಿನ್ನ ಪ್ರೀತಿಗೆ ನಾನೀಗ ಸೋತಿದೆ.|

                  ಸೋಮೇಶ್ ಗೌಡ

(24)       ತಿಗಣೆ

ತಿಗಣೆಗಳಿಂದ ಕಡಿಸಿಕೊಂಡವರಿಗೆ ಗೊತ್ತು
ನಿದ್ದೆ ಗೆಟ್ಟ ಆ ಸವಿ ಹೊತ್ತು
ಕಚ್ಚಿದಾಗೆಲ್ಲಾ ಎದ್ದೆದ್ದು ಕೆರೆದಾಗ
ಎಲ್ಲಿಂದಲೋ ಇದ್ದ ಮಜ ಬರುತ್ತಿತ್ತು

ಮತ್ತೆ ಮತ್ತೆ ಕಚ್ಚಿ ಕಾಡಿದಾಗ
ಕೆರೆದ ಜಾಗದಲ್ಲೆಲ್ಲಾ ಹುಣ್ಣೊ0ದು ಬಿದ್ದಿತ್ತು
ಕೋಪಗೊಂಡು ಹೆದರಿ ಚಾಪೆಯನ್ನೆಲ್ಲಾ ಒದರಿ
ಮಲಗಿದಾಗ ಮತ್ತೆ ಮುತ್ತಿಕ್ಕುತ್ತಿತ್ತು

ಮುಖದ ಮೇಲೆ ಏನೋ ಹರಿದಂತಾಗಿ
ಕೈ ಹಾಕುತ್ತಿದ್ದಂತೆ ಹೀರಿದ್ದ ರಕ್ತವು ಅಂಟುತಿತ್ತು
ಹೇಗೇಗೊ ಮಾಡಿ ಒದ್ದಾಡಿ ಗುದ್ದಾಡಿ
ಮಂಪರು ನಿದ್ದೆ ಬರುವಷ್ಟರಲ್ಲಿ ಬೆಳಕೇ ಆಗಿತ್ತು
ಕಡಿಸಿಕೊಂಡವರಿಗೆ ಗೊತ್ತು ತಿಗಣೆ ತಂದ ಆಪತ್ತು.|

                ಸೋಮೇಶ್ ಗೌಡ


(25)   ವಿದ್ಯಾಭ್ಯಾಸ  


ನಾವು ನೀವೆಲ್ಲಾ ಶಿಕ್ಷಣಕ್ಕಾಗಿ ನೀಡೋಣ ಪ್ರೋತ್ಸಾಹ
ಮಕ್ಕಳಿಗೆ ಬರುವ ತನಕ ಉತ್ಸಾಹ
ಓದಿನ ಜೊತೆಗಿರಲಿ ಕ್ರೀಡೆ ಕಲೆಯ ಹವ್ಯಾಸ
ಸ್ಪರ್ಧೆಯೊಂದಿಗೆ ನಡೆಯುತ್ತಿರಲಿ ನಿಮ್ಮ ವಿದ್ಯಾಭ್ಯಾಸ

ಮರೆಯದಿರಿ ಎಂದು ಗುರುಗಳಿಗೆ ಕೊಡುವ ಗೌರವ
ಗಿಟ್ಟಿಸಿಕೊಳ್ಳುತ್ತಿರಾಗ ಕೊಟ್ಟ ಗೌರವಕ್ಕೆ ತಕ್ಕ ಸ್ಥಾನವ
ಮನಸ್ಸೆಂಬ ಮಂದಿರದಲಿ ಪುಸ್ತಕವನ್ನಿಟ್ಟು ಪೂಜಿಸಿ
ವಿದ್ಯಾ ಸರಸ್ವತಿಯನ್ನು ಪ್ರೀತಿಯಿಂದ ಆರಾದಿಸಿ

ಕಸದಿಂದ ತೆಗೆಯಬೇಕು ರಸವನ್ನ
ಮಾತಿನಲ್ಲೇ ಕಟ್ಟಬೇಕು ಚಕ್ರವ್ಯೂಹನ
ಕಳೆದ ದಿನವ ಮೆಲುಕು ಹಾಕುತ್ತಾ, ಬರುವ ದಿನದ ಕನಸ ಕಾಣುತ್ತಾ
ಸಾಗಬೇಕು ನೀವು ಜನ ಮೆಚ್ಚೋ ಭವಿಷ್ಯದತ್ತ

                              ಸೋಮೇಶ್ ಗೌಡ

(26) ಬುದ್ದಿಯೇ ಇಲ್ಲದೆ ಕಾರ್ಯವು ಸಾಗುವುದೇ..


ಚಿತ್ರದಿ ಕೊಳಲನು ಬಿಡಿಸಿದರೇನು ನುಡಿಸಲು ಆಗುವುದೇ
ಕಲ್ಲಲಿ ಮೂರ್ತಿಯ ಕೆತ್ತಿದರೇನು ಜೀವವ ತುಂಬುವುದೇ
ಸುಂದರ ವನದಲಿ ಚೆಂದದ ಹಕ್ಕಿಗೆ
ಬೆಳ್ಳಿ ಪಂಜರವಿಟ್ಟರೇನು ಬಂದು ಕೂರುವುದೇ

ಅಂತೆಯೇ ಹೃದಯವು ಇಲ್ಲದ ಹೆಸರಿಗೆ ಜಾಗವ ನೀಡುವುದೇ
ಬಣ್ಣದ ಬಾಗಿಲ ಇಟ್ಟರು ಏನು ಕಷ್ಟವು ತಪ್ಪುವುದೇ
ಶಾಂತಿಯೇ ಇಲ್ಲದ ಜೀವನದಲ್ಲಿ ಪ್ರೀತಿಯು ಹುಕ್ಕುವುದೇ
ಕಣ್ಣಿಗೆ ಕಾಣದ ಕತ್ತಲಿನಲ್ಲಿ ದೀಪವು ಸಿಕ್ಕುವುದೇ 

ರಸವೇ ಇಲ್ಲದ ಹೂವಿನ ಮೇಲೆ ದುಂಬಿಯು ಕೂರುವುದೇ
ಎಳೆಯೇ ಇಲ್ಲದ ಮರದ ಕೆಳಗೆ ಜೋಗುಳ ಕಟ್ಟುವುದೇ
ನಿದ್ದೆಯೇ ಬಾರದ ಮುದ್ದು ಮಗುವಿಗೆ ಗೊಂಬೆಯ ನೀಡುವುದೇ
ಎಲ್ಲಾ ಇದ್ದರೇನು ಬುದ್ದಿಯೇ ಇಲ್ಲದೆ ಕಾರ್ಯವು ಸಾಗುವುದೇ..

                                  ಸೋಮೇಶ್ ಗೌಡ

(27)    ಜನ್ಮದಾತರು

ಮುದುಕನಾದರೇನು ಮುದುಕಿಯಾದರೇನು
ಯೌವನದಲ್ಲಿ ಜೀವನದ ಸುಖ ನೀಡಿಲ್ಲವೇನು
ಮರ ಮುದಿಯಾಯ್ತೆಂದು ಕಡಿಯುವುದು ಸರಿಯೇನು
ಹಸುವು ಸತ್ತರೇನು ಇರುವತನಕ ಹಾಲುಣಿಸಿಲ್ಲವೇನು

ನಿನ್ನದಲ್ಲದ ವಸ್ತುವನ್ನು ಅಲಂಕರಿಸಿ ಪ್ರಯೋಜನವೇನು
ನಿನ್ನ ಜನ್ಮದಾತರ ಅರಿಯದ ನೀನು 
ಬದುಕಿ ಸಾದಿಸುವುದಾದರು ಏನು
ಇರುವತನಕ ರಾಮನಂತೆ ಬದುಕುವುದ ಕಲಿ ನೀನು

ಜನ್ಮದಾತರೆಂದೂ ಹಾರೈಸುವ ಬಂಧು
ನೀನೇಕೆ ಮುರಿಯಲು ನಿಂತಿರುವೆ ಆ ಬಂಧವನ್ನು
ಶ್ರವಣನಂತೆ ಆಗದಿದ್ದರೂ ನೀನು
ತಂದೆ ತಾಯಿಗಳಿಗಾಗಿ ಶ್ರಮಿಸುವ ಮಗನಾಗಿ ಬದುಕಿನ್ನೂ.|

                             ಸೋಮೇಶ್ ಗೌಡ

(28)  ಗ್ರಾಮ ಯೋಧ

ಅನ್ನದಾತನು ರೈತನೊಬ್ಬನು
ದೇಶಕ್ಕಾಗಿ ಬೆವರ ಸುರುಸಿ ದುಡಿಯುತ್ತಿರುವನು 
ಕಳೆದ ದಿನದಲ್ಲೂ ಸುಖವ ಕಾಣುತ್ತಾ
ಫಸಲಿನಲ್ಲಿ ಬರುವ ಫಲವ ಬಯಸಿ ಕಾಯುತ್ತಿರುವನು

ಮಳೆಯ ಕಾದು ಹೊಲವ ಬಿತ್ತಿ ಬೆಳೆಯ ಬೆಳೆವನು
ನಮಗೆಲ್ಲಾ ಅನ್ನನೀಡೊ  ಪ್ರೀತಿ ಪಾತ್ರನು
ಬೆಳೆವ ಪೈರಲ್ಲೂ ಕೀಳೊ ಕಳೆಯಲ್ಲೂ
ಒಂದೇ ಶ್ರಮದಿ ದುಡಿದ ಗ್ರಾಮ ಯೋಧನು

ಒಳ್ಳೇ ಬೆಲೆಯೂ ಸಿಗದೆ ಫಲವ ಉಳಿಸಲಾಗದೆ ಎಂತೋ ಮಾರ್ವನು
ಸಿಕ್ಕ ಬೆಲೆಗೂ ಬೆನ್ನ ತಟ್ಟಿ ಹೆಮ್ಮೆ ಪಡುವನು
ಕಳೆದ ವರ್ಷ ಪಟ್ಟ ಕಷ್ಟವನೆಲ್ಲಾ ಮರೆವನು
ಹೊಸ ಬೆಳೆಗೆ ನೇಗಿಲೊತ್ತು ಮತ್ತೆ ನಡೆವನು
ನಮ್ಮ ರೈತನು ಅವನೇ ಅನ್ನದಾತನು.|

                      ಸೋಮೇಶ್ ಗೌಡ

(29)  ಮಹಾಪುರುಷ

ಮಹಾತ್ಮನೆ ಯೋಗಪುರುಷನೇ ಗಾಂಧಿ ತಾತನೆ
ಸವ್ಯಸಾಚಿಯಾಗಿ ದುಡಿದ ಮಹಾಪುರುಷ ನೀನೆ
ಸ್ವಾತಂತ್ಯಕ್ಕಾಗಿ ಪ್ರಾಣತೆತ್ತ ಹುತಾತ್ಮನೆ
ಭೂಲೋಕದಲ್ಲಿ  ಜನಿಸಿದಂತ ದೇವಮಾನವನು ನೀನೆ

ಹಗಲು ಇರುಳು ಶ್ರಮಿಸಿದೆ ನೀನು
ಸ್ವಾತಂತ್ಯಕ್ಕಾಗಿ ದಣಿದಿದೆ ನೀನು
ನಿನ್ನನು ಪೂಜಿಸೋ ಭಾರತೀಯರು
ವರವನು ಪಡೆದ ಸೌಖ್ಯಧಾತರು

ದಾರವ ಹೆಣೆಯುತ ತನ್ನ ಕೆಲಸವ ತಾನೆ ಮಾಡುತ
ದೇಶದ ಏಳಿಗೆಗೆ ಹೋರಾಡಿದ ವೀರನೆ
ಜನರಲಿ ಧೈರ್ಯವ ತುಂಬುತಾ ಪಕ್ಷವ ಕಟ್ಟುತಾ
ಸ್ವಾತಂತ್ಯ ತಂದಿಟ್ಟ ಭಾರತದ ರಾಷ್ಟಪಿತನೆ ಓ ಗಾಂಧಿ ತಾತನೆ.|

                           ಸೋಮೇಶ್ ಗೌಡ


(30)  ಸ್ವಾರ್ಥ


ಹೃದಯವೆಂಬಾ ಕಲ್ಲು ಬಂಡೆಯೂ ಸಿಡಿಲಿಗೆ ಸಿಕ್ಕಿ ಚೂರಾಯ್ತು
ಮನಸ್ಸೆಂಬ ಸೂಕ್ಷ್ಮ ಹತ್ತಿಯು ಬೆಂಕಿಗೆ ಸಿಕ್ಕಿ ಸುಟ್ಟೋಯ್ತು
ಇನ್ನೇನಿದೆ ನನ್ನ ಬಾಳಲಿ ನೆನಪೆಲ್ಲ ಬೂದಿಯಾಯ್ತು
ಕಾಣೊ ಕನಸಿಗೊಂದು ಅಡ್ಡ ಗೋಡೆ ಕಟ್ಟಾಯ್ತು

ಕಣ್ಣೇ ಕಾಣದ ಕುರುಡನಾದೆ ನಾನು
ಮಾತೆ ಬಾರದ ಮುಖನಾದೆ ನಾನು
ಕೆಟ್ಟ ಸಮಾಜದ ಸ್ವಾರ್ಥಕ್ಕೆ ಸಿಕ್ಕಿ
ಬದುಕನ್ನು ಅವರಿಸಿದೆ ಸುಡುವ ಬೆಂಕಿ

ಕಂಡಿದ್ದೆ ಒಂದು ಆಗಿದ್ದೆ ಇನ್ನೊಂದು
ಬದುಕ್ಕಿದ್ದು ಸತ್ತಂತೆ ನಾನಿರುವೆ ಇಂದು
ನಾ ದೇವರಲ್ಲಿ ಕೇಳುವುದು ಒಂದೇ
ಯಾರಿಗೂ ಕೊಡದಿರು ಅತಿಯಾದ ಸ್ವಾರ್ಥ ಓ ತಂದೆ.|

                                 ಸೋಮೇಶ್ ಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ