ಶನಿವಾರ, ಜುಲೈ 7, 2012

(2) ಹುಚ್ಚು ಹುಡುಗನ ಮೆಚ್ಚುವಂತ ಪ್ರೀತಿ 



ನನ್ನ  ಒಲವನು ನಿನ್ನ ಹೆಸರಲಿ ಬರೆದಾಗಿದೆ ಈ ಮನ,
ನೀ ಇಲ್ಲದೇ ಇರಲಾರೆ ನಾ ಒಂದು ಕ್ಷಣ,
ಒಲವೆ ಜೀವನ ಆ ಜೀವವೇ ನೀನೇನಾ,
ನಿನ್ನ ಈ ಪ್ರೀತಿನ ನಾ ಮರೆಯಲು ಸಾಧ್ಯಾನ.

ನನ್ನ ಈ ನಗೂವಿಗೂ ನಿನ್ನ ಈ ಪ್ರೀತಿಯೇ ಕಾರಣ
ನೀ ಪ್ರೀತಿಸಿ ನನ್ನ,  ಎಲ್ಲಿ ಹೋದೆ ನೀ ಈ ದಿನ,
ಬಾರೆ ಗೆಳತಿಯೇ ನಾ ಹುಡುಕಲಾರೆ ನಿನ್ನ,
ಈ ಬದುಕನು ನಿನಗಾಗಿ ಅರ್ಪಿಸುವೆ ಓ ಚಿನ್ನ.

ನೀನು ಇಲ್ಲದೇ ನಾನೇಗೆ ಕಳೆಯಲಿ ಈ ದಿನ,
ಓ ಪ್ರೇಮವೇ ನೀ ಕೊಂಧೆಯಲ್ಲೇ ನನ್ನ,
ನಿನ್ನ  ಉಸಿರಲ್ಲೂ ಬಂದು ಕಾಡುವೆ ನಾ ನಿನ್ನ,
ಬಿಡೆನು ನಿನ್ನನು ನೀ ಮರೆತರು ನನ್ನ.

ಓ ಮನವೇ ಇಂದು ಬಾಡಿಹೋಯ್ತು ನನ್ನ ಈ ಪ್ರೇಮ,
ನನ್ನ ಈ ಕ್ಷಣ ಇಂದು ನನಗೂ ಬೇಡವಾಯ್ತು ಈ ದಿನ,
ಓ ದೇವರೇ ಇದೆಲ್ಲಾ ನೀ ಮಾಡಿದ ಕುತಂತ್ರಾನ!
ಅಂತೂ ಮುಗಿಸಿದೆ ನನ್ನ ಈ  ಹುಚ್ಚು ಪ್ರೀತಿನಾ......

                              ಸೋಮೇಶ್  ಗೌಡ.

2 ಕಾಮೆಂಟ್‌ಗಳು:

  1. ತುಂಬಾ ಚೆಂದ ಬರೀತಿರಿ ಸರ್...ಸಾಹಿತ್ಯ ಪಯಣ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ.

    ಪ್ರತ್ಯುತ್ತರಅಳಿಸಿ
  2. ತುಂಬಾ ಚೆಂದ ಬರೆಯುತ್ತೀರಿ ಸರ್. ಹೀಗೆ ಸಾಗಲಿ ನಿಮ್ಮ ಸಾಹಿತ್ಯ ಪಯಣ ಉತ್ತಮ ಉನ್ನತಿಯ ಕಡೆಗೆ

    ಪ್ರತ್ಯುತ್ತರಅಳಿಸಿ