(5) ಸ್ನೇಹ ಪಾಠ
ಸಂಗ ಮಾಡಬೇಕಯ್ಯ ಸಂಗ ನೀ ಮಾಡು ಸಜ್ಜನರ ಸಂಗ
ಮಾಡಿ ದುರ್ಜನರ ಸಂಗ ನಿನ್ನ ಹೆಸರಿಗೆ ತಂದುಕೊಳ್ಳದಿರು ಭಂಗ
ಇದು ದೊಡ್ಡವರು ಹೇಳಿದ ಮಾಣಿಕ್ಯ
ಚಾಚೂ ತಪ್ಪದೇ ಪಾಲಿಸು ನಿನಗೆ ಸಿಗುವುದಾಗ ಸೌಖ್ಯ
ನಿನ್ನ ಸುಖವ ಕಂಡು ಪರರು ಮರುಗದಿರಲಿ
ನಿನ್ನ ದುಃಖವ ಕಂಡು ಯಾರೊಬ್ಬರೂ ಹೀಯಾಳಿಸದಿರಲಿ
ನಿನ್ನ ನಂಬಿದವರಿಗೆ ನೀನಾಗು ರಕ್ಷಕ
ನೀನಾಗ ಮನೆಗೊಬ್ಬ ಶಿಕ್ಷಕ.|
ಸೋಮೇಶ್ ಗೌಡ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ