ಶನಿವಾರ, ಜುಲೈ 7, 2012


(3)ತಾಯಿಯೆಂಬ ಕಲ್ಪವೃಕ್ಷ 


ನಾನೊಂದು ಮರವಾಗಿ  ನಿನ್ನೆದುರು ಜಾಲಿ ಗಿಡವಾದೆ

ನೀ ನಕ್ಕಾಗೆಲ್ಲಾ ನಾ ಬುಸುಗುಡುವ ಹಾವಾದೆ

ನಿನ್ನ ಸುಖವ ಬಯಸದ ನಾನು ಪಾಪಿಯಾದೆ

ನೀ ಅರಿತರು ನನ್ನ  ನಾ ಅರಿಯಲಿಲ್ಲ ನಿನ್ನ

ಅದಕ್ಕೀಗ ಎಣಿಸುತ್ತಿರುವೆ ನನ್ನ ಪಾಪದ ದಿನಗಳನ್ನ

ಹೇಳು ಮಾತೆ ನನಗೆ ಯಾವಾಗ ಮುಕ್ತಿ

ನೀ ಹೇಳುವ ನುಡಿಯಿಂದ ನನಗೆ ಬರುವುದು ಸ್ಪೂರ್ತಿ|

                                            ಸೋಮೇಶ್ ಗೌಡ

1 ಕಾಮೆಂಟ್‌:

  1. ಚೆನ್ನಾಗಿ ಬರೆದಿದ್ದೀರಿ
    ಪೂರ್ತಿ ಭಾವಗಳು ಮೂಡಿಬರಲು ಇನ್ನೂ ಕೆಲವು ಸಾಲುಗಳ ಅವಶ್ಯಕತೆ ಇದೆ. ಇದು ನನ್ನ ಅನಿಸಿಕೆ

    ಪ್ರತ್ಯುತ್ತರಅಳಿಸಿ